ಆ್ಯಪ್ನಗರ

ರೋಗ ಬರದಂತೆ ಕಾಳಜಿ ಅಗತ್ಯ

ಅಕ್ಕಿಆಲೂರು: ಜಂಜಾಟದ ಜೀವನ, ಬದಲಾದ ಆಹಾರ ಪದ್ಧತಿ, ಒತ್ತಡ ಸೇರಿದಂತೆ ನಾನಾ ಕಾರಣಗಳಿಂದ ಮಾನವನ ಶರೀರ ರೋಗಗಳ ಗೂಡಾಗುತ್ತಿದೆ. ರೋಗ ಬಂದ ಬಳಿಕ ಕಾಳಜಿ ವಹಿಸುವುದಕ್ಕಿಂತ ಬರದಂತೆ ಕಾಳಜಿ ವಹಿಸುವುದು ಅಗತ್ಯವಾಗಿದೆ ಎಂದು ಇಲ್ಲಿನ ವಿರಕ್ತಮಠದ ಶಿವಬಸವ ಸ್ವಾಮೀಜಿ ಹೇಳಿದರು.

Vijaya Karnataka 29 Nov 2019, 5:00 am
ಅಕ್ಕಿಆಲೂರು: ಜಂಜಾಟದ ಜೀವನ, ಬದಲಾದ ಆಹಾರ ಪದ್ಧತಿ, ಒತ್ತಡ ಸೇರಿದಂತೆ ನಾನಾ ಕಾರಣಗಳಿಂದ ಮಾನವನ ಶರೀರ ರೋಗಗಳ ಗೂಡಾಗುತ್ತಿದೆ. ರೋಗ ಬಂದ ಬಳಿಕ ಕಾಳಜಿ ವಹಿಸುವುದಕ್ಕಿಂತ ಬರದಂತೆ ಕಾಳಜಿ ವಹಿಸುವುದು ಅಗತ್ಯವಾಗಿದೆ ಎಂದು ಇಲ್ಲಿನ ವಿರಕ್ತಮಠದ ಶಿವಬಸವ ಸ್ವಾಮೀಜಿ ಹೇಳಿದರು.
Vijaya Karnataka Web care is needed to prevent disease
ರೋಗ ಬರದಂತೆ ಕಾಳಜಿ ಅಗತ್ಯ


ಇಲ್ಲಿನ ಡಾ.ಸಹನಾ ಮುತ್ತಿನಕಂತಿಮಠ ಅವರ ಮಲ್ಲಿಕಾರ್ಜುನ ಆಸ್ಪತ್ರೆಯಲ್ಲಿಮಾತೋಶ್ರೀ ಲಲಿತಾದೇವಿ ಚಂದ್ರಶೇಖರಯ್ಯ ಮುತ್ತಿನಕಂತಿಮಠ ಅವರ ಸಹಸ್ರ ಚಂದ್ರದರ್ಶನದ ಅಂಗವಾಗಿ ಆಯೋಜಿಸಲಾಗಿದ್ದ ಮೊಣಕಾಲು, ಮಂಡಿ ಚಿಪ್ಪು ಮತ್ತು ಚಪ್ಪೆ ಬದಲಾವಣೆ ವಿಶೇಷ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಶರೀರದಲ್ಲಿಕ್ಯಾಲ್ಸಿಯಂ ಅಂಶ ಕಡಿಮೆಯಾಗುವುದರಿಂದ ಎಲುಬು ಮತ್ತು ಮೂಳೆ ಸಂಬಂಧಿ ಕಾಯಿಲೆ ಹೆಚ್ಚು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಮೊಣಕಾಲು, ಮಂಡಿ ಚಿಪ್ಪು ಮತ್ತು ಚಪ್ಪೆ ಬದಲಾವಣೆ ಚಿಕಿತ್ಸೆ ದುಬಾರಿಯಾಗಿದ್ದು, ಇಂಥ ತಪಾಸಣೆ ಗ್ರಾಮೀಣ ಪ್ರದೇಶದಲ್ಲಿಉಚಿತವಾಗಿ ಸಿಗುತ್ತಿರುವುದು ಬಡ ಮತ್ತು ಮಧ್ಯಮ ವರ್ಗದ ಜನತೆಗೆ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಹೇಳಿದರು.

ಡಾ.ಸಹನಾ ಮುತ್ತಿನಕಂತಿಮಠ ಮಾತನಾಡಿ, ಎಲ್ಲರೂ ಉತ್ತಮ ಆರೋಗ್ಯ ಭಾಗ್ಯ ಹೊಂದುವ ಮೂಲಕ ನೆಮ್ಮದಿಯ ಜೀವನ ಸಾಗಿಸಬೇಕಿದೆ. ಈ ನಿಟ್ಟಿನಲ್ಲಿಸೂಕ್ತ ಮಾರ್ಗದರ್ಶನ ನೀಡುವ ಅಗತ್ಯವಾಗಿದೆ. ಈ ಉದ್ದೇಶದ ಹಿನ್ನೆಲೆಯಲ್ಲಿಆರೋಗ್ಯ ಶಿಬಿರ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿಯೂ ಸಹ ಇಂಥ ಶಿಬಿರ ಆಯೋಜಿಸುವ ಉದ್ದೇಶ ಹೊಂದಲಾಗಿದೆ ಎಂದರು.

ಮುತ್ತಿನಕಂತಿಮಠದ ಚಂದ್ರಶೇಖರ ಸ್ವಾಮೀಜಿ ಸಾನ್ನಿಧ್ಯ, ಲಲಿತಾದೇವಿ ಮುತ್ತಿನಕಂತಿಮಠ ಅಧ್ಯಕ್ಷತೆ ವಹಿಸಿದ್ದರು. ತಜ್ಞರಾದ ಡಾ.ಸಂಜೀವ್‌ ಮುದ್ರಿ, ಡಾ.ವಿವೇಕ್‌ ನಾಡಿಗೇರ, ಜಿಪಂ ಮಾಜಿ ಸದಸ್ಯ ಕೃಷ್ಣ ಈಳಿಗೇರ, ಮುಖಂಡರಾದ ರಾಜಣ್ಣ ಅಂಕಸಖಾನಿ, ಶಶಿಧರ ಮುತ್ತಿನಕಂತಿಮಠ, ಬಸವರಾಜ್‌ ಸಾಲಿಮಠ, ವಿಶ್ವನಾಥ ಭಿಕ್ಷಾವರ್ತಿಮಠ, ಶಂಭುಲಿಂಗ ಹಿರೇಮಠ, ಶಿವಕುಮಾರ ಪಾಟೀಲ, ಪ್ರವೀಣ ಮಹೇಂದ್ರಕರ ಇದ್ದರು.

ರಾಣೇಬೆನ್ನೂರಿನ ಲಕ್ಷಿತ್ರ್ಮೕ ಸರ್ಜಿಕಲ್‌ ಟ್ರಾಮಾ ಅರ್ಥೋ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ (ಡಾ.ಮುದ್ರಿ ಆಸ್ಪತ್ರೆ) ಹಾಗೂ ಲಕ್ಷಿತ್ರ್ಮೕ ಆರೋಗ್ಯ ಮತ್ತು ಶಿಕ್ಷಣ ಸಮಗ್ರ ಅಭಿವೃದ್ಧಿ ಸೇವಾ ಸಂಸ್ಥೆಯ ಆಶ್ರಯದಲ್ಲಿಆಯೋಜಿಸಲಾಗಿದ್ದ ಶಿಬಿರದಲ್ಲಿ300 ಕ್ಕೂ ಹೆಚ್ಚು ಜನರನ್ನು ತಪಾಸಣೆಗೆ ಒಳಪಡಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ