ಆ್ಯಪ್ನಗರ

ಪ್ಲಾಸ್ಟಿಕ್‌ ವಸ್ತುಗಳ ಬಳಕೆ ನಿಷೇಧಿಸಿ: ಡಿಸಿ

ಕುಮಾರಪಟ್ಟಣ :ವಿಶ್ವ ಸಂಸ್ಥೆ ನಿರ್ದೇಶನದಡಿ ನಮ್ಮ ಜಿಲ್ಲೆಯಲ್ಲಿ ಶೇ.33 ರಷ್ಟು ಮರಗಿಡಗಳನ್ನು ಬೆಳೆಸಬೇಕು ಆದರೆ, ಕೇವಲ ಶೇ.8 ರಷ್ಟು ಮಾತ್ರ ಅಭಿವೃದ್ದಿಯಾಗಿದೆ ಎಂದು ಹಾವೇರಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಹೇಳಿದರು.

Vijaya Karnataka 9 Jun 2018, 5:00 am
ಕುಮಾರಪಟ್ಟಣ :ವಿಶ್ವ ಸಂಸ್ಥೆ ನಿರ್ದೇಶನದಡಿ ನಮ್ಮ ಜಿಲ್ಲೆಯಲ್ಲಿ ಶೇ.33 ರಷ್ಟು ಮರಗಿಡಗಳನ್ನು ಬೆಳೆಸಬೇಕು ಆದರೆ, ಕೇವಲ ಶೇ.8 ರಷ್ಟು ಮಾತ್ರ ಅಭಿವೃದ್ದಿಯಾಗಿದೆ ಎಂದು ಹಾವೇರಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಹೇಳಿದರು.
Vijaya Karnataka Web ban use of plastic materials dc
ಪ್ಲಾಸ್ಟಿಕ್‌ ವಸ್ತುಗಳ ಬಳಕೆ ನಿಷೇಧಿಸಿ: ಡಿಸಿ


ಕುಮಾರಪಟ್ಟಣದ ಗ್ರಾಸಿಂ ಕಂಪನಿಯಲ್ಲಿ ಶುಕ್ರವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕಂಪನಿ ಆವರಣದಲ್ಲಿ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿ, ಪರಿಸರ ದಿನಾಚರಣೆ ಒಂದೇ ದಿನಕ್ಕೆ ಮೀಸಲಾಗಿಡದೆ ಸದಾ ಮರಗಿಡಗಳನ್ನು ಬೆಳೆಸುವಲ್ಲಿ ಜನರು ಸಹಕರಿಸಬೇಕು, ಕೇವಲ ಸರಕಾರವೊಂದೇ ಅರಣ್ಯ ಅಭಿವೃದ್ದಿಪಡಿಸಲು ಕಷ್ಟ, ಇದರೊಂದಿಗೆ ಖಾಸಗಿ ವಲಯಗಳು ಸಹಕರಿಸಿದರೆ ನಿರ್ದಿಷ್ಟ ಗುರಿ ತಲುಪಲು ಸಾಧ್ಯ. ಸಾರ್ವಜನಿಕರು ಪ್ಲಾಸ್ಟಿಕ್‌ ವಸ್ತುಗಳ ಬಳಕೆ ನಿಷೇಧಿಸಬೇಕೆಂದು ಸಲಹೆ ನೀಡಿದರು.

ಗ್ರಾಸಿಂ ಕಂಪನಿ ಹಿರಿಯ ಅಧ್ಯಕ್ಷ ಅಜೇಯ ಗುಪ್ತಾ, ಕೆ.ಬಿ.ಕೊಟ್ರೇಶ್‌, ಎಸ್‌.ಎಚ್‌.ಬೇಡರ, ಅರುಣ್‌ ಮಿಶ್ರಾ, ಉಮೇಶ್‌ ದುಗ್ಗಾಣಿ, ಕೆ.ಕೆ.ಗುಪ್ತಾ, ಮಹಾವೀರ್‌ ಜೈನ್‌, ಎಸ್‌.ಜಿ. ಭಟ್‌, ಶ್ರೀನಿವಾಸ್‌ ಪಿ. ಮತ್ತು ಕಾರ್ಮಿಕರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ