ಆ್ಯಪ್ನಗರ

ಸಂತ್ರಸ್ತರೊಂದಿಗೆ ಸ್ಪಂದಿಸದಿದ್ದರೆ ಕ್ರಮ: ಸಚಿವ ಬೊಮ್ಮಾಯಿ

ಗುತ್ತಲ: ಸಂತ್ರಸ್ತರೊಂದಿಗೆ ಸ್ಪಂದಿಸಿ ಸಮಸ್ಯೆಗಳನ್ನು ಪರಿಹರಿಸದಿದ್ದರೆ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲು ಸರಕಾರಕ್ಕೆ ಶಿಫಾರಸು ಮಾಡಲಾಗುವುದೆಂದು ಸಚಿವ ಬಸವರಾಜ ಬೊಮ್ಮಾಯಿ ಜಿಲ್ಲಾಧಿಕಾರಿಗಳ ಮೇಲೆ ಹರಿಹಾಯ್ದುರು.

Vijaya Karnataka 25 Aug 2019, 5:00 am
ಗುತ್ತಲ: ಸಂತ್ರಸ್ತರೊಂದಿಗೆ ಸ್ಪಂದಿಸಿ ಸಮಸ್ಯೆಗಳನ್ನು ಪರಿಹರಿಸದಿದ್ದರೆ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲು ಸರಕಾರಕ್ಕೆ ಶಿಫಾರಸು ಮಾಡಲಾಗುವುದೆಂದು ಸಚಿವ ಬಸವರಾಜ ಬೊಮ್ಮಾಯಿ ಜಿಲ್ಲಾಧಿಕಾರಿಗಳ ಮೇಲೆ ಹರಿಹಾಯ್ದುರು.
Vijaya Karnataka Web HVR-24GTL-1


ವರದಾ ನದಿ ಪ್ರವಾಹಕ್ಕೆ ಮತ್ತು ಅತಿಯಾದ ಮಳೆಯಿಂದ ಹಾನಿಯಾದ ಹಾವೇರಿ ವಿಧಾನಸಭಾ ಕ್ಷೇತ್ರದ ಹಳೆ ಮೇಲ್ಮರಿ ಗ್ರಾಮಕ್ಕೆ ಆಗಮಿಸಿ ಬಿದ್ದ ಮನೆಗಳನ್ನು ವೀಕ್ಷಿಸಿ ಪರಿಹಾರ ಕಿಟ್‌ ವಿತರಿಸಿ ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸಿ ಮಾತನಾಡಿ, ಮಳೆಯಿಂದ ಅನೇಕ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ ಅವರಿಗೆ ಬೇಕಾದ ಸೌಲಭ್ಯವನ್ನು ಒದಗಿಸಬೇಕು. ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಮಾತು ಕೇಳಿಬರುತ್ತಿದೆ, ಸಂತ್ರಸ್ತರಿಗೆ ಸ್ಪಂದಿಸುತ್ತಿಲ್ಲ ಎಂಬ ದೂರು ಬರುತ್ತಿದ್ದು, ಸರ್ಮಪಕವಾಗಿ ಎಲ್ಲರೂ ಸಮಸ್ಯಗಳಿಗೆ ಸ್ಪಂದಿಸಬೇಕು ಇಲ್ಲದಿದ್ದರೆ ಕ್ರಮ ಜರುಗಿಸಬೇಕಾಗುತ್ತದೆ ಎಂದು ಹೇಳಿದರು.

ಹಳೇ ಮೇಲ್ಮರಿ ಗ್ರಾಮವನ್ನು ಪ್ರವಾಹದಿಂದ ರಕ್ಷಿಸಲು ಎತ್ತರ ಪ್ರದೇಶಕ್ಕೆ ಸ್ಥಳಾಂತರಿಸಲು ಈಗಾಗಲೇ ಹಾವೇರಿ ಶಾಸಕ ಓಲೇಕಾರ ಅವರಿಗೆ ಜಮೀನು ಗುರುತಿಸಲು ಹೇಳಿದ್ದು ಅದರ ಅಂಗವಾಗಿ ಜಮೀನು ಗುರುತಿಸುವ ಕಾರ್ಯ ಆರಂಭವಾಗಿದೆ. ಸಂತ್ರಸ್ತರು ಭಯ ಪಡುವ ಅಗತ್ಯವಿಲ್ಲ ಅವರ ರಕ್ಷ ಣೆಗೆ ಸರಕಾರ ಇದೆ ಎಂದರು.

ಶಾಸಕ ನೇಹರು ಓಲೇಕಾರ ಮಾತನಾಡಿ, ಈಗಾಗಲೇ ಅನೇಕ ಗ್ರಾಮಗಳಲ್ಲಿ ಮಳೆ ಮತ್ತು ಪ್ರವಾಹಕ್ಕೆ ಮನೆಗಳನ್ನು ಕಳೆದುಕೊಂಡು ಹಾಗೂ ಬೆಳೆಗಳನ್ನು ಕಳೆದುಕೊಂಡ ರೈತರುಗಳಿಗೆ ಪರಿಹಾರ ನೀಡುವಂತೆ ಕ್ರಮ ಜರುಗಿಸಲಾಗಿದೆ ಎಂದರು.

ಕರ್ಜಗಿ, ಕೋಣತಂಬಗಿ, ಕೇಸರಹಳ್ಳಿ, ಹಳೇಮೇಲ್ಮರಿ ಗ್ರಾಮಕ್ಕೆ ಸಚಿವರ ತಂಡ ಆಗಮಿಸಿ ಪರಿಶೀಲಿಸಿತು. ಹಾವೇರಿ ಲೋಕಸಭಾ ಸಂಸದ ಶಿವಕುಮಾರ ಉದಾಸಿ, ಹಾವೇರಿ ಜಿಲ್ಲಾಧ್ಯಕ್ಷ ಶಿವರಾಜ ಸಜ್ಜನರ, ಜಿಪಂ ಸದಸ್ಯ ಸಿದ್ದರಾಜ ಕಲಕೋಟಿ, ಕೆಎಂಎಪ್‌ ಅಧ್ಯಕ್ಷ ಬಸವರಾಜ ಅರಬಗೊಂಡ, ಪಕ್ಷ ದ ವಿವಿಧ ಮುಖಂಡರು ಪಾಲ್ಗೊಂಡಿದರು. ಜಿಲ್ಲಾಧಿಕಾರಿ ಕೃಷ್ಟ ಬಾಜಪೇಯಿ, ತಹಸೀಲ್ದಾರರು ಸೇರಿದಂತೆ ಅನೇಕ ಅಧಿಕಾರಿಗಳು ಸಾತ ನೀಡಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ