ಆ್ಯಪ್ನಗರ

ಶಾಸಕ ಓಲೇಕಾರಗೆ ಅಂಬಾರಿ ಮೆರವಣಿಗೆ

ಹಾವೇರಿ: ಮುತುವರ್ಜಿವಹಿಸಿ ತಾಲೂಕಿನ ಕನವಳ್ಳಿ ಗ್ರಾಮದಲ್ಲಿದೊಡ್ಡ ಕೆರೆಗೆ ಪೈಪ್‌ಲೈನ್‌ ಮೂಲಕ ನೀರು ತುಂಬಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ನೆಹರು ಓಲೇಕಾರ ಅವರನ್ನು ಆನೆ ಅಂಬಾರಿಯಲ್ಲಿಮೆರವಣಿಗೆ ಮಾಡಲಾಯಿತು. ಪಟಾಕಿ ಅಬ್ಬರ, ಆರ್ಕೆಸ್ಟ್ರಾ, ಯುವಕರ ಕೇಕೆ, ಸಿಳ್ಳೆ, ಕುಣಿತ ಮೆರವಣಿಗೆಯಲ್ಲಿಕಂಡು ಬಂದವು.

Vijaya Karnataka 19 Oct 2019, 5:00 am
ಹಾವೇರಿ: ಮುತುವರ್ಜಿವಹಿಸಿ ತಾಲೂಕಿನ ಕನವಳ್ಳಿ ಗ್ರಾಮದಲ್ಲಿದೊಡ್ಡ ಕೆರೆಗೆ ಪೈಪ್‌ಲೈನ್‌ ಮೂಲಕ ನೀರು ತುಂಬಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ನೆಹರು ಓಲೇಕಾರ ಅವರನ್ನು ಆನೆ ಅಂಬಾರಿಯಲ್ಲಿಮೆರವಣಿಗೆ ಮಾಡಲಾಯಿತು. ಪಟಾಕಿ ಅಬ್ಬರ, ಆರ್ಕೆಸ್ಟ್ರಾ, ಯುವಕರ ಕೇಕೆ, ಸಿಳ್ಳೆ, ಕುಣಿತ ಮೆರವಣಿಗೆಯಲ್ಲಿಕಂಡು ಬಂದವು.
Vijaya Karnataka Web 18 HAVERI 3 A_23
ಹಾವೇರಿ ತಾಲೂಕಿನ ಕನವಳ್ಳಿಯಲ್ಲಿಶುಕ್ರವಾರ ಕೆರೆಗೆ ನೀರು ತುಂಬಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ನೆಹರು ಓಲೇಕಾರ ಅವರನ್ನು ಆನೆ ಅಂಬಾರಿಯಲ್ಲಿಮೆರವಣಿಗೆ ಮಾಡಲಾಯಿತು.

ಕಾನೂನು ತೊಡಕು ಇದ್ದರೂ ಕನವಳ್ಳಿ ಕೆರೆ ತುಂಬಿಸುವ ಗ್ರಾಮದ ಜನರ ಬಹುದಿನಗಳ ಬೇಡಿಕೆಯನ್ನು ಓಲೇಕಾರ ಸವಾಲಾಗಿ ಸ್ವೀಕರಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರ ವಿರುದ್ಧ ಪೈಪ್‌ ಕಳ್ಳತನ ದೂರು ದಾಖಲಿಸಲು ಗ್ರಾಮೀಣ ಕುಡಿಯುವ ನೀರು ಯೋಜನೆ ಇಲಾಖೆ ನಿರ್ಧರಿಸಿತ್ತು. ಇದೇ ಘಟನೆಗೆ ಸಂಬಂಧಿಸಿದಂತೆ ಅದೇ ಯೋಜನೆ ಪ್ರಭಾರ ಇಇ ಅವರನ್ನು ಸರಕಾರ ಅಮಾನತು ಮಾಡಿದೆ. ಈ ನಡುವೆ, ಕೇಸ್‌ ದಾಖಲಿಸುವ ನಿರ್ಣಯವನ್ನು ಜಿಲ್ಲಾಪಂಚಾಯಿತಿ ಕೈಬಿಟ್ಟಿದೆ. ಇದರ ಮಧ್ಯೆದಲ್ಲಿಯೇ ಕೆರೆ ನೀರು ತುಂಬಿಸುವ ಕಾರ್ಯ ಯಶಸ್ವಿಯಾಗಿರುವುದು ಗ್ರಾಮಸ್ಥರಿಗೆ ಸಮಾಧಾನ ತಂದಿದೆ.

ಗ್ರಾಮಸ್ಥರು ಕೃತಜ್ಞತಾ ಪೂರ್ವಕವಾಗಿ ಶಾಸಕರಿಗೆ ಆನೆ ಅಂಬಾರಿ ಮೆರವಣಿಗೆ ಆಯೋಜಿಸಿದ್ದರು. ಶಾಸಕರ ಬೆಂಬಲಿಗರು, ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು, ಕನವಳ್ಳಿ ಗ್ರಾಮದ ಹಿರಿಯರು, ಯುವಕರು, ಮಹಿಳೆಯರು ಎಲ್ಲರೂ ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ