ಆ್ಯಪ್ನಗರ

ನೆರೆ ಸಂತ್ರಸ್ತರಿಗೆ ನೆರವು

ಕುಮಾರಪಟ್ಟಣ: ಇತ್ತೀಚೆಗೆ ಸುರಿದ ಮಹಾಮಳೆಯಿಂದ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳ ನೆರೆ ಸಂತ್ರಸ್ತರ ಸಂಕಷ್ಟಕ್ಕೆ ಇಟ್ಟಿಗೆ ಭಟ್ಟಿ ಮಾಲೀಕರು, ಗ್ರಾಮಸ್ಥರು ಸಂಗ್ರಹಿಸಿದ್ದ ವಿವಿಧ ಸಾಮಗ್ರಿಗಳನ್ನು ಕಾಗಿನೆಲೆ ಪೀಠದ ಪೀಠಾಧಿಪತಿ ನಿರಂಜನಾನಂದಪುರಿ ಸ್ವಾಮೀಜಿ ಅವರಿಗೆ ಗುರುವಾರ ಹಸ್ತಾಂತರಿಸಿದರು.

Vijaya Karnataka 18 Aug 2019, 5:00 am
ಕುಮಾರಪಟ್ಟಣ: ಇತ್ತೀಚೆಗೆ ಸುರಿದ ಮಹಾಮಳೆಯಿಂದ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳ ನೆರೆ ಸಂತ್ರಸ್ತರ ಸಂಕಷ್ಟಕ್ಕೆ ಇಟ್ಟಿಗೆ ಭಟ್ಟಿ ಮಾಲೀಕರು, ಗ್ರಾಮಸ್ಥರು ಸಂಗ್ರಹಿಸಿದ್ದ ವಿವಿಧ ಸಾಮಗ್ರಿಗಳನ್ನು ಕಾಗಿನೆಲೆ ಪೀಠದ ಪೀಠಾಧಿಪತಿ ನಿರಂಜನಾನಂದಪುರಿ ಸ್ವಾಮೀಜಿ ಅವರಿಗೆ ಗುರುವಾರ ಹಸ್ತಾಂತರಿಸಿದರು.
Vijaya Karnataka Web HVR-17 KPM 03


ಕಾಗಿನೆಲೆ ಶ್ರೀಗಳು ಮಾತನಾಡಿ, ಕವಲೆತ್ತು ಗ್ರಾಮದಿಂದ 100 ಪಾಕೆಟ್‌ ಅಕ್ಕಿ, 225 ಸೀರೆ, 25 ಶರ್ಟ್‌ ಮತ್ತು ಫ್ಯಾಂಟ್‌, ಬಿಸ್ಕಿಟ್‌ ಸಂಗ್ರಹಿಸಲಾಗಿದೆ. ಹೀಗೆæ ಎಲ್ಲಾ ಗ್ರಾಮಗಳಿಂದ ಶ್ರೀಮಠದ ಭಕ್ತರು ಸೇರಿದಂತೆ ಎಲ್ಲ ಸಮಾಜಗಳ ಬಾಂಧವರು ಸಂತ್ರಸ್ತರ ಸಂಕಷ್ಟವನ್ನು ಅರಿತು ನೆರವಿನ ಹಸ್ತ ಚಾಚಿರುವುದು ಮಾನವೀಯತೆಯನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದರು.

ಸಂಗ್ರಹಿಸಿದ ಸಾಮಗ್ರಿಯನ್ನು ಮೂಲ ಮಠ ಕಾಗಿನೆಲೆಗೆ ಸೇರಿಸಲಾಗಿದೆ. ಇನ್ನು ಪರಿಹಾರ ದೊರೆಯದೆ ಕಂಗಾಲಾಗಿರುವ ಬೆಳಗಾವಿ ಜಿಲ್ಲೆ ಗೋಕಾಕ್‌ ತಾಲೂಕಿನ ಮೂರು ಹಳ್ಳಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಎರಡು ಲಕ್ಷ ವೆಚ್ಚದಲ್ಲಿ ಎರಡು ದಿನ ಪ್ಯಾಕಿಂಗ್‌ ಕಾರ್ಯ ಮುಗಿಸಿದ ಬಳಿಕ ನೆರವಿನ ಅಗತ್ಯವುಳ್ಳ ಕುಟುಂಬಗಳನ್ನು ಗುರುತಿಸಿ ನೇರವಾಗಿ ಅವರಿಗೆ ತಲುಪಿಸಲಾಗುವುದು ಎಂದರು.

ಫ್ಯಾಮಿಲಿ ಕಿಟ್‌ : ದುರುಪಯೋಗ ಆಗುವುದನ್ನು ತಡೆಯುವ ಉದ್ದೇಶದಿಂದ ಭಕ್ತರ ತಂಡಗಳನ್ನು ರಚಿಸಲಾಗಿದೆ. ಪ್ರತಿ ಕುಟುಂಬಕ್ಕೆ 2 ಪ್ಲಾಸ್ಟಿಕ್‌ ಮತ್ತು ಸ್ಟೀಲ್‌ ಚಂಬು, 2 ತಟ್ಟೆ, 4 ಲೋಟ, ಇಬ್ಬರಿಗೆ ಬಟ್ಟೆ, 15 ಕೆ.ಜಿ ಅಕ್ಕಿ, ರೊಟ್ಟಿ ಸೇರಿದಂತೆ ನಿತ್ಯ ಬಳಕೆಗೆ ಬೇಕಾಗುವ ವಸ್ತುಗಳನ್ನು ಸೇರಿಸಿ ಒಂದು ಫ್ಯಾಮಿಲಿ ಕಿಟ್‌ ವಿತರಿಸಲಾಗುವುದು ಎಂದು ಸ್ವಾಮೀಜಿ ಮಾಹಿತಿ ನೀಡಿದರು.

ಕವಲೆತ್ತು, ಕೊಡಿಯಾಲ ಹೊಸಪೇಟೆ, ಹರಿಹರ ಸೇರಿದಂತೆ ವಿವಿಧ ಗ್ರಾಮಗಳ ಭಕ್ತರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ