ಆ್ಯಪ್ನಗರ

ಸಂತ್ರಸ್ತರಿಗೆ ಬಿಸಿಪಿ ಸಾಂತ್ವನ

ಹಿರೇಕೆರೂರು: ಕಳೆದ ಐದಾರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಸಂತ್ರಸ್ತರಾದ ಇಂಗಳಗೊಂದಿ, ಸತ್ತಗೀಹಳ್ಳಿ ಹಾಗೂ ಶಿರಗಂಬಿ ಗ್ರಾಮಗಳ ಜನರಿಗೆ ಮಾಜಿ ಶಾಸಕ ಬಿ.ಸಿ.ಪಾಟೀಲ್‌ ಸಾಂತ್ವನ ಹೇಳಿದರು.

Vijaya Karnataka 27 Oct 2019, 5:00 am
ಹಿರೇಕೆರೂರು: ಕಳೆದ ಐದಾರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಸಂತ್ರಸ್ತರಾದ ಇಂಗಳಗೊಂದಿ, ಸತ್ತಗೀಹಳ್ಳಿ ಹಾಗೂ ಶಿರಗಂಬಿ ಗ್ರಾಮಗಳ ಜನರಿಗೆ ಮಾಜಿ ಶಾಸಕ ಬಿ.ಸಿ.ಪಾಟೀಲ್‌ ಸಾಂತ್ವನ ಹೇಳಿದರು.
Vijaya Karnataka Web bcp consolation for victims
ಸಂತ್ರಸ್ತರಿಗೆ ಬಿಸಿಪಿ ಸಾಂತ್ವನ


ಈ ಸಂದರ್ಭದಲ್ಲಿಅವರು ಮಾತನಾಡಿ, ಆಗಸ್ಟ್‌ ತಿಂಗಳಲ್ಲಿಸುರಿದ ಭಾರಿ ಮಳೆಗೆ 700ಕ್ಕೂ ಹೆಚ್ಚು ಮನೆಗಳು ಹಾನಿಗೀಡಾಗಿವೆ. ಅವುಗಳಿಗೆ ಸರಕಾರ ಈಗಾಗಲೇ ಪರಿಹಾರ ನೀಡಿದೆ. ಕಳೆದ ನಾಲ್ಕೆತ್ರೖದು ದಿನಗಳಿಂದ ಸುರಿಯುತ್ತಿರುವ ಮಳೆಗೆ ತಾಲೂಕಿನಾದ್ಯಂತ ಮತ್ತೆ 800ಕ್ಕೂ ಹೆಚ್ಚು ಮನೆಗಳು ಜಖಂಗೊಂಡಿವೆ. ಮನೆ ಕಳೆದುಕೊಂಡವರಿಗೆ ತಕ್ಷಣ ಪರಿಹಾರ ನೀಡುವಂತೆ ತಾಲೂಕಾಡಳಿತಕ್ಕೆ ಸೂಚನೆ ನೀಡಲಾಗಿದೆ. ಸುರಿದ ಭಾರಿ ಮಳೆಗೆ ಅವಳಿ ತಾಲೂಕಿನಾದ್ಯಂತ ಸಾವಿರಾರು ಹೆಕ್ಟೇರ್‌ ಪ್ರದೇಶದಲ್ಲಿಬೆಳೆಗಳು ಹಾನಿಗೀಡಾಗಿವೆ. ಬೆಳೆ ಕಳೆದುಕೊಂಡಿರುವರಿಗೆ ಸೂಕ್ತ ಪರಿಹಾರ ನೀಡುವಂತೆ ಸರಕಾರಕ್ಕೆ ಒತ್ತಾಯ ಮಾಡುತ್ತೇನೆ ಎಂದು ಹೇಳಿದರು.

ತಾ.ಪಂ ಮಾಜಿ ಸದಸ್ಯ ಬಸವರಾಜ ಕಾಲ್ವೀಹಳ್ಳಿ, ರವಿಶಂಕರ ಬಾಳಿಕಾಯಿ, ವಿಜಯ ಪೂಜಾರ ಹಾಗೂ ಇಂಗಳಗೊಂದಿ, ಸತ್ತಗೀಹಳ್ಳಿ, ಶಿರಗಂಬಿ ಗ್ರಾಮಸ್ಥರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ