ಆ್ಯಪ್ನಗರ

ಪಕ್ಷಾಂತರಿಗಳಿಗೆ ತಕ್ಕ ಪಾಠವಾಗಲಿ

ಹಿರೇಕೆರೂರ: ಅಧಿಕಾರ, ಹಣ, ದುರಾಸೆಗೆ ಒಳಗಾಗಿ ನಿಮ್ಮನ್ನು ಕೇಳದೆ, ಬಿಜೆಪಿಗೆ ಹೋಗಿರುವ ಪಕ್ಷಾಂತರಿಗಳಿಗೆ ನೀವು ಕೊಡುವ ತೀರ್ಪು ತಕ್ಕ ಪಾಠ ಆಗಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Vijaya Karnataka 28 Nov 2019, 5:00 am
ಹಿರೇಕೆರೂರ: ಅಧಿಕಾರ, ಹಣ, ದುರಾಸೆಗೆ ಒಳಗಾಗಿ ನಿಮ್ಮನ್ನು ಕೇಳದೆ, ಬಿಜೆಪಿಗೆ ಹೋಗಿರುವ ಪಕ್ಷಾಂತರಿಗಳಿಗೆ ನೀವು ಕೊಡುವ ತೀರ್ಪು ತಕ್ಕ ಪಾಠ ಆಗಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Vijaya Karnataka Web be a lesson to the defender
ಪಕ್ಷಾಂತರಿಗಳಿಗೆ ತಕ್ಕ ಪಾಠವಾಗಲಿ


ಅವರು ಬುಧವಾರ ಪಟ್ಟಣದಲ್ಲಿಕಾಂಗ್ರೆಸ್‌ ಅಭ್ಯರ್ಥಿ ಬಿ.ಹೆಚ್‌.ಬನ್ನಿಕೊಡ್‌ ಪರ ಏರ್ಪಡಿಸಿದ್ದ ಪ್ರಚಾರ ಬಹಿರಂಗ ಸಭೆ ಉದ್ಘಾಟಿಸಿ ಮಾತನಾಡಿ, ''ರಟ್ಟೀಹಳ್ಳಿ ತಾಲೂಕಿನ ಕೊನೆಯ ಗ್ರಾಮಗಳಲ್ಲಿಬಿ.ಸಿ.ಪಾಟೀಲ ಪರ ನಾನು ಮತಯಾಚನೆ ಮಾಡಿದ್ದರಿಂದ ಅವರು ಶಾಸಕರಾದರು. ಕಾಂಗ್ರೆಸ್‌ ಪಕ್ಷದ ಹಾಗೂ ನನ್ನ ಮಾತಿಗೆ ಮನ್ನಣೆ ನೀಡಿ ಮತ ನೀಡಿ ಗೆಲ್ಲಿಸಿದ್ದೀರಿ. ಆದರೆ ನಿಮ್ಮನ್ನು ಕೇಳದೆ, ಪಕ್ಷಕ್ಕೂ ಹೇಳದೇ ನಂಬಿಕೆಗೆ ಮೋಸ ಮಾಡಿ ಬಿಜೆಪಿ ಸೇರಿದ್ದಾರೆ. ಈ 17 ಶಾಸಕರನ್ನು ಅನರ್ಹರು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಇವರು ಶಾಸಕರಾಗಲು ನಾಲಾಯಕ್‌'' ಎಂದರು.

ಮಂತ್ರಿ ಮಾಡುತ್ತೇನೆ ಎಂದಿದ್ದೆ: ಇದು ಸಮ್ಮಿಶ್ರ ಸರಕಾರ, ಸ್ವಲ್ಪದಿನ ತಡೆದುಕೊಳ್ಳಿ ನಂತರ ಮಂತ್ರಿ ಮಾಡುತ್ತೇನೆ ಎಂದು ಹೇಳಿದ್ದೆ. ಆದರೆ ಬಿ.ಸಿ.ಪಾಟೀಲರು ಅಧಿಕಾರದ ಆಸೆಗಾಗಿ ಕಾಂಗ್ರೆಸ್‌ ಬಿಟ್ಟು ಹೋಗಿದ್ದಾರೆ. ನನ್ನನ್ನು ಅಣ್ಣಾ ಎಂದು ಕರೆಯುತ್ತಿದ್ದ ಅವರು ನನಗೆ ಚೂರಿ ಹಾಕಿದ್ದಾರೆ ಎಂದು ಕಿಡಿಕಾರಿದರು.

ಕಾಂಗ್ರೆಸ್‌ ಅಭ್ಯರ್ಥಿ ಬಿ.ಹೆಚ್‌.ಬನ್ನಿಕೊಡ್‌ ಪ್ರಾಮಾಣಿಕ ವ್ಯಕ್ತಿ. ಕ್ಷೇತ್ರಕ್ಕೆ ಪ್ರಾಮಾಣಿಕರು ಬೇಕೆಂದು ಅಪೇಕ್ಷೆ ಪಟ್ಟಿದ್ದೀರಿ. ಬನ್ನಿಕೊಡ್‌ ಅವರನ್ನು 25 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.

ಕಾಂಗ್ರೆಸ್‌ ಅಭ್ಯರ್ಥಿ ಬಿ.ಹೆಚ್‌.ಬನ್ನಿಕೊಡ್‌, ಮಾಜಿ ಸಚಿವ ಎಚ್‌.ಕೆ.ಪಾಟೀಲ್‌, ಮಾಜಿ ಸಚಿವ ಎಚ್‌.ಆಂಜನೇಯ, ಮಾಜಿ ಸಂಸದ ವಿ.ಎಸ್‌.ಉಗ್ರಪ್ಪ, ಐ.ಜಿ.ಸನದಿ, ಟಿ.ಈಶ್ವರ್‌, ಎ.ಎಂ.ಹಿಂಡಸಗೇರಿ, ವೀರಣ್ಣಾ ಮತ್ತಿಕಟ್ಟಿ, ಬಸವರಾಜ್‌ ಶಿವಣ್ಣನವರ, ರುದ್ರಪ್ಪ ಲಮಾಣಿ, ಪ್ರೇಮಾ ಪಾಟೀಲ್‌, ಮೋಹನ್‌ ಕೊಂಡಜ್ಜಿ, ಜಿ.ಎಸ್‌.ಪಾಟೀಲ್‌, ಡಿ.ಆರ್‌.ಪಾಟೀಲ್‌, ಜಿ.ಎಸ್‌.ಗಡ್ಡದೇವರಮಠ, ಎಸ್‌.ಕೆ.ಕರಿಯಣ್ಣನವರ, ಎಂ.ಎಂ.ಹೀರೇಮಠ್‌, ಕೊಟ್ರೇಶಪ್ಪ ಬಸಗಣ್ಣಿ, ಪ್ರಕಾಶ ಬನ್ನಿಕೊಡ್‌ ಇತರರಿದ್ದರು.

ರೋಡ್‌ ಶೋ: ಲಿಂಗದೇವರಕೊಪ್ಪ ಗ್ರಾಮದಿಂದ ಬೈಕ್‌ ರಾರ‍ಯಲಿ ಮೂಲಕ ರೋಡ್‌ ಶೋ ನಡೆಸಿದ ಸಿದ್ದರಾಮಯ್ಯ ಅವರು ಕೋಡ, ಹಂಸಭಾವಿ, ಚಿಕ್ಕೇರೂರು, ಹಿರೇಕೆರೂರಲ್ಲಿಮೂಲಕ ಅಪಾರ ಕಾರ್ಯಕರ್ತರೊಂದಿಗೆ ಮತಯಾಚನೆ ಮಾಡಿದರು.

ಮಿಸ್ಟರ್‌ ಪಾಟೀಲರೇ..: ''ಮಿಸ್ಟರ್‌ ಬಿ.ಸಿ.ಪಾಟೀಲರೇ, ನಾನು ಜೆಡಿಎಸ್‌ ಬಿಡಲಿಲ್ಲ. ನನ್ನನ್ನು ದೇವೇಗೌಡರು ಉಚ್ಛಾಟನೆ ಮಾಡಿದರು. ಆದರೆ, ನೀನು ಅಧಿಕಾರ, ಹಣದ ಆಸೆಗಾಗಿ ಬಿಜೆಪಿಗೆ ಹೋಗಿದ್ದೀಯ. ಇದರಲ್ಲಿನನಗೂ ನಿನಗೂ ಏನು ಹೋಲಿಕೆ ಇದೆ?'' ಎಂದು ಪ್ರಶ್ನಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ