ಆ್ಯಪ್ನಗರ

ಬನಶಂಕರಿ ದೇವಿ ಜಾತ್ರಾ ಮಹೋತ್ಸವ

ಅಕ್ಕಿಆಲೂರು: ಆಡೂರು ಗ್ರಾಮದಲ್ಲಿಬನಶಂಕರಿ ದೇವಿ ಜಾತ್ರಾ ಮಹೋತ್ಸವ ನೆರೆದ ನೂರಾರು ಸಂಖ್ಯೆಯ ಸದ್ಭಕ್ತರ ಹರ್ಷೋದ್ಗಾರದ ಮಧ್ಯೆ ಸಂಭ್ರಮದಿಂದ ನಡೆಯಿತು.

Vijaya Karnataka 12 Jan 2020, 5:00 am
Vijaya Karnataka Web banashankari devi jatra mahotsav
ಬನಶಂಕರಿ ದೇವಿ ಜಾತ್ರಾ ಮಹೋತ್ಸವ
ಅಕ್ಕಿಆಲೂರು: ಆಡೂರು ಗ್ರಾಮದಲ್ಲಿಬನಶಂಕರಿ ದೇವಿ ಜಾತ್ರಾ ಮಹೋತ್ಸವ ನೆರೆದ ನೂರಾರು ಸಂಖ್ಯೆಯ ಸದ್ಭಕ್ತರ ಹರ್ಷೋದ್ಗಾರದ ಮಧ್ಯೆ ಸಂಭ್ರಮದಿಂದ ನಡೆಯಿತು.

ತಪೋಕ್ಷೇತ್ರ ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿನಾನಾ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ದೇವಿಗೆ ಕಂಕಣಧಾರಣೆ, ಉಡಿ ತುಂಬುವುದು ಸೇರಿದಂತೆ ಹಲವು ವಿಧಿವಿಧಾನ ಜರುಗಿದವು. ಬಳಿಕ ಮಹಾರಥೋತ್ಸವ ಆರಂಭಗೊಂಡಿತು. ವಿವಿಧ ವಾಧ್ಯ ಮೇಳಗಳು ಕಳೆ ತಂದವು. ಪ್ರಮುಖ ಬೀದಿಗಳನ್ನು ತಳಿರು-ತೋರಣಗಳಿಂದ ಸಿಂಗರಿಸಲಾಗಿತ್ತು. ರಂಗೋಲಿ ಚಿತ್ತಾರ ಕಣ್ಮನ ಸೆಳೆಯಿತು. ಇಡೀ ಗ್ರಾಮದಲ್ಲಿಹಬ್ಬದ ಸಂಭ್ರಮ-ಸಡಗರ ಗರಿಗೆದರಿತ್ತು. ರಥೋತ್ಸವ ಬೀದಿಗಳಲ್ಲಿಹಾಯ್ದು ಪುನಃ ದೇವಸ್ಥಾನ ತಲುಪಿ ತೆರೆ ಕಂಡಿತು. ಓಕುಳಿ ಬಂಡಿ ಉತ್ಸವ ನಡೆದು ಜಾತ್ರಾ ಮಹೋತ್ಸವಕ್ಕೆ ತೆರೆ ಬಿದ್ದಿತು.

ವೀರಶೈವ ಸಮಾಜದ ಅಧ್ಯಕ್ಷ ಜಗದೀಶ್‌ ಹಿರೇಮಠ, ತಾಪಂ ಮಾಜಿ ಉಪಾಧ್ಯಕ್ಷ ಸಿದ್ದಲಿಂಗಪ್ಪ ಶಂಕರಿಕೊಪ್ಪ, ಮುಖಂಡರಾದ ಚಂದ್ರಪ್ಪ ನಿಕ್ಕಂ, ಬಿ.ಪಿ.ಸುಂಕದ, ಸಿದ್ದರಾಮಗೌಡ ಪಾಟೀಲ, ಮಾರುತಿ ಖಂಡೋನವರ, ಸಿ.ಎಂ.ಕೊಪ್ಪದ, ಚನ್ನಬಸಪ್ಪ ಪೂಜಾರ, ಹೇಮನಗೌಡ ಪಾಟೀಲ, ತೇಜಪ್ಪ ಪೂಜಾರ, ಎಸ್‌.ಆರ್‌.ಹಂಚಿನಮನಿ, ಎಸ್‌.ವಿ.ಸಂಗೂರಮಠ, ಸಣ್ಣಪ್ಪ ರೇವಣ್ಣನವರ ಸೇರಿದಂತೆ ಆಡೂರು ಹಾಗೂ ಸುತ್ತಲಿನ ಗ್ರಾಮಗಳ ಸದ್ಭಕ್ತರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ