ಆ್ಯಪ್ನಗರ

ಹೆಚ್ಚು ಗಿಡಮರ ಬೆಳೆಸಲು ಸಲಹೆ

ಸವಣೂರು: ಪ್ರತಿಯೊಬ್ಬರು ತಮ್ಮ ಮನೆಯ ಸುತ್ತಮುತ್ತಲಿನ ಪರಿಸರವನ್ನು ಸುಚಿಯಾಗಿಟ್ಟುಕೊಂಡಾಗ ಗ್ರಾಮದ ಸ್ವಚ್ಚತೆ ಸಮರ್ಪಕವಾಗಿ ಆಗಲು ಸಾಧ್ಯವಾಗುತ್ತದೆ ಎಂದು ಕರವೇ ರೈತ ಘಟಕದ ತಾಲೂಕಾಧ್ಯಕ್ಷ ರಾಮಣ್ಣ ಅಗಸರ ಹೇಳಿದರು.

Vijaya Karnataka 20 Nov 2019, 5:00 am
ಸವಣೂರು: ಪ್ರತಿಯೊಬ್ಬರು ತಮ್ಮ ಮನೆಯ ಸುತ್ತಮುತ್ತಲಿನ ಪರಿಸರವನ್ನು ಸುಚಿಯಾಗಿಟ್ಟುಕೊಂಡಾಗ ಗ್ರಾಮದ ಸ್ವಚ್ಚತೆ ಸಮರ್ಪಕವಾಗಿ ಆಗಲು ಸಾಧ್ಯವಾಗುತ್ತದೆ ಎಂದು ಕರವೇ ರೈತ ಘಟಕದ ತಾಲೂಕಾಧ್ಯಕ್ಷ ರಾಮಣ್ಣ ಅಗಸರ ಹೇಳಿದರು.
Vijaya Karnataka Web advice to grow more herbs
ಹೆಚ್ಚು ಗಿಡಮರ ಬೆಳೆಸಲು ಸಲಹೆ


ಸವಣೂರು ತಾಲೂಕಿನ ಬೇವಿನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿಪದವಿ ಪೂರ್ವ ಶಿಕ್ಷಣ ಇಲಾಖೆ, ಸರಕಾರಿ ಬಾಲಕಿಯರ ಪದವಿಪೂರ್ವ ಕಾಲೇಜ ವತಿಯಿಂದ ಜರುಗಿದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರದಲ್ಲಿವಿಜ್ಞಾನ ಮತು ವೈಜ್ಞಾನಿಕ ಮನೋಭಾವನೆ ಹಾಗೂ ಸ್ವಚ್ಚ ಭಾರತ ಅಭಿಯಾನ ಕುರಿತು ಮಾತನಾಡಿದ ಅವರು, ಗಿಡ ಮರಗಳನ್ನು ಬೆಳೆಸಿ ಶುದ್ಧವಾದ ಗಾಳಿಯನ್ನು ಪಡೆದುಕೊಂಡು ಪ್ರತಿಯೊಬ್ಬರು ಆರೋಗ್ಯದಿಂದ ಇರಲು ಸಾಧ್ಯವಾಗುತ್ತದೆ. ಉತ್ತಮ ಪರಿಸರದೊಂದಿಗೆ ದಿನನಿತ್ಯ ಸೇವಿಸುವ ಆಹಾರ, ನೀರನ್ನು ಸೇವಿಸಿದಾಗ ಒಳ್ಳೇಯ ಆರೋಗ್ಯದ ಜತೆಗೆ ಸದೃಢತೆಯನ್ನು ಕಾಯ್ದುಕೊಂಡು ಆರೋಗ್ಯವಂತ ಜೀವನ ಕಾಯ್ದುಕೊಳ್ಳಬೇಕು ಎಂದರು.

ಅಂಗನವಾಡಿ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದಲ್ಲಿಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಬೋದಕ-ಬೋದಕೇತರ ಸಿಬ್ಬಂದಿ ವರ್ಗ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು, ಶಿಬಿರಾರ್ಥಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ