ಆ್ಯಪ್ನಗರ

ಹುಲ್ಲತ್ತಿಯ ಉದ್ಭವ ಮೂರ್ತಿ ಆಂಜನೇಯ

ರಾಣೇಬೆನ್ನೂರ: ಶ್ರಾವಣ ಮಾಸದಲ್ಲಿ ತಾಲೂಕಿನ ಹುಲ್ಲತ್ತಿ ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಪ್ರತಿ ಶನಿವಾರ ದೇವರಿಗೆ ವಿಶೇಷ ಪೂಜೆ ಹಾಗೂ ದಾನಿಗಳ ನೆರವಿನಿಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗುತ್ತದೆ. ಪ್ರತಿ ವರ್ಷ ಶ್ರಾವಣ ಮಾಸ ಪ್ರಾರಂಭವಾಗುವ ಪೂರ್ವದಲ್ಲಿ ಬರುವ ಸೋಮವಾರದಿಂದ ಪಲ್ಲಕ್ಕಿ ಹೊರಟು ರಾಣೇಬೆನ್ನೂರಿನ ಅಡವಿ ಆಂಜನೇಯ ದೇವಸ್ಥಾನದವರೆಗೆ ತೆರಳಿ ಮರಳಿ ಸ್ವಸ್ಥಾನಕ್ಕೆ ಬಂದು ಸೇರುತ್ತದೆ. ಆ ದಿನ ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆ ಮಾಡಿರುತ್ತದೆ.

Vijaya Karnataka 11 Aug 2019, 5:00 am

Vijaya Karnataka Web anjaneya is the embodiment of grass roots
ಹುಲ್ಲತ್ತಿಯ ಉದ್ಭವ ಮೂರ್ತಿ ಆಂಜನೇಯ

ದೇವಸ್ಥಾನಕ್ಕೆ ಸುಮಾರು 154 ವರ್ಷಗಳ ಇತಿಹಾಸವಿದ್ದು ಆಂಜನೇಯಸ್ವಾಮಿ ಭಕ್ತರ ಪಾಲಿನ ಆರಾಧ್ಯ ದೈವವಾಗಿದ್ದಾನೆ. ಗ್ರಾಮದ ಪೂಜಾರ ಮನೆತನದವರು ಹೊಲದಲ್ಲಿ ಉಳುಮೆ ಮಾಡುತ್ತಿದ್ದಾಗ ಆಂಜನೇಯಮೂರ್ತಿ ಸಿಕ್ಕಿದೆ. ಅದನ್ನು ತಂದು ಈಗ ದೇವಸ್ಥಾನವಿರುವ ಸ್ಥಳದಲ್ಲಿ ಪ್ರತಿಷ್ಠಾಪನೆ ಮಾಡಿದ್ದಾರೆ.

ವೈವಿಧ್ಯಮಯ ಪೂಜೆ: ಹನುಮ ಜಯಂತಿಯಂದು ದೇವರಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಎಲಿ ಪೂಜೆ ಕೈಗೊಳ್ಳಲಾಗುತ್ತದೆ.

ಕಾರ್ತಿಕ ಮಾಸದ ಹುಣ್ಣಿಮೆ ಪೂರ್ವದಲ್ಲಿ ಬರುವ ಸೋಮವಾರದಂದು ಕಾರ್ತಿಕೋತ್ಸವ ಜರಗುತ್ತದೆ. ಅದಕ್ಕಾಗಿ ದೇವಸ್ಥಾನವನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿರುತ್ತದೆ. ಪುರವಂತರಿಂದ ದೇವರ ಕುರಿತು ಒಡಪು ಹಾಗೂ ರಾತ್ರಿ ನಾಟಕ ಏರ್ಪಡಿಸಲಾಗುತ್ತದೆ.

ತೊಟ್ಟಿಲು ಪೂಜೆ: ಮಕ್ಕಳಾಗದ ದಂಪತಿಗಳು ದೇವಸ್ಥಾನದಲ್ಲಿರುವ ತೊಟ್ಟಿಲಿಗೆ ಪೂಜೆ ಸಲ್ಲಿಸಿದರೆ ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ ಎಂಬ ಪ್ರತೀತಿಯಿದೆ. ಅನೇಕ ಭಕ್ತರು ಈಗಾಗಲೇ ದೇವರಲ್ಲಿ ಪ್ರಾರ್ಥಿಸಿ ಮಕ್ಕಳನ್ನು ಪಡೆದಿದ್ದಾರೆ.

ಯುಗಾದಿಯಂದು ಹೋಳಿ: ರಾಜ್ಯದ ಎಲ್ಲಾ ಭಾಗಗಳಲ್ಲಿ ಹೋಳಿ ಹುಣ್ಣಿಮೆ ಸಮಯದಲ್ಲಿ ಬಣ್ಣದಾಟ ಆಡಿದರೆ ಇಲ್ಲಿ ಮಾತ್ರ ಯುಗಾದಿ ದಿನದಂದು ಓಕುಳಿಯಾಡುತ್ತಾರೆ. ಹೀಗಾಗಿ ಇಲ್ಲಿ ನಡೆಯುವ ಹೋಳಿಯೆ ಹೋಳಿ ಹಬ್ಬಕ್ಕೆ ಕೊನೆಯದಾಗಿರುತ್ತದೆ.

ದೇವಸ್ಥಾನ ನಿರ್ಮಿಸಿದ ಪ್ರಾರಂಭದ ದಿನಗಳಲ್ಲಿ ಸ್ವಾಮಿಯ ಹೆಸರಿನಲ್ಲಿ ತೇರು ಎಳೆಯಲಾಗುತ್ತಿತ್ತು. ಒಂದು ಬಾರಿ ತೇರು ಎಳೆಯುವಾಗÜ ಅದು ಆಯತಪ್ಪಿ ಗುಂಡಿಗೆ ಬಿದ್ದಿತ್ತು. ಅಂದಿನಿಂದ ತೇರು ಎಳೆಯುವುದನ್ನು ಕೈಬಿಡಲಾಗಿದೆ.

ರಾಜ್ಯದ ವಿವಿಧ ಭಾಗಗಳ ಭಕ್ತರು: ಆಂಜನೇಯಸ್ವಾಮಿಗೆ ಸ್ಥಳೀಯ ಜಿಲ್ಲೆ ಸೇರಿದಂತೆ ಬೆಂಗಳೂರು, ಮೈಸೂರು, ಹಾಸನ ಜಿಲ್ಲೆಗಳ ಭಕ್ತರು ಇದ್ದಾರೆ. ಅವರೆಲ್ಲ ಪ್ರತಿವರ್ಷವೂ ತಪ್ಪದೇ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದುಕೊಂಡು ತೆರಳುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ