ಆ್ಯಪ್ನಗರ

ಬಾಳೆ ಹಾನಿಗೆ ಕಿಂಚಿತ್ತೂ ಪರಿಹಾರ ಸಿಕ್ಕಿಲ್ಲ

ಹಾನಗಲ್ಲ: ಮಳೆ ಅಬ್ಬರ, ವರದಾ ನದಿ ಉಬ್ಬರದಿಂದ 3 ಎಕರೆ ಬಾಳೆ ತೋಟ ನೆಲಕಚ್ಚಿ, ಮಿಶ್ರ ಬೆಳೆಯಾಗಿ ಬೆಳೆದಿದ್ದ ಮೆಣಸಿನಗಿಡ ಮತ್ತು ಚೆಂಡು ಹೂವು ಸಂಪೂರ್ಣ ಹಾನಿಗೆ ಒಳಗಾದ ತಾಲೂಕಿನ ವರ್ದಿ ಗ್ರಾಮದ ರೈತ ಭುನವೇಶ್ವರ ಶಿಡ್ಲಾಪುರ ನೆರವಿಗೆ ಈತನಕ ಸರಕಾರ ಧಾವಿಸಿಲ್ಲ.

Vijaya Karnataka 17 Sep 2019, 5:00 am
ಹಾನಗಲ್ಲ: ಮಳೆ ಅಬ್ಬರ, ವರದಾ ನದಿ ಉಬ್ಬರದಿಂದ 3 ಎಕರೆ ಬಾಳೆ ತೋಟ ನೆಲಕಚ್ಚಿ, ಮಿಶ್ರ ಬೆಳೆಯಾಗಿ ಬೆಳೆದಿದ್ದ ಮೆಣಸಿನಗಿಡ ಮತ್ತು ಚೆಂಡು ಹೂವು ಸಂಪೂರ್ಣ ಹಾನಿಗೆ ಒಳಗಾದ ತಾಲೂಕಿನ ವರ್ದಿ ಗ್ರಾಮದ ರೈತ ಭುನವೇಶ್ವರ ಶಿಡ್ಲಾಪುರ ನೆರವಿಗೆ ಈತನಕ ಸರಕಾರ ಧಾವಿಸಿಲ್ಲ.
Vijaya Karnataka Web 16HGL3_23


ಅತಿವೃಷ್ಠಿಗೆ ಬೆಳೆ ನಲುಗಿ, ಬದುಕು ದುಸ್ತರಗೊಂಡು 1 ತಿಂಗಳು ಗತಿಸಿದರೂ ಈತನಕ ಕಂದಾಯ ಇಲಾಖೆ ಅಧಿಕಾರಿಗಳು ಇವರ ಜಮೀನು ವೀಕ್ಷಣೆಗೆ ಬಂದಿಲ್ಲ. ಹೀಗಾಗಿ ಸೋಮವಾರ ತಹಸೀಲ್ದಾರ್‌ ಕಚೇರಿಗೆ ಭೇಟಿ ನೀಡಿದ್ದ ರೈತ ಭುನವೇಶ್ವರ ತನಗೆ ಪರಿಹಾರ ನೀಡಬೇಕು ಎಂದು ಅಧಿಕಾರಿಗಳಲ್ಲಿಮನವಿ ಮಾಡಿಕೊಂಡಿದ್ದಾರೆ.

ವರದಾ ನದಿ ದಂಡೆಗೆ ಹೊಂದಿಕೊಂಡು ನನ್ನ ಜಮೀನು ಇದೆ. ಸುಮಾರು 2 ಲಕ್ಷ ರೂ ಖರ್ಚು ಮಾಡಿ ಬಾಳೆ ತೋಟ ಮಾಡಿದ್ದೆ. ಮಿಶ್ರ ಬೆಳೆ ಆರ್ಥಿಕವಾಗಿ ಕೈಹಿಡಿಯಲಿದೆ ಎಂಬ ಆಶಯದಿಂದ ಮೆಣಸಿನಗಿಡ, ಚೆಂಡು ಹೂವು ಬೆಳೆದಿದ್ದೆ. ಎಲ್ಲವೂ ನೀರಿನಲ್ಲಿಮಾರಣಹೋಮ ಆಗಿದೆ. 4 ಎಕರೆ ಪೈಕಿ ಅರ್ಧದಷ್ಟು ಕಬ್ಬು ಬೆಳೆ ನಷ್ಟಗೊಂಡಿದೆ. ಕೃಷಿ ಜಮೀನಿನ ಫಲವತ್ತಾದ ಮಣ್ಣು ನದಿಯ ಸೆಳೆವಿಗೆ ಸವಕಳಿಯಾಗಿದೆ. ಆದರೆ ಈತನಕ 1 ರೂ. ಪರಿಹಾರವೂ ಬಂದಿಲ್ಲಎಂದು ರೈತ ಭುವನೇಶ್ವರ ಅಳಲು ತೋಡಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ