ಆ್ಯಪ್ನಗರ

ಬ್ಯಾಡಗಿಯಲ್ಲಿ ಆಲಿಕಲ್ಲು ಸಹಿತ ಮಳೆ

ಬ್ಯಾಡಗಿ: ತಾಲೂಕಿನಾದ್ಯಂತ ಸಂಜೆ ಸುರಿದ ಆಲಿಕಲ್ಲು ಸಹಿತ ಗಾಳಿ ಮಳೆಗೆ ಸ್ವಲ್ಪಮಟ್ಟಿನ ತಂಪನ್ನೆರದಿದ್ದರೆ, ಪಟ್ಟಣದ ಚರಂಡಿಗಳು ತುಂಬಿ ಹರಿದು, ತಾಲೂಕಾ ಕ್ರೀಡಾಂಗಣ ಸೇರಿದಂತೆ ಬಹಳಷ್ಟು ಶಾಲಾ ಆವರಣಗಳು ಜಲಾವೃತಗೊಂಡವು.

Vijaya Karnataka 27 May 2019, 5:00 am
ಬ್ಯಾಡಗಿ: ತಾಲೂಕಿನಾದ್ಯಂತ ಸಂಜೆ ಸುರಿದ ಆಲಿಕಲ್ಲು ಸಹಿತ ಗಾಳಿ ಮಳೆಗೆ ಸ್ವಲ್ಪಮಟ್ಟಿನ ತಂಪನ್ನೆರದಿದ್ದರೆ, ಪಟ್ಟಣದ ಚರಂಡಿಗಳು ತುಂಬಿ ಹರಿದು, ತಾಲೂಕಾ ಕ್ರೀಡಾಂಗಣ ಸೇರಿದಂತೆ ಬಹಳಷ್ಟು ಶಾಲಾ ಆವರಣಗಳು ಜಲಾವೃತಗೊಂಡವು.
Vijaya Karnataka Web HVR-26 HAVERI 5


ಸಂಜೆ 5.30 ರ ಸುಮಾರಿಗೆ ಆರಂಭವಾದ ಮಳೆಯು ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ಒಂದೇ ಸಮನೆ ಸುರಿಯಿತು. ಮಳೆಯಿಂದಾಗಿ ತಾಲೂಕಿನ ಕೆಲ ಗ್ರಾಮಗಳಲ್ಲಿ ಹಳ್ಳಗಳಲ್ಲಿಯೂ ಸಹ ನೀರು ಹರಿಯಿತು.

ವಿದ್ಯುತ್‌ ಸಂಪರ್ಕ ಸ್ಥಗಿತ: ಗಾಳಿ ಸಹಿತ ರಭಸವಾಗಿ ಮಳೆಯಾಗಿದ್ದರಿಂದ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಸುಮಾರು 2 ತಾಸುಗಳಿಗೂ ಅಧಿಕ ಕಾಲ ವಿದ್ಯುತ್‌ ಸಂಪರ್ಕ ಕಡಿತಗೊಂಡಿತ್ತು, ಅಲ್ಲಲ್ಲಿ ಮರಗಳು ಧರೆಗುರುಳಿದ್ದು ಯಾವುದೇ ಸಾವು ನೋವು ಸಂಭವಿಸಿಲ್ಲ .

ಕೃಷಿ ಚಟುವಟಿಕೆಗಳು ಹುರುಪು: ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಪಡುವಂತಾಗಿತ್ತು. ಮಳೆ ಕೊರತೆಯಿಂದ ತಾಲೂಕಿನ ಯಾವುದೇ ಭಾಗದಲ್ಲಿ ಕೃಷಿ ಚಟುವಟಿಕೆಗಳು ಪ್ರಾರಂಭವಾಗಿರಲಿಲ್ಲ, ಆದರೆ ಭಾನುವಾರ ಸಂಜೆ ಸುರಿದ ರಭಸದ ಮಳೆಗೆ ನಾಳೆಯಿಂದ ಕೃಷಿ ಚಟುವಟಿಕೆಗಳು ಗರಿದೆದರುವ ನಿರೀಕ್ಷೆಯಿದ್ದು ಆತಂಕದಲ್ಲಿದ್ದ ರೈತ ಸಮೂಹಕ್ಕೆ ಸ್ವಲ್ಪಮಟ್ಟಿನ ಸಮಾಧಾನ ನೀಡಿದೆ. ಹವಾಮಾನ ಇಲಾಖೆ ವರದಿಯಂತೆ ಮುಂಗಾರು ವಿಳಂಬವಾಗುವ ಲಕ್ಷ ಣಗಳಿವೆಯಾದರೂ ಭಾನುವಾರ ಸಂಜೆ ತಾಲೂಕಿನಲ್ಲಿ ಸುರಿದ ಮಳೆಯಿಂದಾಗಿ ರೈತರ ಮೊಗದಲ್ಲಿ ಮಾತ್ರ ಹರ್ಷ ತಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ