ಆ್ಯಪ್ನಗರ

ರಾಕ್‌ ಗಾರ್ಡನ್‌ನಲ್ಲಿ ಫಕೀರೇಶ್ವರ ಗ್ಯಾಲರಿ ನಿರ್ಮಿಸಿ

ಶಿಗ್ಗಾವಿ: ಭಾವೈಕ್ಯತೆ ಹರಿಕಾರ ಶಿರಹಟ್ಟಿ ಜಗದ್ಗುರು ಫಕೀರೇಶ್ವರ ಮಹಾಸ್ವಾಮಿಗಳ ಗ್ಯಾಲರಿಯೊಂದು ಉತ್ಸವ ರಾಕ್‌ ಗಾರ್ಡನ್‌ನಲ್ಲಿ ನಿರ್ಮಾಣವಾಗಲಿ ಎಂದು ಫಕೀರೇಶ್ವರ ಸಂಸ್ಥಾನಮಠದ ಜ.ಫಕ್ಕೀರ ಸಿದ್ದರಾಮ ಶ್ರೀಗಳು ಹೇಳಿದರು.

Vijaya Karnataka 17 Jan 2019, 5:00 am
ಶಿಗ್ಗಾವಿ: ಭಾವೈಕ್ಯತೆ ಹರಿಕಾರ ಶಿರಹಟ್ಟಿ ಜಗದ್ಗುರು ಫಕೀರೇಶ್ವರ ಮಹಾಸ್ವಾಮಿಗಳ ಗ್ಯಾಲರಿಯೊಂದು ಉತ್ಸವ ರಾಕ್‌ ಗಾರ್ಡನ್‌ನಲ್ಲಿ ನಿರ್ಮಾಣವಾಗಲಿ ಎಂದು ಫಕೀರೇಶ್ವರ ಸಂಸ್ಥಾನಮಠದ ಜ.ಫಕ್ಕೀರ ಸಿದ್ದರಾಮ ಶ್ರೀಗಳು ಹೇಳಿದರು.
Vijaya Karnataka Web build fakireshwar gallery at rock garden
ರಾಕ್‌ ಗಾರ್ಡನ್‌ನಲ್ಲಿ ಫಕೀರೇಶ್ವರ ಗ್ಯಾಲರಿ ನಿರ್ಮಿಸಿ


ಬುಧವಾರ ತಾಲೂಕಿನ ಗೊಟಗೋಡಿ ಉತ್ಸವ ರಾಕ್‌ ಗಾರ್ಡನ್‌ನ ಜಾನಪದ ರಂಗಮಂದಿರದಲ್ಲಿ ನಡೆದ ಉತ್ಸವ ಕ್ಯಾಲೆಂಡರ್‌ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ನಾವು ಮಾಡಿದ ಕೆಲಸದ ಬಗ್ಗೆ ನಾವೇ ಹೇಳಿಕೊಳ್ಳಬಾರದು. ಅದರ ಬಗ್ಗೆ ಮತ್ತೊಬ್ಬರು ಹೇಳಬೇಕು ಎಂಬುದಕ್ಕೆ ಮೈತಳೆದು ನಿಂತಿರುವ ರಾಕ್‌ ಗಾರ್ಡನ್‌ ಸಾಕ್ಷಿಯಾಗಿದೆ ಎಂದರು.

ಕಲೆ ಕೇವಲ ಸೌಂದರ್ಯ ಪ್ರಜ್ಞೆಯಾಗಿರದೆ ಸಾಮಾಜಿಕ ಚಿಂತನೆ ಆಗಿದೆ ಎಂಬುದನ್ನು ಕಲಾವಿದ ಡಾ.ಟಿ.ಬಿ.ಸೊಲಬಕ್ಕನವರ ಇಲ್ಲಿ ನಿರೂಪಿಸಿದ್ದಾರೆ. ಎಲ್ಲ ವರ್ಗದವರು ಒಂದೆಡೆ ಸೇರುವುದಕ್ಕೆ ಅವಕಾಶ ಮಾಡಿಕೊಟ್ಟ ಸಾಧಕರನ್ನು ಗುರುತಿಸಿ ಗೌರವ ಡಾಕ್ಟರೇಟ್‌ ಪದವಿ ನೀಡಿ ಗೌರವಿಸಿದ ಗೊಟಗೋಡಿ ಜಾನಪದ ವಿಶ್ವವಿದ್ಯಾಲಯದ ಕೆಲಸ ಅನುಕರಣೀಯ ಹಾಗೂ ಶ್ಲಾಘನೀಯ ಎಂದು ಹೇಳಿದರು.

ಭರತ ಸೇವಾಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಮಾತನಾಡಿ, ಭಕ್ತ ಕನಕದಾಸರು, ಶರೀಫ ಶಿವಯೋಗಿಗಳು ಸೇರಿದಂತೆ ಸೂಫಿ ಸಂತರಿಗೆ ಜನ್ಮ ನೀಡಿರುವ ಶಿಗ್ಗಾವಿ ತಾಲೂಕು ಸೌಹಾರ್ದತೆಯ ನೆಲೆವೀಡು. ಇಲ್ಲಿ ಬಾಡ ಮತ್ತು ಶಿಶುವಿನÜಹಾಳ ಹಾಗೂ ಉತ್ಸವ ರಾಕ್‌ ಗಾರ್ಡನ್‌ನಿಂದಾಗಿ ಅತ್ಯಂತ ಜನಪ್ರಿಯತೆ ಪಡೆದಿದ್ದು ಇಡೀ ವಿಶ್ವವೇ ಹೆಮ್ಮೆ ಪಡುವಂತಾಗಿದೆ ಎಂದರು.

ಗಾರ್ಡನ್‌ನ ಕ್ಯೂರೇಟರ್‌ ವೇದಾರಾಣಿ ದಾಸನೂರ ಮಾತನಾಡಿ, ಜ.ಫಕ್ಕೀರ ಸಿದ್ದರಾಮ ಮಹಾಸ್ವಾಮೀಜಿ ಗಾರ್ಡನ್‌ಗೆ ಭೇಟಿ ನೀಡಿ ಆಶೀರ್ವದಿಸಿರುವುದು ನಮ್ಮ ಅದೃಷ್ಟ ಎಂದರು. ಜ.ಫಕೀರೇಶ್ವರ ಸಂಸ್ಥಾನಮಠದ ವತಿಯಿಂದ ಸಾವಿತ್ರಿ ಟಿ.ಸೊಲಬಕ್ಕನವರ ಅವರನ್ನು ಜಗದ್ಗುರುಗಳು ಸನ್ಮಾನಿಸಿದರು. ದಾಸನೂರ ಸಮೂಹ ಸಂಸ್ಥೆ ವತಿಯಿಂದ ಜ.ಫಕ್ಕೀರ ಸಿದ್ದರಾಮ ಸ್ವಾಮೀಜಿ ಅವರನ್ನು ಸನ್ಮಾನಿಸಲಾಯಿತು. ವನಹಳ್ಳಿ ಗ್ರಾಪಂ ಅಧ್ಯಕ್ಷ ಸಂಗಮೇಶ ದೊಡ್ಡಮನಿ, ಬೆಳಗಲಿ ಕೊಟ್ರೇಶ ಮಾಸ್ತರ್‌, ಕ್ಯಾಲಕೊಂಡದ ಮಲ್ಲಪ್ಪ ಚೋಟಪ್ಪನವರ , ಸಿ.ವ್ಹಿ.ಮತ್ತಿಗಟ್ಟಿ ಉಪಸ್ಥಿತರಿದ್ದರು. ದಾಸನೂರ ಸಮೂಹ ಸಂಸ್ಥೆ ಆಡಳಿತ ನಿರ್ದೇಶಕ ಪ್ರಕಾಶ ದಾಸನೂರ ಅಧ್ಯಕ್ಷ ತೆ ವಹಿಸಿದ್ದರು. ಸತೀಶ ಹುಲಸೋಗಿ ಸ್ವಾಗತಿಸಿದರು. ಆನಂದ ಪಾಟೀಲ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ