ಆ್ಯಪ್ನಗರ

ಕೋಡಿ ಬಿದ್ದ ಹೆಗ್ಗೇರಿ ಕೆರೆ

ಹಾವೇರಿ: ಕಳೆದ ನಾಲ್ಕೈದು ದಿನಗಳಿಂದ ಸುರಿದ ಮಳೆಗೆ ಹಾವೇರಿಯ ಐತಿಹಾಸಿಕ ಹೆಗ್ಗೇರಿ ಕೆರೆ ಭರ್ತಿಯಾಗಿ ಕೋಡಿ ಬಿದ್ದಿದ್ದು, ನೋಡುಗರ ಗಮನ ಸೆಳೆಯುತ್ತಿದೆ. ನಗರದ ಹೊರವಲಯದ ಹೆಗ್ಗೇರಿ ಕೆರೆ ದಶಕದ ಬಳಿಕ ಮೈದುಂಬಿ ಜನರನ್ನು ಆಕರ್ಷಿಸುತ್ತಿದೆ.

Vijaya Karnataka 12 Oct 2019, 5:00 am
ಹಾವೇರಿ: ಕಳೆದ ನಾಲ್ಕೈದು ದಿನಗಳಿಂದ ಸುರಿದ ಮಳೆಗೆ ಹಾವೇರಿಯ ಐತಿಹಾಸಿಕ ಹೆಗ್ಗೇರಿ ಕೆರೆ ಭರ್ತಿಯಾಗಿ ಕೋಡಿ ಬಿದ್ದಿದ್ದು, ನೋಡುಗರ ಗಮನ ಸೆಳೆಯುತ್ತಿದೆ. ನಗರದ ಹೊರವಲಯದ ಹೆಗ್ಗೇರಿ ಕೆರೆ ದಶಕದ ಬಳಿಕ ಮೈದುಂಬಿ ಜನರನ್ನು ಆಕರ್ಷಿಸುತ್ತಿದೆ.
Vijaya Karnataka Web 11 HAVERI 3_23
ಹಾವೇರಿಯ ಹೆಗ್ಗೇರಿ ಕೆರೆ ಕೋಡಿ ಬಿದ್ದಿರುವುದು.


ಪ್ರಸಕ್ತ ಮುಂಗಾರು ಹಂಗಾಮಿನಲ್ಲಿಜಿಲ್ಲೆಸೇರಿದಂತೆ ಮಲೆನಾಡಿನ ಭಾಗದಲ್ಲಿಸುರಿದ ನಿರಂತರ ಮಳೆಯಿಂದ ಹೆಗ್ಗೇರಿ ಕೆರೆ ತುಂಬಿ ಕೋಡಿ ಬೀಳುವ ಹಂತಕ್ಕೆ ಬಂದಿತು. ಆದರೆ, ಕೆರೆಯ ಒಂದು ಕಡೆ ಒಡ್ಡು ಒಡೆದು ನೀರು ಪೋಲಾಗಿದ್ದರಿಂದ ಕೋಡಿ ಬೀಳಲಿಲ್ಲ. ಜಿಲ್ಲಾಧಿಕಾರಿಗಳು ಹರಿದು ಹೋಗುತ್ತಿರುವ ಕೆರೆಯ ನೀರನ್ನು ಬಂದ್‌ ಮಾಡಿದ್ದರಿಂದ ಕಳೆದ ವಾರದಿಂದ ಸುರಿದ ಮಳೆಗೆ ದಶಕದ ನಂತರ ಹೆಗ್ಗೇರಿ ಕೆರೆ ಕೋಡಿ ಬಿದ್ದು, ಕಂಗೊಳಿಸುತ್ತಿದೆ.

ಅಂತರ್ಜಲ ಮಟ್ಟ ಹೆಚ್ಚಳ:
ಹೆಗ್ಗೇರಿ ಕೆರೆ ತುಂಬಿ ಹರಿಯುತ್ತಿರುವುದರಿಂದ ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿರುವ ಸಾವಿರಕ್ಕೂ ಅಧಿಕ ಕೊಳವೆ ಬಾವಿಗಳ ಅಂತರ್ಜಲ ಮಟ್ಟವು ಹೆಚ್ಚಾಗಿ ನೀರಾವರಿಗೆ ಅನುಕೂಲವಾಗಲಿದೆ. ನಗರ ಜನರಿಗೆ ನೀರನ ಸಮಸ್ಯೆ ದೂರಾಗಲಿದೆ.

ಜನ ಆಕರ್ಷಣೆ ಕೆರೆ:
ಐತಿಹಾಸಿಕ ಹೆಗ್ಗೇರಿ ಕೆರೆ ಮೈದುಂಬಿರುವ ಕಾರಣ ಜನರನ್ನು ಆಕರ್ಷಿಸುತ್ತಿದೆ. ಜನರು ಕೆರೆ ವೀಕ್ಷಣೆಗೆ ಹೋಗುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಕಾರಣ ಪ್ರಯಾಣಿಕರನ್ನು ಗಮನ ಸೆಳೆಯುತ್ತಿದೆ.

ಹೆಗ್ಗೇರಿ ಕೆರೆ ಮತ್ತು ದಂಡೆಯಲ್ಲಿರುವ ಹೆಗ್ಗೇರಿಮ್ಮ ದೇವಿಗೆ ಜನರು ವಿಶೇಷ ಪೂಜೆ ಮಾಡುವ ಮೂಲಕ ಬಾಗೀನ ಅರ್ಪಿಸುತ್ತಿದ್ದಾರೆ. ಇನ್ನೂ ಕೋಡಿ ಬೀಳುತ್ತಿರುವ ಜಾಗದಲ್ಲಿಯುವಕರು ನೀರಲ್ಲಿಆಟವಾಡುವ ಮೂಲಕ ಮಜಾ ಮಾಡುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ