ಆ್ಯಪ್ನಗರ

ನಾಳೆಯಿಂದ ಸ್ವಚ್ಛೋತ್ಸವ-ನಿತ್ಯೋತ್ಸವ ಮಾಸಾಚರಣೆ

ಹಾವೇರಿ: ಸ್ವಚ್ಛ ಭಾರತ್‌ ಮಿಷನ್‌ ಯೋಜನೆಯಡಿ ಘನತ್ಯಾಜ್ಯ ನಿರ್ವಹಣೆ ಹಾಗೂ ಗ್ರಾಮೀಣ ಸಮುದಾಯದಲ್ಲಿಜಾಗೃತಿ ಮೂಡಿಸುವ ಸಲುವಾಗಿ ಸ್ವಚ್ಛೋತ್ಸವ-ನಿತ್ಯೋತ್ಸವ ಮಾಸಾಚರಣೆ ಹಮ್ಮಿಕೊಳ್ಳಬೇಕೆಂದು ತಾಪಂ ಇಒ ಡಾ.ಬಸವರಾಜ ಡಿಸಿ ಪ್ರಕಟಣೆಯಲ್ಲಿತಿಳಿಸಿದ್ದಾರೆ.

Vijaya Karnataka 1 Oct 2020, 5:00 am
ಹಾವೇರಿ: ಸ್ವಚ್ಛ ಭಾರತ್‌ ಮಿಷನ್‌ ಯೋಜನೆಯಡಿ ಘನತ್ಯಾಜ್ಯ ನಿರ್ವಹಣೆ ಹಾಗೂ ಗ್ರಾಮೀಣ ಸಮುದಾಯದಲ್ಲಿಜಾಗೃತಿ ಮೂಡಿಸುವ ಸಲುವಾಗಿ ಸ್ವಚ್ಛೋತ್ಸವ-ನಿತ್ಯೋತ್ಸವ ಮಾಸಾಚರಣೆ ಹಮ್ಮಿಕೊಳ್ಳಬೇಕೆಂದು ತಾಪಂ ಇಒ ಡಾ.ಬಸವರಾಜ ಡಿಸಿ ಪ್ರಕಟಣೆಯಲ್ಲಿತಿಳಿಸಿದ್ದಾರೆ.
Vijaya Karnataka Web clean up celebration tomorrow
ನಾಳೆಯಿಂದ ಸ್ವಚ್ಛೋತ್ಸವ-ನಿತ್ಯೋತ್ಸವ ಮಾಸಾಚರಣೆ

ಅ.2 ರಂದು ಮಹಾತ್ಮ ಗಾಂಧೀಜಿಯವರ ಜಯಂತಿ ಪ್ರಯುಕ್ತ ಗ್ರಾಮಸಭೆ ಹಮ್ಮಿಕೊಂಡಿದ್ದು, ಎಲ್ಲ33 ಗ್ರಾಮ ಪಂಚಾಯಿತಿಗಳಲ್ಲಿಉದ್ಯೋಗ ಖಾತ್ರಿ ಯೋಜನೆಯಡಿ 2021-22 ಸಾಲಿನ ವಿಶೇಷವಾಗಿ ರೈತರಿಂದ ರೈತರಿಗಾಗಿ ಕ್ರಿಯಾ ಯೋಜನೆ ಹಮ್ಮಿಕೊಳ್ಳಲಾಗಿದೆ. ಅ.2 ರಿಂದ ನವೆಂಬರ್‌ 1ರವರೆಗೆ ನಡೆಯುವ ಗ್ರಾಮಸಭೆಯಲ್ಲಿಎಲ್ಲರೈತರು ಕಾಮಗಾರಿಗಳನ್ನು ನಮೂದಿಸಬೇಕು. ಹಾಗೆ ನಿಮ್ಮ ಮೊಬೈಲ್‌ನಲ್ಲಿರುವ ಕಾಯಕ ಮಿತ್ರ ಆ್ಯಪ್‌ ಬಳಸಿ ನಿಮಗೆ ಅವಶ್ಯವಿರುವ ಕಾಮಗಾರಿಗಳನ್ನು ನಮೂದಿಸಿ, ಅ.2ರ ಗ್ರಾಮಸಭೆಯಲ್ಲಿಪಾಲ್ಗೊಳ್ಳಿ ಎಂದು ಸಲಹೆ ನೀಡಿದ್ದಾರೆ.

ರೈತರೇ ತಮ್ಮ ಜಮೀನಿನಲ್ಲಿವಯಕ್ತಿಕವಾಗಿ ಬೇಕಾಗುವ ಹಾಗೂ ಅವಶ್ಯವಿರುವ ಕಾಮಗಾರಿಗಳನ್ನು ನಮೂದಿಸಿಕೊಳ್ಳಬೇಕು. ಶೇ. 65 ರಷ್ಟು ನೈಸರ್ಗಿಕ ಸಂಪನ್ಮೂಲ ಕಾಮಗಾರಿಗಳನ್ನು ಮತ್ತು ಅನುಷ್ಠಾನ ಇಲಾಖೆಯ ಕಾಮಗಾರಿಗಳನ್ನು ಇಟ್ಟುಕೊಳ್ಳುವ ಸುವರ್ಣಾವಕಾಶ ದೊರೆಯುತ್ತಿದೆ. ಈ ನಿಟ್ಟಿನಲ್ಲಿಎಲ್ಲ33 ಗ್ರಾಪಂ ಪಿಡಿಒಗಳು ಗ್ರಾಮಸಭೆ ಹಿಂದಿನ ದಿನದಂದು ಡಂಗುರ ಜಿಂಗಲ್ಸ್‌ ಮುಖಾಂತರ ಪ್ರಚಾರಪಡಿಸಬೇಕು ಎಂದು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ