ಆ್ಯಪ್ನಗರ

ಬ್ಯಾಡಗಿ ಕ್ರೀಡಾಂಗಣ ಓಪನ್‌, ಸ್ವಚ್ಛತೆ ಜೋರು

ಬ್ಯಾಡಗಿ: ಕೋವಿಡ್‌-19 ಹಿನ್ನೆಲೆಯಲ್ಲಿಬಂದ್‌ ಆಗಿದ್ದ ಎಸ್‌.ಜೆ.ಜೆ.ಎಂ. ತಾಲೂಕಾ ಕ್ರೀಡಾಂಗಣವನ್ನು ಮತ್ತೆ ತೆರೆಯುವ ನಿಟ್ಟಿನಲ್ಲಿಜಿಲ್ಲಾಯುವಜನ ಸೇವಾ ಕ್ರೀಡಾ ಇಲಾಖೆಯು ಕ್ರೀಡಾಂಗಣದಲ್ಲಿಸ್ವಚ್ಛತಾ ಕಾರ‍್ಯಕ್ಕೆ ಮುಂದಾಗಿದೆ.

Vijaya Karnataka 24 Nov 2020, 5:00 am
ಬ್ಯಾಡಗಿ: ಕೋವಿಡ್‌-19 ಹಿನ್ನೆಲೆಯಲ್ಲಿಬಂದ್‌ ಆಗಿದ್ದ ಎಸ್‌.ಜೆ.ಜೆ.ಎಂ. ತಾಲೂಕಾ ಕ್ರೀಡಾಂಗಣವನ್ನು ಮತ್ತೆ ತೆರೆಯುವ ನಿಟ್ಟಿನಲ್ಲಿಜಿಲ್ಲಾಯುವಜನ ಸೇವಾ ಕ್ರೀಡಾ ಇಲಾಖೆಯು ಕ್ರೀಡಾಂಗಣದಲ್ಲಿಸ್ವಚ್ಛತಾ ಕಾರ‍್ಯಕ್ಕೆ ಮುಂದಾಗಿದೆ.
Vijaya Karnataka Web 23BYD2_23
ಬ್ಯಾಡಗಿ ತಾಲೂಕಾ ಕ್ರೀಡಾಂಗಣದೆಲ್ಲೆಡೆ ಬೆಳೆದು ನಿಂತಿದ್ದ ಮುಳ್ಳು, ಗಿಡ, ಕಸ, ಕಡ್ಡಿಗಳ ಸ್ವಚ್ಛತೆ ನಡೆದಿರುವುದು.


ಕ್ರೀಡಾಂಗಣದಲ್ಲಿಸಾರ್ವಜನಿಕ ಪ್ರವೇಶ ನಿಷೇಧಿಸಿದ್ದರಿಂದ ಕ್ರೀಡಾ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಇದರಿಂದ ಎಲ್ಲೆಂದರಲ್ಲಿಮುಳ್ಳಿನ ಗಿಡಗಳು ಬೆಳೆದಿದ್ದವು. ಇದೀಗ ಟ್ರ್ಯಾಕ್ಟರ್‌ಡೋಸರ್‌ ಬಳಸಿ ಕಳೆದೆರಡು ದಿನಗಳಿಂದ ಸ್ವಚ್ಛತಾ ಕಾರ‍್ಯ ನಡೆಯುತ್ತಿದೆ.

ಕಳೆದೊಂದು ತಿಂಗಳಿಂದ ಸಣ್ಣ ಪ್ರಮಾಣದ ಯಂತ್ರದಿಂದ ಸ್ವಚ್ಛತೆಗೆ ಯತ್ನಿಸಿದರೂ ಅತಿಯಾದ ಮಳೆಯಾದ ಹಿನ್ನೆಲೆಯಲ್ಲಿಪ್ರಯೋಜನವಾಗಿರಲಿಲ್ಲ. ಹೀಗಾಗಿ ಡೋಸರ್‌ ಮೂಲಕ ಸಂಪೂರ್ಣ ಸ್ವಚ್ಛತೆಗೆ ಕ್ರೀಡಾ ಇಲಾಖೆ ಮುಂದಾಗಿದೆ. ಈ ಸಂದರ್ಭದಲ್ಲಿಮಾಜಿ ಸೈನಿಕ ಮಲ್ಲೇಶ ಚಿಕ್ಕಣ್ಣನವರ, ಕ್ರೀಡಾಂಗಣದ ಸಿಬ್ಬಂದಿ ಮಂಜುಳಾ ಭಜಂತ್ರಿ, ದುರ್ಗೇಶ ಇನ್ನಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ