ಆ್ಯಪ್ನಗರ

ಕನ್ನಡ ನುಡಿ ಸಂಭ್ರಮದಲ್ಲಿಕೃಷಿ ಸಮ್ಮೇಳನ

ಅಕ್ಕಿಆಲೂರು: ಇಲ್ಲಿನ ದುಂಡಿಬಸವೇಶ್ವರ ಜನಪದ ಕಲಾಸಂಘದ 29 ನೇ ಕನ್ನಡ ನುಡಿ ಸಂಭ್ರಮದಲ್ಲಿಡಿ. 14 ರಂದು ನಡೆಯಲಿರುವ ಕೃಷಿ ಸಮ್ಮೇಳನದ ಹಿನ್ನೆಲೆಯಲ್ಲಿಸೋಮವಾರ ಸ್ಥಳೀಯ ಗ್ರಾಮದೇವಿ ದೇವಸ್ಥಾನದಲ್ಲಿಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಪೂರ್ವಭಾವಿ ಸಭೆ ನಡೆಸಿದರು.

Vijaya Karnataka 10 Dec 2019, 5:00 am
ಅಕ್ಕಿಆಲೂರು: ಇಲ್ಲಿನ ದುಂಡಿಬಸವೇಶ್ವರ ಜನಪದ ಕಲಾಸಂಘದ 29 ನೇ ಕನ್ನಡ ನುಡಿ ಸಂಭ್ರಮದಲ್ಲಿಡಿ. 14 ರಂದು ನಡೆಯಲಿರುವ ಕೃಷಿ ಸಮ್ಮೇಳನದ ಹಿನ್ನೆಲೆಯಲ್ಲಿಸೋಮವಾರ ಸ್ಥಳೀಯ ಗ್ರಾಮದೇವಿ ದೇವಸ್ಥಾನದಲ್ಲಿಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಪೂರ್ವಭಾವಿ ಸಭೆ ನಡೆಸಿದರು.
Vijaya Karnataka Web agriculture conference on kannada nudity celebration
ಕನ್ನಡ ನುಡಿ ಸಂಭ್ರಮದಲ್ಲಿಕೃಷಿ ಸಮ್ಮೇಳನ


ಸಭೆಯಲ್ಲಿಭಾಗವಹಿಸಿ ಮಾತನಾಡಿದ ರೈತ ಸಂಘದ ತಾಲೂಕಾಧ್ಯಕ್ಷ ಮರಿಗೌಡ ಪಾಟೀಲ, ನಾನಾ ಸಂಕಷ್ಟಗಳಿಂದ ಬಳಲುತ್ತಿರುವ ರೈತ ಸಮೂಹಕ್ಕೆ ಆತ್ಮಸ್ಥೆತ್ರೖರ್ಯ ಮೂಡಿಸುವ ಅಗತ್ಯ ಹೆಚ್ಚಿದೆ. ಈ ನಿಟ್ಟಿನಲ್ಲಿಕೃಷಿ ಸಮ್ಮೇಳನದಂಥ ವೇದಿಕೆಗಳನ್ನು ಸದ್ಭಳಕೆ ಮಾಡಿಕೊಳ್ಳುವ ಅಗತ್ಯವಿದೆ. ಸಮ್ಮೇಳನದಲ್ಲಿಕೃಷಿ ವಿಜ್ಞಾನಿಗಳು ಭಾಗವಹಿಸಲಿದ್ದು, ರೈತರು ಅಗತ್ಯ ಮಾಹಿತಿ ಪಡೆದುಕೊಳ್ಳುವ ಮೂಲಕ ಸುಸ್ಥಿರ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ಮುಂದಾಗಬೇಕಿದೆ ಎಂದು ಹೇಳಿದ ಅವರು ಸಮ್ಮೇಳನ ಯಶಸ್ವಿಗೊಳಿಸಲು ರೈತರ ಸಹಕಾರ ಅಗತ್ಯವಾಗಿದೆ ಎಂದರು.

ರೈತ ಸಂಘದ ನಗರ ಘಟಕದ ಅಧ್ಯಕ್ಷ ಮಹೇಶ ವಿರಪಣ್ಣನವರ ಮಾತನಾಡಿ, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ನೇತೃತ್ವದಲ್ಲಿರೈತ ಸಮ್ಮೇಳನ ನಡೆಯಲಿದೆ. ಹೊಸ ತಳಿಗಳ ಪರಿಚಯ, ಸಾವಯವ ಕೃಷಿ ಪದ್ಧತಿ, ಕೃಷಿಯಲ್ಲಿಆಧುನಿಕತೆಯ ಸ್ಪರ್ಶ ಸೇರಿದಂತೆ ಇನ್ನಿತರ ಸಂಗತಿಗಳ ಬಗೆಗೆ ಉಪಯುಕ್ತ ಮಾಹಿತಿ ಸಿಗಲಿದೆ ಎಂದು ಹೇಳಿದ ಅವರು ಸಮ್ಮೇಳನದಲ್ಲಿ2 ಸಾವಿರಕ್ಕೂ ಹೆಚ್ಚು ರೈತರು ಸೇರುವ ವಿಶ್ವಾಸ ವ್ಯಕ್ತಪಡಿಸಿದರು.

ಸಂಘದ ಜಿಲ್ಲಾಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ, ಪ್ರಮುಖರಾದ ಮಲ್ಲೇಶಪ್ಪ ಪರಪ್ಪನವರ, ಸೋಮಣ್ಣ ಜಡೆಗೊಂಡರ, ಷಣ್ಮುಖಪ್ಪ ಅಂದಲಗಿ, ರಾಜೀವ್‌ ದಾನಪ್ಪನವರ, ಶ್ರೀಕಾಂತ ದುಂಡಣ್ಣನವರ, ಶ್ರೀಧರ ಮಲಗುಂದ, ಸಿದ್ದಲಿಂಗೇಶ್‌ ಸಿಂಧೂರ, ಮಲ್ಲಣ್ಣ ಮತ್ತಿಕಟ್ಟಿ ಸೇರಿದಂತೆ ಇನ್ನೂ ಹಲವರು ಈ ಸಂದರ್ಭದಲ್ಲಿಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ