ಆ್ಯಪ್ನಗರ

ಮನಸಿದ್ದರೆ ಏನನ್ನಾದರೂ ಸಾಧಿಸಬಹುದು

ರಟ್ಟೀಹಳ್ಳಿ: 2018-19 ನೇ ಸಾಲಿನಲ್ಲಿಕಾಯಕಲ್ಪ ಕಾರ್ಯಕ್ರಮದಡಿಯಲ್ಲಿತಾಲೂಕಿನ ತಡಕನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪ್ರಶಸ್ತಿ ಲಭಿಸಿತ್ತು. ಇದರ ನಿಮಿತ್ತ ತಡಕನಹಳ್ಳಿ ಗ್ರಾಮದ ಬೊಮ್ಮಲಿಂಗೇಶ್ವರ ಸಮುದಾಯ ಭವನದ ಆವರಣದಲ್ಲಿಶುಕ್ರವಾರ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಆಸ್ಪತ್ರೆಯ ಸಿಬ್ಬಂದಿಗಳಿಗೆ ಅಭಿನಂದನಾ ಸಮಾರಂಭ, ಹಾಗೂ ಕಾಯಕಲ್ಪ ಪ್ರಶಸ್ತಿ ವಿತರಣಾ ಕಾರ್ಯಕ್ರಮ ಜರುಗಿತು.

Vijaya Karnataka 12 Jan 2020, 5:00 am
ರಟ್ಟೀಹಳ್ಳಿ: 2018-19 ನೇ ಸಾಲಿನಲ್ಲಿಕಾಯಕಲ್ಪ ಕಾರ್ಯಕ್ರಮದಡಿಯಲ್ಲಿತಾಲೂಕಿನ ತಡಕನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪ್ರಶಸ್ತಿ ಲಭಿಸಿತ್ತು. ಇದರ ನಿಮಿತ್ತ ತಡಕನಹಳ್ಳಿ ಗ್ರಾಮದ ಬೊಮ್ಮಲಿಂಗೇಶ್ವರ ಸಮುದಾಯ ಭವನದ ಆವರಣದಲ್ಲಿಶುಕ್ರವಾರ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಆಸ್ಪತ್ರೆಯ ಸಿಬ್ಬಂದಿಗಳಿಗೆ ಅಭಿನಂದನಾ ಸಮಾರಂಭ, ಹಾಗೂ ಕಾಯಕಲ್ಪ ಪ್ರಶಸ್ತಿ ವಿತರಣಾ ಕಾರ್ಯಕ್ರಮ ಜರುಗಿತು.
Vijaya Karnataka Web anything can be accomplished if you wish
ಮನಸಿದ್ದರೆ ಏನನ್ನಾದರೂ ಸಾಧಿಸಬಹುದು


ಈ ವೇಳೆ ತಡಕನಹಳ್ಳಿ ಪ್ರಾ.ಆ.ಕೇಂದ್ರ ವೈದ್ಯಾಧಿಕಾರಿ ಡಾ. ಲೋಕೇಶಕುಮಾರ ಅವರು ಮಾತನಾಡಿ, ಭಾರತ ಸರಕಾರದ ಸ್ವಚ್ಛ ಭಾರತ್‌ ಮಿಷನ್‌ದ ಅಂಗವಾದ ಕಾಯಕಲ್ಪ ಕಾರ್ಯಕ್ರಮವು ಸ್ವಚ್ಛತೆ ಹಾಗೂ ಆಸ್ಪತ್ರೆಯ ಗುಣಮಟ್ಟವನ್ನು ಸುಧಾರಿಸಿ ಆಸ್ಪತ್ರೆ ಸರ್ವತೋಮುಖ ಪ್ರಗತಿಗೆ ಪೂರಕವಾಗಿದುದ್ದು. ಈ ನಿಟ್ಟಿನಲ್ಲಿಸ್ವಚ್ಛತೆಯೆಡೆಗೆ ಸಂಕಲ್ಪವನ್ನು ಕೈಗೊಂಡು, ಕಾಯಕಲ್ಪದ ಆಶೆಯಗಳನ್ನು ಸಕಾರಗೊಳಿಸುವಲ್ಲಿ, ಆಸ್ಪತ್ರೆ ಸಿಬ್ಬಂದಿಗಳ ಹಾಗೂ ಆಶಾ ಕಾರ್ಯಕರ್ತೆಯರ ಸೇವೆ,ಶ್ರಮ ಹಾಗೂ ಸಹಕಾರವು ಕಾರಣವಾಗಿದ್ದರಿಂದ ಪ್ರಶಸ್ತಿ ಬರುವುದಕ್ಕೆ ಕಾರಣವಾಗಿದೆ. ಈ ಹಿನ್ನೆಯಲ್ಲಿಸಿಬ್ಬಂದಿಗಳಿಗೆ ಅಭಿನಂದಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಆಯೋಜಿಸದ್ದೆವೆ ಎಂದರು.

ಜಿಲ್ಲಾಆರ್‌ಸಿಎಚ್‌ ಅಧಿಕಾರಿ ಡಾ.ಜಯಾನಂದರವರು ಮಾತನಾಡಿ, ಗ್ರಾಮೀಣ ಪ್ರದೇಶದ ಆಸ್ಪತ್ರೆಯಾಗಿದ್ದರೂ, ಹಲವು ಮೂಲ ಸೌಲಭ್ಯಗಳ ಕೊರತೆ ಇದ್ದರೂ, ಅವುಗಳನ್ನು ಬದಿಗಿಟ್ಟು, ಉತ್ತಮವಾದ ಕಾರ‍್ಯಮಾಡಿ ಪ್ರಶಸ್ತಿಪಡೆಯುವ ಮೂಲಕ ಮನಸಿದ್ದರೆ ಮಾರ್ಗವಿದೆ ಎಂದು ಇಲ್ಲಿನ ಸಿಬ್ಬಂದಿಗಳು ತೋರಿಸಿಕೊಟ್ಟಿದ್ದಾರೆ. ಬರುವ ದಿನಗಳಲ್ಲಿಈ ಆಸ್ಪತ್ರೆ ಇನ್ನೂ ಹೆಚ್ಚಿಗೆ ಸಾಧನೆ ಮಾಡಲಿ ಎಂದು ಹಾರೈಹಿಸಿದರು.

ಜಿಲ್ಲಾಆರೋಗ್ಯ ಇಲಾಖೆಯ ಶ್ರೀಧರ್‌ ಬೆಂಗೇರಿ, ಶಂಭುಲಿಂಗ ಬಣಕಾರ, ಕಾರ್ಯಕ್ರಮದ ವ್ಯವಸ್ಥಾಪಕ ಶಿವಪ್ರಸಾದ, ಆಯುಷ ವೈದ್ಯಾಧಿಕಾರಿ ಡಾ.ಎನ್‌.ಆರ್‌.ಪಾಟೀಲ್‌, ವಿ.ಎಸ್‌.ಉಳಸಂದ್ರ ಮತ್ತಿತರರು ಇದ್ದರು. ಆಸ್ಪತ್ರೆ ಸಿಬ್ಬಂದಿಗಳಿಗೆ, ಆಶಾ ಕಾರ್ಯಕರ್ತೆಯರಿಗೆ ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿಗ್ರಾಮದ ಮುಖಂಡರು, ಅಂಗನವಾಡಿ ಕಾರ್ಯಕರ್ತೆಯರು, ಮತ್ತಿತರರು ಭಾಗವಹಿಸಿದ್ದರು. ವಿ.ಎಸ್‌.ಉಳಸಂದ್ರ ಸ್ವಾಗತಿಸಿದರು, ಜಿ.ಎಸ್‌.ಪಾಟೀಲರು ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ