ಆ್ಯಪ್ನಗರ

ಗ್ರಾಮಗಳಲ್ಲಿ ಬಿಜೆಪಿ ಸಂಭ್ರಮ

ತುಮ್ಮಿನಕಟ್ಟಿ: ರಾಣೇಬೆನ್ನೂರು ಕ್ಷೇತ್ರದ ಉಪ ಚುನಾವಣೆಯಲ್ಲಿಬಿಜೆಪಿ ಅಭ್ಯರ್ಥಿ ಅರುಣ ಕುಮಾರ ಪೂಜಾರ ವಿಜಯದ ನಗೆ ಬೀರುತ್ತಿದ್ದಂತೆಯೇ ಬೆಂಬಲಿಗರು, ಕಾರ್ಯಕರ್ತರ ಸಂಭ್ರಮಾಚರಣೆ ಮುಗಿಲು ಮುಟ್ಟಿತು. ಕ್ಷೇತ್ರದ ಪ್ರತಿ ಗ್ರಾಮದಲ್ಲಿಯೂ ಸಂಭ್ರಮ ನಡೆಯಿತು.

Vijaya Karnataka 10 Dec 2019, 5:00 am
ತುಮ್ಮಿನಕಟ್ಟಿ: ರಾಣೇಬೆನ್ನೂರು ಕ್ಷೇತ್ರದ ಉಪ ಚುನಾವಣೆಯಲ್ಲಿಬಿಜೆಪಿ ಅಭ್ಯರ್ಥಿ ಅರುಣ ಕುಮಾರ ಪೂಜಾರ ವಿಜಯದ ನಗೆ ಬೀರುತ್ತಿದ್ದಂತೆಯೇ ಬೆಂಬಲಿಗರು, ಕಾರ್ಯಕರ್ತರ ಸಂಭ್ರಮಾಚರಣೆ ಮುಗಿಲು ಮುಟ್ಟಿತು. ಕ್ಷೇತ್ರದ ಪ್ರತಿ ಗ್ರಾಮದಲ್ಲಿಯೂ ಸಂಭ್ರಮ ನಡೆಯಿತು.
Vijaya Karnataka Web bjp celebration in villages
ಗ್ರಾಮಗಳಲ್ಲಿ ಬಿಜೆಪಿ ಸಂಭ್ರಮ


ತುಮ್ಮಿನಕಟ್ಟಿ ಬಸ್‌ ನಿಲ್ದಾಣದ ವೃತ್ತದಲ್ಲಿಜಮಾಯಿಸಿದ ಕಾರ್ಯಕರ್ತರು ಕೇಕೆ ಹಾಕಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಗ್ರಾಮದ ಪ್ರಮುಖ ಬೀದಿಗಳನ್ನು ಸುತ್ತು ಹಾಕಿ ಬಿಜೆಪಿ ಪರ ಘೋಷಣೆ ಮೊಳಗಿಸಿದರು. ಪರಸ್ಪರ ಗುಲಾಲು ಹಚ್ಚಿಕೊಂಡು ಪಟಾಕಿ ಸಿಡಿಸಿ ಖುಷಿ ಪಟ್ಟರು. ವಾದ್ಯ ಮೇಳಕ್ಕೆ ತಕ್ಕಂತೆ ನರ್ತಿಸಿ ಸಂತಸದಲ್ಲಿನಲಿದಾಡಿದರು.

ಅರುಣ ಕುಮಾರ ಪೂಜರ ಆರಂಭಕ್ಕೆ ಮುನ್ನಡೆ ಸಾಧಿಸುತ್ತಿದ್ದಂತೆಯೇ ಸಂಭ್ರಮಾಚರಣೆಯಲ್ಲಿಬಿಜೆಪಿ ಪ್ರಧಾನ ಕಾರ್ಯದರ್ಶಿ ಬಸವರಾಜ ಕೇಲಗಾರ, ಗದಿಗೆಪ್ಪ ಬುಡಮಣ್ಣನವರ, ಶಿವು ಗುರುಂ, ಶ್ರೀನಿವಾಸ ಮರಮಂಚಿ, ನೂರಸಾಬ ಕುಪ್ಪೆಲೂರು, ತಿಪ್ಪೇಶ ಮಡಿವಾಳರ, ನಾರಾಯಣಪ್ಪ ದುರಗೇರಿ, ಗಣೇಶ ಮಾಳನಾಯಕನಹಳ್ಳಿ, ಪ್ರಭು ದಾವಣಗೆರೆ ಮತ್ತಿತರರು ಇದ್ದರು.

ಕಮಲ ಹಿಡಿದ ಮತದಾರರು:
ರಾಣೇಬೆನ್ನೂರು ಕ್ಷೇತ್ರದ ತುಮ್ಮಿನಕಟ್ಟಿ ಜಿಪಂ ಕ್ಷೇತ್ರಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ, ಜಿಲ್ಲಾಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ರಾಜಕೀಯ ಮುಖಂಡರು ಪ್ರಚಾರ ನಡೆಸಿದ್ದರು. ಮತದಾರರ ಕಮಲ ಹಿಡಿದು ಜಯ ಸಾಧಿಸಿದರು. ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವೆ ಉಮಾಶ್ರೀ ಸೇರಿದಂತೆ ಅನೇಕ ಕಾಂಗ್ರೆಸ್‌ ಮುಖಂಡರು ಗೆಲುವಿಗೆ ಪ್ರಯತ್ನ ಮಾಡಿದರೂ ಫಲ ನೀಡಲಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ