ಆ್ಯಪ್ನಗರ

ಸಂತ್ರಸ್ತರಿಗೆ ಧ್ವನಿಯಾಗದ ಬಿಜೆಪಿ ಸರಕಾರ: ಎಚ್ಕೆ ಆರೋಪ

ಶಿಗ್ಗಾವಿ: ರಾಜ್ಯ ಸರಕಾರಕ್ಕೆ ರಾಜ್ಯದ ಹಿತ ಕಾಪಾಡುವ ಲಕ್ಷ ್ಯವಿಲ್ಲ. ಅನರ್ಹ ಶಾಸಕರನ್ನು ತೆಗೆದುಕೊಳ್ಳುವುದು ಹೇಗೆ? ಕೋರ್ಟ್‌ ವರದಿ ಏನಾಗುತ್ತದೆ ಎಂಬುದರ ಕಡೆಗೆ ಬಿಜೆಪಿ ಗಮನ ನೆಟ್ಟಿದೆ ಹೊರತು, ನೆರೆ ಸಂತ್ರಸ್ತರ ಸ್ಥಿತಿಗೆ ಧ್ವನಿಯಾಗಲಿಲ್ಲ ಎಂದು ಕಾಂಗ್ರೆಸ್‌ ಮುಖಂಡ ಎಚ್‌.ಕೆ.ಪಾಟೀಲ ಆರೋಪಿಸಿದರು.

Vijaya Karnataka 15 Aug 2019, 5:00 am
ಶಿಗ್ಗಾವಿ: ರಾಜ್ಯ ಸರಕಾರಕ್ಕೆ ರಾಜ್ಯದ ಹಿತ ಕಾಪಾಡುವ ಲಕ್ಷ ್ಯವಿಲ್ಲ. ಅನರ್ಹ ಶಾಸಕರನ್ನು ತೆಗೆದುಕೊಳ್ಳುವುದು ಹೇಗೆ? ಕೋರ್ಟ್‌ ವರದಿ ಏನಾಗುತ್ತದೆ ಎಂಬುದರ ಕಡೆಗೆ ಬಿಜೆಪಿ ಗಮನ ನೆಟ್ಟಿದೆ ಹೊರತು, ನೆರೆ ಸಂತ್ರಸ್ತರ ಸ್ಥಿತಿಗೆ ಧ್ವನಿಯಾಗಲಿಲ್ಲ ಎಂದು ಕಾಂಗ್ರೆಸ್‌ ಮುಖಂಡ ಎಚ್‌.ಕೆ.ಪಾಟೀಲ ಆರೋಪಿಸಿದರು.
Vijaya Karnataka Web HVR-14SGN-1


ಬುಧವಾರ ಪಟ್ಟಣದಲ್ಲಿ ಕೋಡಿ ಬಿದ್ದ ನಾಗನೂರು, ಹುಣಿಸಿಕಟ್ಟಿ-ನಿಡಗುಂದಿ ಕೆರೆಗಳಿಂದ ಹಾನಿಯಾದ ನೆರೆ ಪ್ರದೇಶಗಳನ್ನು ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಹಿತ ಕಾಪಾಡುವ ಲಕ್ಷ ್ಯವಿಲ್ಲದೆ ಸ್ವಾರ್ಥ ರಾಜಕಾರಣಕ್ಕೆ ಮೊರೆ ಹೋದ ಬಿಜೆಪಿಗೆ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿಯೂ ಸಚಿವ ಸಂಪುಟ ರಚನೆ ಮಾಡಲು ಸಾಧ್ಯವಾಗದಿರುವುದು ಶೋಚನೀಯ ಎಂದರು.

ನನ್ನ ಭಾಗದಲ್ಲಿ ಯಾವ ಹೊಳೆಯೂ ಬಂದಿಲ್ಲ. ಆದರೂ ಮಳೆಗೆ ಒಂದು ಸಾವಿರ ಮನೆಗಳು ಬಿದ್ದಿವೆ. ಈಗಲೂ ತನ್ನಷ್ಟಕ್ಕೆ ತಾನೇ ಬೀಳುತ್ತಿವೆ. ಇವೆಲ್ಲವನ್ನು ಪರಿಗಣಿಸಿ, ಹಾನಿ ಅವಲೋಕಿಸಿ ರಾಷ್ಟ್ರೀಯ ವಿಪತ್ತು ಎಂದು ಪರಿಗಣಿಸಬೇಕಾಗುತ್ತದೆ. ಬದುಕು ಕಟ್ಟಿಕೊಡುವ ನಿಟ್ಟಿನಲ್ಲಿ ಸರಕಾರ ಕಾರ್ಯಪ್ರವೃತ್ತವಾಗಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್‌ ಅಧ್ಯಕ್ಷ ಎಂ.ಎನ್‌.ವೆಂಕೋಜಿ, ಮಾಜಿ ಸಂಸದ ಪ್ರೊ.ಐ.ಜಿ.ಸನದಿ, ಮಾಜಿ ರುದ್ರಪ್ಪ ಲಮಾಣಿ, ಮಾಜಿ ಶಾಸಕ ಸೈಯ್ಯದ ಅಜ್ಜಂಪೀರ ಖಾದ್ರಿ, ಮುಖಂಡರಾದ ಸಂಜೀವಕುಮಾರ ನೀರಲಗಿ, ಕೊಟ್ರೇಶಪ್ಪ ಬಸೇಗಣ್ಣಿ, ಎಪಿಎಂಸಿ ಅಧ್ಯಕ್ಷೆ ಪ್ರೇಮಾ ಪಾಟೀಲ, ಹನುಮರೆಡ್ಡಿ ನಡುವಿನಮನಿ, ಶ್ರೀಕಾಂತ ಪೂಜಾರ,ಹನುಮರೆಡ್ಡಿ ನಡುವಿನಮನಿ,ವೀರೇಶ ಆಜೂರ, ಎಸ್‌.ಎಫ್‌. ಮಣಕಟ್ಟಿ, ಬಸನಗೌಡ ಪಾಟೀಲ, ಪ್ರದೀಪಕುಮಾರ ಗಿರಡ್ಡಿ, ಗುಡ್ಡಪ್ಪ ಜಲದಿ, ಚಂದ್ರಶೇಖರ ಗಾಳಿ ಇತರರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ