ಆ್ಯಪ್ನಗರ

ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗೆ ಬಿಜೆಪಿ ಟಿಕೆಟ್‌

ತುಮ್ಮಿನಕಟ್ಟಿ: ರಾಣೇಬೆನ್ನೂರು ಉಪ ಚುನಾವಣೆಯಲ್ಲಿಅನರ್ಹ ಶಾಸಕ ಆರ್‌.ಶಂಕರ್‌ ಸೋಲುತ್ತಾನೆಂದು ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗೆ ಬಿಜೆಪಿ ಟಿಕೆಟ್‌ ಕೊಟ್ಟಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದರು.

Vijaya Karnataka 28 Nov 2019, 5:00 am
ತುಮ್ಮಿನಕಟ್ಟಿ: ರಾಣೇಬೆನ್ನೂರು ಉಪ ಚುನಾವಣೆಯಲ್ಲಿಅನರ್ಹ ಶಾಸಕ ಆರ್‌.ಶಂಕರ್‌ ಸೋಲುತ್ತಾನೆಂದು ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗೆ ಬಿಜೆಪಿ ಟಿಕೆಟ್‌ ಕೊಟ್ಟಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದರು.
Vijaya Karnataka Web bjp ticket for a criminal person
ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗೆ ಬಿಜೆಪಿ ಟಿಕೆಟ್‌


ರಾಣೇಬೆನ್ನೂರು ತಾಲೂಕಿನ ತುಮ್ಮಿನಕಟ್ಟಿ ಗ್ರಾಮದಲ್ಲಿಮಂಗಳವಾರ ಸಂಜೆ ಏರ್ಪಡಿಸಿದ್ದ ಕಾಂಗ್ರೆಸ್‌ ಅಭ್ಯರ್ಥಿ ಕೆ.ಬಿ.ಕೋಳಿವಾಡ ಪರ ಪ್ರಚಾರ ಸಭೆಯಲ್ಲಿಮಾತನಾಡಿದ ಅವರು, ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರುಣಕುಮಾರ ಪೂಜಾರ ವಿರುದ್ಧ 5 ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿವೆ ಎಂದರು.

ರಾಜ್ಯದಲ್ಲಿಉಪ ಚುನಾವಣೆ ಯಾರೂ ಬಯಸಿರಲಿಲ್ಲ. 17 ಶಾಸಕರು ರಾಜೀನಾಮೆ ಕೊಟ್ಟ ಕಾರಣ ಈಗ ಉಪ ಚುನಾವಣೆ ನಡೆಯುತ್ತದೆ. 17 ಶಾಸಕರು ರಾಜೀನಾಮೆ ಕೊಡಲು ಬಿಜೆಪಿಯ ಯಡಿಯೂರಪ್ಪ, ಅಮಿತ್‌ ಶಾ ಹಾಗೂ ಮೋದಿ ಅವರೇ ಕಾರಣ. ಚುನಾಯಿತ ಪ್ರತಿನಿಧಿಗಳಿಗೆ ಹಣದ ಆಮಿಷವೊಡ್ಡಿ ಪಕ್ಷಾಂತರ ಮಾಡಿಸಲಾಗಿದೆ. ತಮ್ಮ ಮೂಲಕ ಪ್ರಜಾಪ್ರಭುತ್ವ ಕಗ್ಗೊಲೆ ಮಾಡಿದ್ದಾರೆಂದು ದೂರಿದರು.

ನಮ್ಮ ಅಧಿಕಾರದ ಅವಧಿಯಲ್ಲಿನೇಕಾರರ ಸಾಲ ಹಾಗೂ ರೈತರ ಸಾಲ, ನೇಕಾರರ ವಿದ್ಯುತ್‌ ಮಗ್ಗಕ್ಕೆ 1.20ಪೈಸೆ ಸಬ್ಸಿಡಿ ಕೊಟ್ಟಿದ್ದೇವೆ. ನೇಕಾರರಿಗೆ ಸರಕಾರದಿಂದ ಮನೆ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಕರ್ನಾಟಕದಲ್ಲಿಹಣಕಾಸು ಮಂತ್ರಿಯಾಗಿ 13 ಬಾರಿ ಬಜೆಟ್‌ ಮಂಡಿಸಿದ್ದೇನೆ. ರಾಣೇಬೆನ್ನೂರು ಮಾದರಿ ತಾಲೂಕನ್ನಾಗಿ ಮಾಡುತ್ತೇನೆಂದು ಸುಳ್ಳು ಹೇಳುತ್ತಿರುವ ಯಡಿಯೂರಪ್ಪ ಅವರ ಮಾತನ್ನು ನಂಬಬೇಡಿ. ಕೋಳಿವಾಡರು ಉತ್ತಮ ಆಡಳಿತ ಮಾಡುತ್ತಿದ್ದಾರೆ ಅವರಿಗೆ ಮತ ನೀಡಿ ಎಂದು ಮನವಿ ಮಾಡಿಕೊಂಡರು.

ಕಾಂಗ್ರೆಸ್‌ ಅಭ್ಯರ್ಥಿ ಕೆ.ಬಿ.ಕೋಳಿವಾಡ ಮಾತನಾಡಿ 1972ರಿಂದ ಕೆ.ಹೆಚ್‌.ಡಿ.ಸಿ ನಿಗಮದಿಂದ ಮನೆ ನಿರ್ಮಾಣ, ನೇಕಾರರಿಗೆ ನೂಲು, ಸರಿಯಾಗಿ ಕೂಲಿ, ಅವರಿಗೆ ಬರುವ ಎಲ್ಲಾಯೋಜನೆಗಳನ್ನು ಜಾರಿಗೆ ತಂದಿದ್ದೇನೆ ಎಂದರು.

ಮಾಜಿ ಶಾಸಕ ಎಮ್‌.ಬಿ.ಲಕ್ಷಿತ್ರ್ಮನಾರಾಯಣ, ಅಪ್ಪಾಜಿಗೌಡ್ರ, ಮಂಜನಗೌಡ ಪಾಟೀಲ, ಕೃಷ್ಣಪ್ಪ ಕಂಬಳಿ, ರಮೇಶ ಗಂಜಾಮದ, ರವಿಶಂಕರ ಬೆಂಕಿ, ಮಂಜಪ್ಪ ಜಂಗಳಿ, ಶೇಖಪ್ಪ ಬಣಕಾರ, ತಾಪಂ ಸದಸ್ಯ ಜ್ಯೋತಿ ಗಂಜಾಮದ, ಜಪಂ ಉಪಾದ್ಯಕ್ಷೆ ಗಿರಿಜಮ್ಮ ಬ್ಯಾಲದಹಳ್ಳಿ, ಗ್ರಾಪಂ ಸದಸ್ಯರು, ಹನುಮಂತಪ್ಪ ಬ್ಯಾಲದಹಳ್ಳಿ, ಬಸಣ್ಣ ಮರದ, ಸಣ್ಣತಮ್ಮಪ್ಪ ಬಾರ್ಕಿ, ಪುಟ್ಟಪ್ಪ ಮರಿಯಮ್ಮನವರ, ನಾರಾಯಣಪ್ಪ ಗಡ್ಡದ ಮತ್ತಿತರರು ಇದ್ದರು.

10 ಕೆಜಿ ಅಕ್ಕಿ: ನಾವು ಅಧಿಕಾರ ಸ್ವೀಕರಿಸಿದ ಒಂದೇ ಗಂಟೆಯಲ್ಲಿಅನ್ನಭಾಗ್ಯ, ಕ್ಷೀರಭಾಗ್ಯ ಜಾರಿಗೊಳಿಸಿದೆವು. ಅನ್ನಭಾಗ್ಯ ಯೋಜನೆ ಮೂಲಕ 4 ಕೋಟಿ ಜನರು ತಲಾ 7 ಕೆ.ಜಿ. ಅಕ್ಕಿ ಪಡೆಯುತ್ತಿದ್ದರು. ಈಗ ಯಡಿಯೂರಪ್ಪ 7 ಕೆಜಿ ಅಕ್ಕಿಯನ್ನು 4 ಕೆ.ಜಿ.ಗೆ ಇಳಿಸಿದ್ದಾರೆ. ಬಡವರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡಿದರೆ ನಾವು ಸಹಿಸುವದಿಲ್ಲ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ 10 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ಕೊಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ