ಆ್ಯಪ್ನಗರ

ಹೊಲಗಳೆಲ್ಲ ಹಸಿರುಮಯ

ರಟ್ಟೀಹಳ್ಳಿ :ಕಳೆದ 4-5 ವರ್ಷದಿಂದ ಉತ್ತಮ ಮಳೆಯಾಗದೇ ಸರಿಯಾದ ಬೆಳೆ ಕೈಗೆ ಸಿಗದೇ ಸಾಕಷ್ಟು ರೈತರು ನಷ್ಟ ಅನುಭವಿಸಿದ್ದರು. ಈ ವರ್ಷ ಉತ್ತಮ ಮಳೆಯಾಗುತ್ತಿದ್ದು, ಹೊಲಗಳೆಲ್ಲ ಹಸಿರುಮಯವಾಗಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಈಗಾಗಲೇ ಅನೇಕ ರೈತರು ಸಾಲಸೂಲ ಮಾಡಿ ಬೀಜ, ಗೊಬ್ಬರ ತಂದು ಜಮೀನಿಗೆ ಹಾಕಿದ್ದಾರೆ. ಸದ್ಯ ಬೆಳೆಗಳಿಗೆ

Vijaya Karnataka 18 Jul 2018, 5:00 am
ರಟ್ಟೀಹಳ್ಳಿ :ಕಳೆದ 4-5 ವರ್ಷದಿಂದ ಉತ್ತಮ ಮಳೆಯಾಗದೇ ಸರಿಯಾದ ಬೆಳೆ ಕೈಗೆ ಸಿಗದೇ ಸಾಕಷ್ಟು ರೈತರು ನಷ್ಟ ಅನುಭವಿಸಿದ್ದರು. ಈ ವರ್ಷ ಉತ್ತಮ ಮಳೆಯಾಗುತ್ತಿದ್ದು, ಹೊಲಗಳೆಲ್ಲ ಹಸಿರುಮಯವಾಗಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಈಗಾಗಲೇ ಅನೇಕ ರೈತರು ಸಾಲಸೂಲ ಮಾಡಿ ಬೀಜ, ಗೊಬ್ಬರ ತಂದು ಜಮೀನಿಗೆ ಹಾಕಿದ್ದಾರೆ. ಸದ್ಯ ಬೆಳೆಗಳಿಗೆ ಬೇಕಾಗುವಷ್ಟು ಮಳೆ ಆಗುತ್ತಿದೆ. ರೈತರು ಬೆಳೆಗಳಿಗೆ ಔಷಧ, ಗೊಬ್ಬರ ನೀಡುತ್ತಿದ್ದು, ಬೆಳೆಗಳು ಉತ್ತಮವಾಗಿ ಬೆಳೆಯುವುದಕ್ಕೆ ಆರಂಭಿಸಿವೆ. 5-6 ದಿನದಿಂದ ಜಿಟಿ ಜಿಟಿ ಮಳೆಯಾಗುತ್ತಿದ್ದು, ಬೆಳೆಗೆ ಸಾಕಷ್ಟು ಅನುಕೂಲವೂ ಆಗಿದೆ.
Vijaya Karnataka Web all the fields are green
ಹೊಲಗಳೆಲ್ಲ ಹಸಿರುಮಯ


ಈಗ ಹತ್ತಿ, ಗೋವಿನಜೋಳ, ಶೇಂಗಾ, ಈರುಳ್ಳಿ, ಬೆಳ್ಳುಳ್ಳಿ, ಹೆಸರು ಸೇರಿದಂತೆ ಹಲವು ಬೆಳೆಗಳು ಹಸಿರಿನಿಂದ ಕಂಗೊಳಿಸುತ್ತಿವೆ. ಈಗ ಎತ್ತ ನೋಡಿದರೂ ಹಚ್ಚ ಹಸಿರು ಕಾಣುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ