ಆ್ಯಪ್ನಗರ

ಮಕ್ಕಳು ಸುಶಿಕ್ಷಿತರಾದರೆ ಉತ್ತಮ ಭವಿಷ್ಯ

ಅಕ್ಕಿಆಲೂರು : ಮಕ್ಕಳ ಶಿಕ್ಷ ಣಕ್ಕೆ ಪ್ರತಿಯೊಬ್ಬರೂ ವಿಶೇಷ ಕಾಳಜಿ ವಹಿಸಬೇಕಿದೆ. ಮಕ್ಕಳು ಸುಶಿಕ್ಷಿತರಾದರೆ ಮಾತ್ರ ಉತ್ತಮ ಭವಿಷ್ಯವಿದೆ ಎಂದು ಜಿಪಂ ಸದಸ್ಯ ಟಾಕನಗೌಡ ಪಾಟೀಲ ಹೇಳಿದರು.

Vijaya Karnataka 28 Oct 2018, 5:00 am
ಅಕ್ಕಿಆಲೂರು : ಮಕ್ಕಳ ಶಿಕ್ಷ ಣಕ್ಕೆ ಪ್ರತಿಯೊಬ್ಬರೂ ವಿಶೇಷ ಕಾಳಜಿ ವಹಿಸಬೇಕಿದೆ. ಮಕ್ಕಳು ಸುಶಿಕ್ಷಿತರಾದರೆ ಮಾತ್ರ ಉತ್ತಮ ಭವಿಷ್ಯವಿದೆ ಎಂದು ಜಿಪಂ ಸದಸ್ಯ ಟಾಕನಗೌಡ ಪಾಟೀಲ ಹೇಳಿದರು.
Vijaya Karnataka Web children are well educated and good prospects
ಮಕ್ಕಳು ಸುಶಿಕ್ಷಿತರಾದರೆ ಉತ್ತಮ ಭವಿಷ್ಯ


ಸಮೀಪದ ಮಲಗುಂದ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 8 ನೇ ತರಗತಿ ವಿದ್ಯಾರ್ಥಿಗಳಿಗೆ ಬೈಸಿಕಲ್‌ ವಿತರಿಸಿ ಅವರು ಮಾತನಾಡಿದರು. ವಿದ್ಯಾಭ್ಯಾಸಕ್ಕೆ ಪಕ್ಕದ ಗ್ರಾಮಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಬೈಸಿಕಲ್‌ನಿಂದ ಅನುಕೂಲವಾಗಲಿದೆ. ಈ ಮಹತ್ವದ ಯೋಜನೆಯನ್ನು ಪ್ರಸ್ತುತ ಸಮ್ಮಿಶ್ರ ಸರಕಾರವೂ ಮುಂದುವರಿಸಿಕೊಂಡು ಹೋಗುತ್ತಿದೆ ಎಂದರು.

ಗ್ರಾಪಂ ಉಪಾಧ್ಯಕ್ಷ ಚಿದಾನಂದಯ್ಯ ಹಿರೇಮಠ ಮಾತನಾಡಿ, ಪ್ರಾಥಮಿಕ ಹಂತದಿಂದಲೇ ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಆಧಾರಿತ ಶಿಕ್ಷ ಣದ ಮೂಲಕ ಅವರನ್ನು ಮುಂದಿನ ಜಾಗತಿಕ ಸ್ಪರ್ಧೆಗೆ ಸನ್ನದ್ಧಗೊಳಿಸಬಹುದಾಗಿದೆ. ಇಂದಿನ ಬದಲಾದ ಕಾಲಘಟ್ಟಕ್ಕೆ ಅನುಸಾರವಾಗಿ ಬೋಧನಾ ವಿಧಾನಗಳಲ್ಲಿಯೂ ಸುಧಾರಿತ ಪದ್ಧತಿ ಅನುಸರಿಸುವುದು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅಗತ್ಯವಾಗಿದೆ ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ಸುರೇಶ ತಳವಾರ ಅಧ್ಯಕ್ಷ ತೆ ವಹಿಸಿದ್ದರು. ತಾಪಂ ಸದಸ್ಯ ತಿಪ್ಪಣ್ಣ ದೊಡ್ಡಕೋವಿ, ಪುಟ್ಟಪ್ಪ ಪೂಜಾರ, ಬಸವರಾಜ್‌ ನಿಂಬಕ್ಕನವರ, ಮೂಕಪ್ಪ ಬೆಳಗಾಲ, ರೇಣುಕಾ ಈಳಿಗೇರ, ನಂದಾ ಪೂಜಾರ, ಶಾರದಾ ಹುಲಗಕ್ಕನವರ, ಶಂಕ್ರಪ್ಪ ಹೆಬ್ಬಳ್ಳಿ, ರವಿ ಯತ್ನಳ್ಳಿ, ಭರಮಪ್ಪ ಪೂಜಾರ, ಆನಂದಪ್ಪ ಹುಲ್ಲಾಳ, ಮಾರ್ತಾಂಡಪ್ಪ ತಳವಾರ, ಯಲ್ಲಪ್ಪ ತಳವಾರ, ಬಸವರಾಜ್‌ ಹೊಸಳ್ಳಿ, ವಿ.ಟಿ.ಪಾಟೀಲ ಸೇರಿದಂತೆ ಗ್ರಾಪಂ ಹಾಗೂ ಎಸ್‌ಡಿಎಂಸಿ ಸದಸ್ಯರು, ಗ್ರಾಮಸ್ಥರು ಈ ಸಂದರ್ಭದಲ್ಲಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ