ಆ್ಯಪ್ನಗರ

ಕಡೂರು ಕೆರೆಗೆ ಬೋರ್‌ ನೀರಿನ ಕಳೆ

ರಟ್ಟೀಹಳ್ಳಿ: ರಟ್ಟೀಹಳ್ಳಿ ತಾಲೂಕಿನ ಕಡೂರು ಗ್ರಾಮದಲ್ಲಿ ಜನರು ಸಲ್ಪಮಟ್ಟದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದರೂ ಗ್ರಾಮದಲ್ಲಿ ಜಾನುವಾರುಗಳಿಗೆ ಮಾತ್ರ ನೀರಿನ ಸಮಸ್ಯೆ ಎದುರಾಗಿಲ್ಲ. ಗ್ರಾಮದ ಜಾನುವಾರುಗಳಿಗೆ ನೀರಿನ ಸಮಸ್ಯೆ ಎದುರಾಗಬಾರದೆಂದು ಹಲವು ವರ್ಷದಿಂದ ಗ್ರಾಮದಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

Vijaya Karnataka 22 May 2019, 5:00 am
ರಟ್ಟೀಹಳ್ಳಿ: ರಟ್ಟೀಹಳ್ಳಿ ತಾಲೂಕಿನ ಕಡೂರು ಗ್ರಾಮದಲ್ಲಿ ಜನರು ಸಲ್ಪಮಟ್ಟದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದರೂ ಗ್ರಾಮದಲ್ಲಿ ಜಾನುವಾರುಗಳಿಗೆ ಮಾತ್ರ ನೀರಿನ ಸಮಸ್ಯೆ ಎದುರಾಗಿಲ್ಲ. ಗ್ರಾಮದ ಜಾನುವಾರುಗಳಿಗೆ ನೀರಿನ ಸಮಸ್ಯೆ ಎದುರಾಗಬಾರದೆಂದು ಹಲವು ವರ್ಷದಿಂದ ಗ್ರಾಮದಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
Vijaya Karnataka Web HVR-21 RATTIHALLI   1A


ಕಳೆದ 4-5 ವರ್ಷದಿಂದ ರಟ್ಟೀಹಳ್ಳಿ ತಾಲೂಕಿನಲ್ಲಿ ಸರಿಯಾಗಿ ಮಳೆ ಬಾರದೆ ಎಲ್ಲ ಕೆರೆಕಟ್ಟೆಗಳು ಒಣಹೋಗಿದ್ದು, ಈಗಲೂ ಹಲವಾರು ಕೆರೆಗಳು ಬಣಗುಡುತ್ತಿವೆ. ತುಂಗಾ ಮೇಲ್ದಂಡೆ ಕಾಲುವೆಯಲ್ಲಿ ನೀರು ಹರಿಯುತ್ತಿರುವಾಗ ತಾಲೂಕಿನಲ್ಲಿ ಕೆಲವೊಂದು ಕೆರೆಗಳನ್ನು ಆಯಾ ಗ್ರಾಮಸ್ಥರು ತುಂಬಿಸಿಕೊಂಡಿದ್ದರು. ಇದರಿಂದ ಸಲ್ಪಮಟ್ಟದಲ್ಲಿ ಜಾನುವಾರುಗಳಿಗೆ ನೀರು ಸಿಕ್ಕಂತಾಗಿತ್ತು. ಆದರೆ ಈಗ ಮತ್ತೆ ಕೆರೆಗಳು ನೀರಿಲ್ಲದಂತಾಗಿದ್ದು, ಈಗಾಗಲೇ ಕೆಲವೊಂದು ಗ್ರಾಮಗಳಲ್ಲಿ ಜಾನುವಾರುಗಳಿಗೆ ನೀರಿನ ಸಮಸ್ಯೆ ಎದುರಾಗಿದೆ.

ತಾಲೂಕಿನ ಕಡೂರು ಗ್ರಾಮಕ್ಕೆ ಬಹುಗ್ರಾಮ ಯೋಜನೆಯಲ್ಲಿ ತುಂಗಭದ್ರಾ ನದಿಯಿಂದ ಕುಡಿಯುವ ನೀರನ್ನು ಪೂರೈಸಲಾಗುತ್ತಿದ್ದು, ಇದರಿಂದ ಅನುಕೂಲವಾಗಿದ್ದರೂ ದೊಡ್ಡ ಗ್ರಾಮವಾಗಿರುವುದರಿಂದ ನೀರಿನ ಸಮಸ್ಯೆ ಇದ್ದೆ ಇದೆ. ಆದರೆ ಈ ಗ್ರಾಮದಲ್ಲಿ ಜಾನುವಾರುಗಳಿಗೆ ನೀರಿನ ಸಮಸ್ಯೆ ಉಂಟಾಗಿಲ್ಲ. ಜಾನುವಾರುಗಳಿಗೆ ನೀರಿನ ಸಮಸ್ಯೆ ಆಗಬಾರದೆಂದು ಗ್ರಾ.ಪಂ.ಅವರು ಮತ್ತು ಗ್ರಾಮಸ್ಥರು ಆಲೋಚಿಸಿ 4-5 ವರ್ಷಗಳಿಂದ ಗ್ರಾ.ಪಂ. ಸಮೀಪದ ಸುಮಾರು ಎರಡು ಎಕರೆಯಷ್ಟು ಕೆರೆಗೆ ಗ್ರಾ.ಪಂ.ಗೆ ಸಂಬಂಧಪಟ್ಟ ಬೋರವೆಲ್‌ಗಳ ಮೂಲಕ ನೀರು ಹರಿಸುತ್ತಿದ್ದು, ಇದರಿಂದ ಈ ಗ್ರಾಮದ ಜಾನುವಾರುಗಳಿಗೆ ಸಾಕಷ್ಟು ಅನುಕೂಲವಾಗಿದೆ.

ತುಂಗಾ ಮೇಲ್ದಂಡೆ ಕಾಲುವೆಯಲ್ಲಿ ನೀರು ಹರಿಯುತ್ತಿರುವಾಗ ಈ ಕೆರೆಗೆ ನೀರನ್ನು ಹರಿಸಲಾಗಿತ್ತು. ಕಾಲುವೆ ನೀರು ಸ್ಥಗಿತಗೊಂಡ ಬಳಿಕ ಮೊದಲಿನಂತೆ ಬೋರವೆಲ್‌ ನೀರನ್ನು ಈ ಕೆರೆಗೆ ಬಿಡುತ್ತಿರುವುದರಿಂದ ಕೆರೆಯಲ್ಲಿ ನೀರು ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹವಾಗಿದೆ. ಇದರಿಂದ ಈ ಗ್ರಾಮದಲ್ಲಿ ಜಾನುವಾರುಗಳಿಗೆ ನೀರಿನ ಸಮಸ್ಯೆ ನೀಗಿದಂತಾಗಿದೆ.

ಕೆರೆ ನೀರು ಬರುಬರುತ್ತಾ ಹಸಿರು ಆಗುತ್ತಿದ್ದು ಇದನ್ನು ಶುದ್ಧ ಮಾಡಬೇಕು ಕೆರೆ ಅಭಿವೃದ್ಧಿಯಾಗಬೇಕೆಂಬುವುದು ಇಲ್ಲಿನ ಜನರ ಆಶಯವಾಗಿದೆ. ಗ್ರಾಮದ ಈ ಕೆರೆಯನ್ನು ಸಂಪೂರ್ಣವಾಗಿ ಹೂಳೆತ್ತಿ, ಕೆರೆ ಏರಿಯ ಸುತ್ತಲೂ ಕಲ್ಲಿನಿಂದ ನಿರ್ಮಿಸಿ ಸ್ವಚ್ಛತೆಯನ್ನು ಕಾಪಾಡಿದರೆ ಜಾನುವಾರುಗಳಿಗಷ್ಟೆ ಅಲ್ಲದೇ ಜನರಿಗೂ ಅನುಕೂಲವಾಗುತ್ತದೆ ಎಂದು ಇಲ್ಲಿನ ಜನರು ಹೇಳುತ್ತಾರೆ. ಇದರ ಬಗ್ಗೆ ಸಂಬಂಧಪಟ್ಟವರು ಗಮನಹರಿಸಬೇಕಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ