ಆ್ಯಪ್ನಗರ

ಕುರಿಗಳ ಮೇಲೆ ದಾಳಿ: 15ಕ್ಕೂ ಹೆಚ್ಚು ನಾಯಿ ಸೆರೆ

ಗುತ್ತಲ: ನಾಯಿಗಳು ತಮ್ಮ ಕುರಿಗಳ ಮೇಲೆ ದಾಳಿ ಮಾಡಿ ಕೊಲ್ಲುತ್ತಿರುವುದಕ್ಕೆ ಆಕ್ರೋಶಗೊಂಡ ನಿವಾಸಿಗಳು ಸುಮಾರು 15 ನಾಯಿಗಳನ್ನು ಬೋನಿನಲ್ಲಿ ಹಿಡಿದಿರುವ ಘಟನೆ ಪಟ್ಟಣದ ಕುರುಬಗೇರಿಯಲ್ಲಿ ಮಂಗಳವಾರ ನಡೆದಿದೆ.

Vijaya Karnataka 5 Jun 2019, 5:00 am
ಗುತ್ತಲ: ನಾಯಿಗಳು ತಮ್ಮ ಕುರಿಗಳ ಮೇಲೆ ದಾಳಿ ಮಾಡಿ ಕೊಲ್ಲುತ್ತಿರುವುದಕ್ಕೆ ಆಕ್ರೋಶಗೊಂಡ ನಿವಾಸಿಗಳು ಸುಮಾರು 15 ನಾಯಿಗಳನ್ನು ಬೋನಿನಲ್ಲಿ ಹಿಡಿದಿರುವ ಘಟನೆ ಪಟ್ಟಣದ ಕುರುಬಗೇರಿಯಲ್ಲಿ ಮಂಗಳವಾರ ನಡೆದಿದೆ.
Vijaya Karnataka Web HVR-4GTL1


ಕಳೆದ ಅನೇಕ ತಿಂಗಳಿನಿಂದ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಕುರಿ, ಕೋಳಿಗಳ ಮೇಲೆ ದಾಳಿ ಮಾಡಿ ತಿನ್ನುತ್ತಿವೆ. ಅವುಗಳನ್ನು ಬೇರೆಡೆ ಸಾಗಿಸುವಂತೆ ಪ.ಪಂ ಮುಖ್ಯಾಧಿಕಾರಿ ಬಳಿ ಜನರು ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಮುಖ್ಯಾಧಿಕಾರಿ ಶೋಭಾ, ನಾಯಿಗಳನ್ನು ಹಿಡಿಯವ ಕೆಲಸ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಅದನ್ನು ಅರಣ್ಯ ಇಲಾಖೆಯವರ ಮಾಡಬೇಕು. ನೀವು ಅರ್ಜಿ ನೀಡಿ ನಾವು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದು ನಾಯಿಗಳನ್ನು ಹಿಡಿಯುವಂತೆ ಕೋರುತ್ತೇವೆ ಎಂದರು.

ಆಗ ಆಕ್ರೋಶಗೊಂಡ ಕುರುಬಗೇರಿಯ ನಿವಾಸಿಗಳು, ಹಂದಿಗಳನ್ನು ಹಿಡಿಯಲು ಆಗುತ್ತದೆ ನಾಯಿ ಹಿಡಿಯಲು ಆಗಲ್ಲವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮಧ್ಯೆ ಪ್ರವೇಶಿಸಿದ ಕುರುಬಗೇರಿ ವಾರ್ಡ್‌ ಸದಸ್ಯ ಕೋಟೆಪ್ಪ ಬನ್ನಿಮಟ್ಟಿ ನಿವಾಸಿಗಳನ್ನು ಸಮಾಧಾನಪಡಿಸಿ ನಾಯಿ ಸೆರೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಬೋನಿನಲ್ಲಿದ್ದ ನಾಯಿಗಳನ್ನು ಪಟ್ಟಣದ ಹೊರಗಡೆ ಬಿಟ್ಟು ಬರಲಾಯಿತು.

ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಲಿಂಗರಾಜ ನಾಯಕ, ಪ.ಪಂ ಸದಸ್ಯರಾದ ಲಿಂಗೇಶ ಬೆನ್ನೂರ, ಪ್ರಕಾಶ ಪಠಾಡೆ, ನಿವಾಸಿಗಳಾದ ನಾಗಪ್ಪ ಅಳಲಗೇರಿ, ನಾಗಪ್ಪ ಬಸಾಪುರ, ಶಿವಪ್ಪ ನೆಗಳೂರ ಸೇರಿದಂತೆ ಅನೇಕರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ