ಆ್ಯಪ್ನಗರ

ಪರಿಸರ ಜಾಗೃತಿ ಆಂದೋಲನಕ್ಕೆ ಕೈಜೋಡಿಸುವಂತೆ ಕರೆ

ಅಕ್ಕಿಆಲೂರು: ಕಣ್ಣೆದುರಿಗೆ ಪರಿಸರ ನಾಶದ ದುಷ್ಕೃತ್ಯ ನಡೆದರೆ ಅದನ್ನು ನೋಡುತ್ತ ನಿಲ್ಲುವುದು ಅಪರಾಧ. ಇಂಥ ದುಷ್ಕೃತ್ಯ ಪ್ರತಿಭಟಿಸುವ ಎದೆಗಾರಿಕೆಯನ್ನು ಪ್ರತಿಯೊಬ್ಬರೂ ಸಹ ಬೆಳೆಸಿಕೊಳ್ಳಬೇಕಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕಾ ಕೃಷಿ ಅಧಿಕಾರಿ ಪ್ರದೀಪ ಆರ್‌. ಹೇಳಿದರು.

Vijaya Karnataka 7 Jun 2019, 5:00 am
ಅಕ್ಕಿಆಲೂರು: ಕಣ್ಣೆದುರಿಗೆ ಪರಿಸರ ನಾಶದ ದುಷ್ಕೃತ್ಯ ನಡೆದರೆ ಅದನ್ನು ನೋಡುತ್ತ ನಿಲ್ಲುವುದು ಅಪರಾಧ. ಇಂಥ ದುಷ್ಕೃತ್ಯ ಪ್ರತಿಭಟಿಸುವ ಎದೆಗಾರಿಕೆಯನ್ನು ಪ್ರತಿಯೊಬ್ಬರೂ ಸಹ ಬೆಳೆಸಿಕೊಳ್ಳಬೇಕಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕಾ ಕೃಷಿ ಅಧಿಕಾರಿ ಪ್ರದೀಪ ಆರ್‌. ಹೇಳಿದರು.
Vijaya Karnataka Web HVR-6AKR1


ಹಿರೇಹುಲ್ಲಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಗ್ರಾಪಂ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಪರಿಸರ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಮಳೆ, ಚಳಿ, ಬಿಸಿಲು, ಬರಗಾಲ ಎಲ್ಲವೂ ತೀವ್ರವಾಗುತ್ತಿದೆ. ಋುತುಮಾನಗಳ ಸಮತೋಲನವು ಅತೀ ಶೀಘ್ರವಾಗಿ ಬಿಗಡಾಯಿಸುತ್ತಿದೆ. ಬಹುದೊಡ್ಡ ಪ್ರಮಾಣದಲ್ಲಿ ಅರಣ್ಯ ಜೀವಿವæೖವಿಧ್ಯ, ವನ್ಯಜೀವಿಗಳು ನಾಶವಾಗುತ್ತಿವೆ. ಅಂತರ್ಜಲ ಕುಸಿಯುತ್ತಿದೆ. ಕೆರೆಗಳು ಕಣ್ಮರೆಯಾಗುತ್ತಿವೆ. ಭೂಮಿ ಬಿಸಿಯಾಗುತ್ತಿರುವುದೇ ಇದಕ್ಕೆ ಕಾರಣವೆಂದು ಎಲ್ಲ ವಿಜ್ಞಾನಿಗಳೂ, ವಿಶ್ವಸಂಸ್ಥೆಯ ತಜ್ಞರೂ ಹೇಳುತ್ತಿದ್ದಾರೆ. ನಮ್ಮ ಅಭಿವೃದ್ಧಿಯ ಮಾದರಿಯಲ್ಲಿ ತುಸು ಬದಲಾವಣೆ ತಂದರೂ ಈ ಭೂಮಿ ಸುಧಾರಿಸಿಕೊಳ್ಳುತ್ತದೆ. ಮುಂದಿನ ಪೀಳಿಗೆಯವರೆಗೂ ಬದುಕುಳಿಯಲು ಸಾಧ್ಯವಾಗುತ್ತದೆ ಎಂದು ನುಡಿದರು.

ನಿವೃತ್ತ ಶಿಕ್ಷ ಕ ಸಿ.ಪಿ.ಬಾಸೂರ ಮಾತನಾಡಿ, ಮನುಕುಲದ ಒಟ್ಟಾರೆ ಕ್ಷೇಮಕ್ಕಾಗಿ ನಾವೆಲ್ಲರೂ ಸ್ವಲ್ಪ ಸಮಯ ಮೀಸಲಿಡಲೇಬೇಕಿದೆ. ಪ್ರತಿಯೊಬ್ಬರೂ ಕೂಡ ಬಿಡುವಿನ ಅವಧಿಯಲ್ಲಿ ಸಸ್ಯ ಸಂಪತ್ತಿನ ಸಂರಕ್ಷ ಣೆಗೆ ಗಮನ ಹರಿಸುವ ಅಗತ್ಯವಿದೆ ಎಂದು ಹೇಳಿದ ಅವರು ಪರಿಸರ ಜಾಗೃತಿ ಆಂದೋಲನಕ್ಕೆ ಪ್ರತಿಯೊಬ್ಬರೂ ಕೈಜೋಡಿಸುವಂತೆ ಕರೆ ನೀಡಿದರು.

ಮುಖ್ಯೋಪಾಧ್ಯಾಯ ವಿ.ಆರ್‌.ಬಂಡೇರ, ಪಿಡಿಒ ಕುಂತುನಾಥ್‌ ಸಿರಗೊಂಡ, ಗ್ರಾಪಂ ಮಾಜಿ ಉಪಾಧ್ಯಕ್ಷ ಪುಟ್ಟನಗೌಡ ಮಾಳಗಿ, ಕೆ.ಎಚ್‌.ಕಾಟೇನಹಳ್ಳಿ, ಹನುಮಗೌಡ ಬಿ.ಕೆ., ಎಂ.ಎಸ್‌.ಮರಿಗೂಳಪ್ಪನವರ, ಪಿ.ಎಫ್‌.ಗೋಕಾವಿ ಸೇರಿದಂತೆ ಇನ್ನಿತರರು ಈ ಸಂದರ್ಭದಲ್ಲಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ