ಆ್ಯಪ್ನಗರ

ಪಠ್ಯದ ಜತೆ ಕಲೆ,ಸಾಹಿತ್ಯ,ಕ್ರೀಡೆ ಅಭಿರುಚಿ ಬೆಳೆಸಿಕೊಳ್ಳಿ

ಅಕ್ಕಿಆಲೂರು: ವಿದ್ಯಾರ್ಥಿಗಳು ಪಠ್ಯದ ಜತೆ ಕಲೆ, ಸಾಹಿತ್ಯ, ಕ್ರೀಡೆಯಲ್ಲಿಯೂ ಅಭಿರುಚಿ ಬೆಳೆಸಿಕೊಂಡು ಸಾಧನೆಯ ಪಥದಲ್ಲಿ ಮುನ್ನಡೆಯುವಂತೆ ಉರ್ದು ಶಿಕ್ಷ ಣ ಸಂಯೋಜಕ ಸಿಕಂದರ್‌ ಮುಲ್ಲಾ ಕಿವಿಮಾತು ಹೇಳಿದರು.

Vijaya Karnataka 11 Jun 2019, 5:00 am
ಅಕ್ಕಿಆಲೂರು: ವಿದ್ಯಾರ್ಥಿಗಳು ಪಠ್ಯದ ಜತೆ ಕಲೆ, ಸಾಹಿತ್ಯ, ಕ್ರೀಡೆಯಲ್ಲಿಯೂ ಅಭಿರುಚಿ ಬೆಳೆಸಿಕೊಂಡು ಸಾಧನೆಯ ಪಥದಲ್ಲಿ ಮುನ್ನಡೆಯುವಂತೆ ಉರ್ದು ಶಿಕ್ಷ ಣ ಸಂಯೋಜಕ ಸಿಕಂದರ್‌ ಮುಲ್ಲಾ ಕಿವಿಮಾತು ಹೇಳಿದರು.
Vijaya Karnataka Web HVR-10AKR3


ಮೂಡೂರು ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಯಲ್ಲಿ 1 ನೇ ತರಗತಿಗೆ ದಾಖಲಾದ ಮಕ್ಕಳಿಗೆ ಸ್ಕೂಲ್‌ಬ್ಯಾಗ್‌, ನೋಟ್‌ಬುಕ್‌, ಪೆನ್‌ ಸೇರಿದಂತೆ ಇನ್ನಿತರ ಕಲಿಕಾ ಸಾಮಗ್ರಿ ವಿತರಿಸಿ ಅವರು ಮಾತನಾಡಿದರು. ನಮ್ಮ ಸಾಧನೆ ದೇಶಕ್ಕೆ ಅರ್ಪಿಸುವಂತೆ ಆಗಬೇಕು. ಕಲಿತ ವಿದ್ಯೆ ಸಾರ್ಥಕವಾಗಲು ಸಮಾಜ ಸೇವೆಯಲ್ಲಿ ತೊಡಗುವಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ಸಹ ಗಮನ ಹರಿಸುವಂತೆ ಕಿವಿಮಾತು ಹೇಳಿದರು.

ಅಧ್ಯಕ್ಷ ತೆ ವಹಿಸಿದ್ದ ಎಸ್‌ಡಿಎಂಸಿ ಅಧ್ಯಕ್ಷ ಮೌಲಾಸಾಬ ಮೌಲಾನವರ ಮಾತನಾಡಿ, ಸಮಾಜದಲ್ಲಿ ಮಾನವೀಯ ಮೌಲ್ಯಗಳು ಕಣ್ಮರೆಯಾಗುತ್ತಿವೆ. ಮಕ್ಕಳು ಹಿರಿಯರನ್ನು ನಿರ್ಲಕ್ಷ್ಯಿಸುತ್ತಿರುವ ಪರಿಣಾಮ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿದೆ. ಸುಶಿಕ್ಷಿತರ ಸಂಖ್ಯೆ ಬೆಳೆಯುತ್ತಿದ್ದಂತೆ ಸಂಬಂಧಗಳು ಕ್ಷೀಣಿಸುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಶಿಕ್ಷ ಣದ ಜೊತೆ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸುವ ಕಡೆಗೆ ಗಮನ ಹರಿಸುವ ಅಗತ್ಯವಿದೆ ಎಂದರು.

ಎಸ್‌ಡಿಎಂಸಿ ಸದಸ್ಯರಾದ ದಾದಾಪೀರ್‌ ಬಿಸ್ತಿ, ರಹೆಮಾನ್‌ಸಾಬ ಬ್ಯಾಡಗಿ, ಖಾಸೀಂಅಲಿ ಬ್ಯಾಡಗಿ, ಮುರಾದ್‌ಅಲಿ ಹಾವಣಗಿ, ಮಹ್ಮದ್‌ಜಾಫರ್‌ ರಜಬಅಲಿಯವರ, ಮುಖ್ಯೋಪಾಧ್ಯಾಯ ನಾಸೀರ್‌ಅಹ್ಮದ್‌ ಶಿಕಾರಿಪುರ, ಸಹಶಿಕ್ಷ ಕರಾದ ಆಲಿಯಾ ಮಾಸೂರ, ಹರೀಶ್‌ ಕುದರಿ, ಆಸ್ಮಾ ಮುಲ್ಲಾ ಸೇರಿದಂತೆ ಇನ್ನೂ ಹಲವರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ