ಆ್ಯಪ್ನಗರ

ಶಾಲೆಗೆ 2 ಕೊಠಡಿ ನಿರ್ಮಿಸಿ

ಕುಮಾರಪಟ್ಟಣ: ಮುದೇನೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಎರಡು ಕೊಠಡಿ ನಿರ್ಮಿಸಿ ಎಂದು ಮುದೇನೂರ ಗ್ರಾಮಸ್ಥರು ಹಾಗೂ ಗ್ರಾಪಂ ಸರ್ವ ಸದಸ್ಯರು ಜಿ ಪಂ ಉಪಾಧ್ಯಕ್ಷೆ ಗಿರಿಜಮ್ಮ ಬ್ಯಾಲದಹಳ್ಳಿ ಅವರಿಗೆ ಶುಕ್ರವಾರ ಮನವಿ ಪತ್ರ ಸಲ್ಲಿಸಿದರು.

Vijaya Karnataka 22 Sep 2019, 5:00 am
ಕುಮಾರಪಟ್ಟಣ: ಮುದೇನೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಎರಡು ಕೊಠಡಿ ನಿರ್ಮಿಸಿ ಎಂದು ಮುದೇನೂರ ಗ್ರಾಮಸ್ಥರು ಹಾಗೂ ಗ್ರಾಪಂ ಸರ್ವ ಸದಸ್ಯರು ಜಿ ಪಂ ಉಪಾಧ್ಯಕ್ಷೆ ಗಿರಿಜಮ್ಮ ಬ್ಯಾಲದಹಳ್ಳಿ ಅವರಿಗೆ ಶುಕ್ರವಾರ ಮನವಿ ಪತ್ರ ಸಲ್ಲಿಸಿದರು.
Vijaya Karnataka Web build 2 rooms for school
ಶಾಲೆಗೆ 2 ಕೊಠಡಿ ನಿರ್ಮಿಸಿ


ಶಾಲೆಯಲ್ಲಿ1ರಿಂದ 7ನೇ ವರ್ಗದ ತರಗತಿಗಳು ನಡೆಯುತ್ತಿವೆ. ವಿದ್ಯಾರ್ಥಿಗಳ ಹಾಜರಾತಿ ಸಂಖ್ಯೆ ಉತ್ತಮವಾಗಿದೆ. ಕೊಠಡಿಗಳಿಲ್ಲದೆ ಶಿಕ್ಷಕರು ಮಕ್ಕಳಿಗೆ ಬಯಲಿನಲ್ಲಿಪಾಠ ಮಾಡುವ ಸ್ಥಿತಿ ಇದೆ. ಮಳೆಗಾಲದಲ್ಲಿತೀವ್ರ ತೊಂದರೆಯಾಗುತ್ತದೆ. ತಮ್ಮ ಅನುದಾನದಲ್ಲಾಗಲಿ ಅಥವಾ ಯೋಜನೇತರ ಅನುದಾನದಲ್ಲಿಮುದೇನೂರ ಗ್ರಾಮದ ಸರಕಾರಿ ಶಾಲೆಗೆ ಕೊಠಡಿ ನಿರ್ಮಿಸದಿದ್ದರೆ ಜಿಲ್ಲಾಡಳಿತದ ಮುಂದೆ ಉಗ್ರ ಹೋರಾಟ ಮಾಡುವುದಾಗಿ ಇದೇ ವೇಳೆ ಗ್ರಾಮದ ಹಿರಿಯ ಮುಖಂಡ ಶಿವನಗೌಡ ಗಂಗನಗೌಡ್ರ ಎಚ್ಚರಿಸಿದರು.

ಜಿಪಂ ಸಾಮಾನ್ಯ ಸಭೆಯಲ್ಲಿಶಿಕ್ಷಣ ಇಲಾಖೆ ಉಪನಿರ್ದೇಶಕರೊಂದಿಗೆ ಮಾತನಾಡಿ ಮುದೇನೂರ ಸರಕಾರಿ ಶಾಲೆಗೆ ಕೊಠಡಿ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಬ್ಯಾಲದಹಳ್ಳಿ ತಿಳಿಸಿದರು. ಜ್ಯೋತಿ ಗೋವಿಂದಗೌಡ್ರ, ಮಂಜುನಾಥ ಪಿ, ರವೀಂದ್ರಗೌಡ ಪಾಟೀಲ, ಅಶೋಕ್‌ ಆರ್‌ ಜಿ, ಶ್ರೀನಿವಾಸ್‌ ಎ, ಗಣೇಶ ಬಾನಿ, ಸುರೇಶ ಕರೂರ, ಜಗದೀಶ ಹೊಸಳ್ಳಿ, ಶಿವರಾಜ್‌ ಪತ್ತೇಪುರ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ