ಆ್ಯಪ್ನಗರ

ಪ್ರತಿ ತಾಲೂಕು ಕೇಂದ್ರದಲ್ಲಿ ಕೇರ್‌ ಸೆಂಟರ್‌

ರಾಣೇಬೆನ್ನೂರ : ಜಿಲ್ಲೆಯಲ್ಲಿಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಪ್ರತಿ ತಾಲೂಕು ಕೇಂದ್ರದಲ್ಲಿಕೇರ್‌ ಸೆಂಟರ್‌ ಸ್ಥಾಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಹೇಳಿದರು.

Vijaya Karnataka 9 Jul 2020, 5:00 am
ರಾಣೇಬೆನ್ನೂರ : ಜಿಲ್ಲೆಯಲ್ಲಿಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಪ್ರತಿ ತಾಲೂಕು ಕೇಂದ್ರದಲ್ಲಿಕೇರ್‌ ಸೆಂಟರ್‌ ಸ್ಥಾಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಹೇಳಿದರು.
Vijaya Karnataka Web care center at every taluk
ಪ್ರತಿ ತಾಲೂಕು ಕೇಂದ್ರದಲ್ಲಿ ಕೇರ್‌ ಸೆಂಟರ್‌


ನಗರದ ಹಲಗೇರಿ ರಸ್ತೆ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿಬುಧವಾರ ನಿರ್ಮಿತಿ ಕೇಂದ್ರದ ವತಿಯಿಂದ 3 ಕೋಟಿ ರೂ. ವೆಚ್ಚದಲ್ಲಿನಿರ್ಮಿಸಲಾಗುವ ಕೋವಿಡ್‌ ಲ್ಯಾಬ್‌ (ವಿಆರ್‌ಡಿಲ್‌) ಮತ್ತು ಆಸ್ಪತ್ರೆ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಈ ಕಟ್ಟಡದಲ್ಲಿಪ್ರಾಥಮಿಕ ಹಂತದ ಸಮಸ್ಯೆಯಿರುವ 35 ರೋಗಿಗಳಿಗೆ ಚಿಕಿತ್ಸೆ ಕಲ್ಪಿಸಲಾಗುವುದು. ಮಧ್ಯಮ ಹಂತದ ಸಮಸ್ಯೆಯಿರುವ 50 ರೋಗಿಗಳಿಗೆ ಹುಣಸಿಕಟ್ಟಿ ರಸ್ತೆಯಲ್ಲಿನ ಸರಕಾರಿ ಹಾಸ್ಟೆಲ್‌ ಕಟ್ಟಡದಲ್ಲಿಚಿಕಿತ್ಸೆ ನೀಡಲಾಗುವುದು. ತೀವ್ರ ಉಸಿರಾಟದ ಸಮಸ್ಯೆಯಿರುವ ರೋಗಿಗಳನ್ನು ಹಾವೇರಿಯ ಕೋವಿಡ್‌ ಆಸ್ಪತ್ರೆಗೆ ಕಳುಹಿಸಲಾಗುವುದು. ಸದ್ಯ ತಾಲೂಕಿನ ಕೋವಿಡ್‌ ಪಾಸಿಟಿವ್‌ ರೋಗಿಗಳನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲು ಒಂದು ಅಂಬ್ಯುಲೆನ್ಸ್‌ ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿಕ್ವಾರಂಟೈನ್‌ಗೆ ಒಳಪಡುವವರಿಗಾಗಿ ಮತ್ತೊಂದು ಅಂಬ್ಯುಲೆನ್ಸ್‌ ನೀಡಲಾಗುತ್ತದೆ ಎಂದರು.

ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ಒಂದೂವರೆ ತಿಂಗಳ ಅವಧಿಯಲ್ಲಿಕಟ್ಟಡ ನಿರ್ಮಿಸಿ ಲ್ಯಾಬ್‌ ಕಾರ್ಯಾರಂಭಕ್ಕೆ ಪ್ರಯತ್ನಿಸಲಾಗುವುದು ಎಂದರು. ಅಪರ ಜಿಲ್ಲಾಧಿಕಾರಿ ಯೋಗೀಶ್ವರ, ಜಿಪಂ ಸಿಇಒ ರಮೇಶ ದೇಸಾಯಿ, ಡಿಎಚ್‌ಒ ರಾಜೇಂದ್ರ ದೊಡ್ಮನಿ, ತಹಸೀಲ್ದಾರ ಬಸನಗೌಡ ಕೋಟೂರ, ನಗರಸಭೆ ಪೌರಾಯುಕ್ತ ಡಾ.ಮಹಾಂತೇಶ, ಡಿವೈಎಸ್‌ಪಿ ಟಿ.ವಿ.ಸುರೇಶ, ಟಿಎಚ್‌ಒ ಡಾ.ಸಂತೋಷ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ವಿಶ್ವನಾಥ ಪಾಟೀಲ, ಮಂಜುನಾಥ ಓಲೇಕಾರ, ಮಲ್ಲಿಕಾರ್ಜುನ ಅಂಗಡಿ, ಗಂಗಮ್ಮ ಹಾವನೂರ, ಮಂಜುಳಾ ಹತ್ತಿ, ಪ್ರಕಾಶ ಪೂಜಾರ, ಬಸವರಾಜ ಚಳಗೇರಿ, ದೀಪಕ ಹರಪನಹಳ್ಳಿ, ಪ್ರಭುಸ್ವಾಮಿ ಕರ್ಜಗಿಮಠ, ಪರಮೇಶ ಗೂಳಣ್ಣನವರ ಮತ್ತಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ