ಆ್ಯಪ್ನಗರ

ಭಾಷಣ ಮಾಡದ ಸಿಎಂ, ಜನರಿಗೆ ಬೇಸರ

ನಾನಾ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಪೂರ್ಣಗೊಂಡ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿತ್ತು. ಆದರೆ ಕೋವಿಡ್‌ ನಿಯಮ ಪಾಲಿಸುವ ನಿಮಿತ್ತ ಶುಕ್ರವಾರವೇ ವೇದಿಕೆ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿತ್ತು.

Vijaya Karnataka 28 Aug 2021, 11:56 pm
ಹಿರೇಕೆರೂರ: ಮುಖ್ಯಮಂತ್ರಿ ಆದ ನಂತರ ಮೊದಲ ಬಾರಿಗೆ ಹಿರೇಕೆರೂರಿಗೆ ಆಗಮಿಸಿದ ಬಸವರಾಜ ಬೊಮ್ಮಾಯಿಯವರ ಮಾತುಗಳನ್ನು ಆಲಿಸಲು ತಾಲೂಕಿನ ಅಪಾರ ಜನಸ್ತೋಮ ಪೊಲೀಸ್‌ ಮೈದಾನದಲ್ಲಿಸೇರಿತ್ತು. ಅದರೆ ಕೋವಿಡ್‌ ನಿಯಮ ಪಾಲಿಸುವ ಸಲುವಾಗಿ ಮುಖ್ಯಮಂತ್ರಿಗಳು ಭಾಷಣ ಮಾಡಲಿಲ್ಲ. ಸಿಎಂ ಭಾಷಣ ಕೇಳಲು ಕಾತುರದಿಂದ ಕಾದ ಜನರಿಗೆ ಬೇಸರ ಉಂಟಾಯಿತು.
Vijaya Karnataka Web ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ


ತಾಲೂಕಿನ ಎರಡು ನೀರಾವರಿ ಯೋಜನೆ ಸೇರಿ 14 ನಾನಾ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಪೂರ್ಣಗೊಂಡ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿತ್ತು. ಆದರೆ ಕೋವಿಡ್‌ ನಿಯಮ ಪಾಲಿಸುವ ನಿಮಿತ್ತ ಶುಕ್ರವಾರವೇ ವೇದಿಕೆ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿತ್ತು. ಪೂರ್ವ ನಿಯೋಜಿತ ಕಾರ್ಯಕ್ರಮವಾಗಿದ್ದರಿಂದ ಎಲ್ಲಕಾಮಗಾರಿಗಳಿಗೆ ಸಂಕೇತಿಕವಾಗಿ ಚಾಲನೆ ನೀಡಿದರು.

ತಾಲೂಕಿನ ಅಂದಾಜು 58 ಕೋಟಿ ರೂ. ವೆಚ್ಚದ ಶ್ರೀ ದುರ್ಗಾದೇವಿ ಏತ ನೀರಾವರಿ ಯೋಜನೆ, ಗುಡ್ಡದ ಮಾದಾಪೂರ ಏತ ನೀರಾವರಿ ಯೋಜನೆ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ) ಹಿರೇಕರೂರ. ಕಚೇರಿಯ ನೂತನ ಕಟ್ಟಡ ಉದ್ಘಾಟನೆ, ನಬಾರ್ಡ್‌ ಆರ್‌.ಐ.ಡಿ.ಎಫ್‌.24ರ ಯೋಜನೆಯಡಿ ನಿರ್ಮಿಸಿದ ಪಶು ಆಸ್ಪತ್ರೆ ಮತ್ತು ಆರ್‌.ಕೆ.ವಿ.ವೈ.ಯೋಜನೆಯಡಿ ನಿರ್ಮಿಸಿದ ಹೆಚ್ಚುವರಿ ಕೊಠಡಿ, ರಟೀಹಳ್ಳಿ ತಾಲೂಕಿನ ರಟ್ಟೀಹಳ್ಳಿ ಪಟ್ಟಣದಲ್ಲಿ್ಲಸರಕಾರಿ ಪಪೂ ಕಾಲೇಜು ಕಟ್ಟಡ ನಿರ್ಮಾಣದ ಕಾಮಗಾರಿ, ರಟ್ಟೀಹಳ್ಳಿ ತಾಲೂಕಿನ ರಟ್ಟೀಹಳ್ಳಿ-ಮಳಗಿ-ಕಣವಿಶಿದ್ದಗೇರಿ ರಸ್ತೆ ಕಿಮೀ 0.60 ರಲ್ಲಿಕುಮದ್ವತಿ ನದಿಗೆ ನಿರ್ಮಿಸಿರುವ ಸೇತುವೆಗೆ ಅಪ್ರೋಚ್‌ ರಸ್ತೆ, ಹಿರೇಕೆರೂರಿನಲ್ಲಿದುರ್ಗಾದೇವಿ ತರಕಾರಿ ಸಂತೆ ಮಾರುಕಟ್ಟೆ, ರಟ್ಟೀಹಳ್ಳಿ ತಾಲೂಕಾ ಕೇಂದ್ರ ಸ್ಥಳದಲ್ಲಿಡಾ.ಬಿ.ಆರ್‌.ಅಂಬೇಡ್ಕರ್‌ ಭವನ, ರಟ್ಟೀಹಳ್ಳಿ ತಾಲೂಕಿನ ಮಾಸೂರ ಗ್ರಾಮ ಮಟ್ಟದ ಶ್ರೀ ಮಹರ್ಷಿ ಭವನ, ಹಿರೇಕೆರೂರ ತಾಲೂಕು ಮಟ್ಟದ ಶ್ರೀಮಹರ್ಷಿ ವಾಲ್ಮೀಕಿ ಭವನ ಮುಂತಾದ ಕಾಮಗಾರಿಗಳಿಗೆ ಚಾಲನೆ ನೀಡಿದರು. ಕಾಮಗಾರಿಗಳಿಗೆ ಚಾಲನೆ ನೀಡುವ ಮೊದಲು ತಾಲೂಕಿನ ಜನತೆಯ ಮನವಿ ಸ್ವೀಕರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ