ಆ್ಯಪ್ನಗರ

ದುಡಿಮೆಗೆ ದೈವತ್ವದ ಮಹತ್ವ ಬಸವಣ್ಣ

ಹಾವೇರಿ: ಕಾಯಕ ಮತ್ತು ದಾಸೋಹ ತತ್ತ್ವವನ್ನು ಕೃತಿಗಿಳಿಸಿದ ಏಕೈಕ ಮನಾನುಭಾವರು ಬಸವಣ್ಣನವರು ಎಂದು ಸಿ.ಎಸ್‌. ಮರಳಿಹಳ್ಳಿ ಹೇಳಿದರು.

Vijaya Karnataka 3 Feb 2019, 5:00 am
ಹಾವೇರಿ: ಕಾಯಕ ಮತ್ತು ದಾಸೋಹ ತತ್ತ್ವವನ್ನು ಕೃತಿಗಿಳಿಸಿದ ಏಕೈಕ ಮನಾನುಭಾವರು ಬಸವಣ್ಣನವರು ಎಂದು ಸಿ.ಎಸ್‌. ಮರಳಿಹಳ್ಳಿ ಹೇಳಿದರು.
Vijaya Karnataka Web basavanna is the emphasis on divinity in labor
ದುಡಿಮೆಗೆ ದೈವತ್ವದ ಮಹತ್ವ ಬಸವಣ್ಣ


ಹಾವೇರಿಯ ಶಿವಬಸವ ನಗರದ ವನಿತಾ ಅರಳೇಶ್ವರ ಅವರ ಮನೆಯಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಹಾಗೂ ಜಿಲ್ಲಾ ಕದಳಿ ವೇದಿಕೆ ಆಶ್ರಯದಲ್ಲಿ ನಡೆದ ಲಿಂ. ಸಿದ್ದಪ್ಪ ಚೌಕಟ್ಟಿ ಅವರ ಸ್ಮರಣಾರ್ಥ ದತ್ತಿನಿಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದುಡಿಮೆಯ ಮಹತ್ವವನ್ನು ಪ್ರತಿಯೊಬ್ಬ ವ್ಯಕ್ತಿಗೆ ಅನ್ವಯಿಸಿ ಅದನ್ನು ಪೂರೈಸಬೇಕೆಂಬ ಧಾರ್ಮಿಕ ವಿಧಿಯನ್ನು ನಿಯಮಿಸಿದ ಧರ್ಮವೇ ಬಸವಧರ್ಮ ಎಂದು ಹೇಳಿದರು.

ಬಸವಣ್ಣನವರು ಕಾಯಕದಲ್ಲಿ ಮೇಲು-ಕೀಳು ಎಂದು ಭಾವಿಸದೇ ದುಡಿಮೆಗೆ ದೈವತ್ವದ ಮಹತ್ವವನ್ನು ನೀಡಿದರು ಎಂದರು.

ಮಮತಾ ಹಿಂಚಿಗೇರಿ ಅವರು ಶರಣರ ವನಗಳನ್ನು ಕುರಿತು ಚಿಂತನ- ಮಂಥನ ಮಾಡಿದರು.

ಕದಳಿ ವೇದಿಕೆ ಜಿಲ್ಲಾಧ್ಯಕ್ಷೆ ದಾಕ್ಷಾಯಿಣಿ ಗಾಣಿಗೇರ ಅಧ್ಯಕ್ಷತೆ ವಹಿಸಿ ಮಾತನಾಡಿ, ಬದುಕಿನಲ್ಲಿರುವ ಪ್ರತಿಯೊಂದು ಸಮಸ್ಯೆಗೆ ಶರಣರ ವಚನಗಳಲ್ಲಿ ಪರಿಹಾರ ದೊರೆಯುತ್ತದೆ. ನಾವು ಉತ್ತಮ ಸಂಸ್ಕೃತಿ ಸಂಸ್ಕಾರಗಳನ್ನು ಪಡೆಯಲು ವಚನ ಸಾಹಿತ್ಯ ಓದುವುದು ಅಗತ್ಯವಾಗಿದೆ ಎಂದರು.

ಶರಣ ಸಾಹಿತ್ಯ ಪರಿಷತ್‌ನ ಗೌರವಾಧ್ಯಕ್ಷೆ ಲಲಿತಕ್ಕ ಹೊರಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಶೈಲಜಾ ಕೋರಿಶೆಟ್ಟರ್‌ ವೇದಿಕೆಯಲ್ಲಿದ್ದರು. ಚಂಪಾ ಹುಣಸಿಕಟ್ಟಿ ಪ್ರಾರ್ಥಿಸಿದರು. ಅನಿತಾ ಅರಳೇಶ್ವರ ಸ್ವಾಗತಿಸಿದರು. ಸೌಭಾಗ್ಯ ಹಿರೇಮಠ ನಿರೂಪಿಸಿದರು. ಸುಮಾ ಕಾಡದೇವರಮಠ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ