ಆ್ಯಪ್ನಗರ

ಹತ್ತಿಮತ್ತೂರ ಗ್ರಾಮದೇವಿ ಜಾತ್ರೆ ಸಂಭ್ರಮ

ಸವಣೂರು: ತಾಲೂಕಿನ ಹತ್ತಿಮತ್ತೂರ ಗ್ರಾಮದ ಗ್ರಾಮದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀ ಗ್ರಾಮದೇವಿ (ದ್ಯಾಮವ್ವ ದೇವಿ)ಯ ವೈವಿಧ್ಯಮಯ ಮೆರವಣಿಗೆ ದೇವಸ್ಥಾನದ ಮುಖ್ಯ ಪ್ರಾಂಗಣದಿಂದ ಗ್ರಾಮದ ಚೌತಮನೆ ಕಟ್ಟೆಯ ವರೆಗೆ ಸಾಗಿತು.

Vijaya Karnataka 17 May 2019, 5:00 am
ಸವಣೂರು: ತಾಲೂಕಿನ ಹತ್ತಿಮತ್ತೂರ ಗ್ರಾಮದ ಗ್ರಾಮದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀ ಗ್ರಾಮದೇವಿ (ದ್ಯಾಮವ್ವ ದೇವಿ)ಯ ವೈವಿಧ್ಯಮಯ ಮೆರವಣಿಗೆ ದೇವಸ್ಥಾನದ ಮುಖ್ಯ ಪ್ರಾಂಗಣದಿಂದ ಗ್ರಾಮದ ಚೌತಮನೆ ಕಟ್ಟೆಯ ವರೆಗೆ ಸಾಗಿತು.
Vijaya Karnataka Web HVR-16SVR3


ಗ್ರಾಮ ದೇವಿಯ ಮೆರವಣಿಗೆಯನ್ನು ವೀಕ್ಷಿಸಿಸಲು ಬೇರೆ ಬೇರೆ ಊರಿನಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿದ್ದರು.

ಮೇಡ್ಲೆರಿಯ ರಂಗು ರಂಗು ಮದ್ದಿನ ಬಾಣ ಬಿರುಸುಗಳು ನೋಡುಗರ ಎದೆ ಝಲ್‌ ಎನಿಸುತ್ತಿತ್ತು. ಹಾವೇರಿಯ ದುರ್ಗಾದೇವಿ ಬ್ಯಾಂಡ್‌ ಕಂಪನಿಯವರು ನುಡಿಸುತ್ತಿದ್ದ ಸಂಗೀತ ಯುವಕರಿಗೆ ಖುಷಿ ನೀಡಿ ಎಲ್ಲರನ್ನು ಕುಣಿಯುವಂತೆ ಮಾಡಿತು. ವೀರಯ್ಯ ಸಂಕಿನಮಠ ಕಲಾವಿದರ ತಂಡದವರು ಮಾಡುತ್ತಿದ್ದ ಕೋಲಾಟ ಅವರ ಹಾಕುತ್ತಿದ್ದ ಹೆಜ್ಜಿಗಳು ತುಂಬಾ ರಂಜಿನೆ ಒದಗಿಸಿತು. ಸೂರಣಗಿಯ ಶ್ರೀ ಬೀರಲಿಂಗೇಶ್ವರ ಡೊಳ್ಳಿನ ಕಲಾತಂಡ ಹಾಗೂ ಹತ್ತಿಮತ್ತೂರಿನ ಕನಕದಾಸ ಕಲಾ ಹವ್ಯಾಸಿ ಡೊಳ್ಳಿನ ಮೇಳದವರು ಹಾರುತ್ತಾ ಹಾರುತ್ತಾ ಬಡಿಯುತ್ತಿದ್ದ ಡೊಳ್ಳು ಕುಣಿತ ಇನ್ನು ನೋಡಬೇಕು ಎನಿಸುತ್ತಿತ್ತು.

ಹೊನ್ನಾಳಿಯ ಮಹೇಶ್ವರಪ್ಪರ ಕೀಲು ಕುದುರೆಯ ಕುಣಿತಕ್ಕೆ ಎಲ್ಲರೂ ಮನಸೋತರು. ಹತ್ತಿಮತ್ತೂರಿನ ಪರಶುರಾಮ ಭಜಂತ್ರಿ ಹಾಗೂ ನಾಗಪ್ಪ ಭಜಂತ್ರಿಯವರ ಶಹನವಾದನ, ಹೊನ್ನತ್ತೇಮ್ಮದೇವಿಯ ಹಲಗೆ ಕುಣಿತ, ಬಸವೇಶ್ವರ ಭಜನಾ ಮೇಳ, ಸೇವಾಲಾಲ ಲಂಬಾಣಿ ಮೇಳ ಹೀಗೆ ಹತ್ತು ಹಲವಾರು ಜಾನಪದ ತಂಡಗಳು ಎಲ್ಲರಿಗೂ ಖುಷಿ, ಸಂತೋಷ, ಮೋಜು ಮಸ್ತಿ ನೀಡಿದವು,

ಇದರ ಜೊತೆಗೆ ಮುಕ್ತಿಮಂದಿರ ಕ್ಷೇತ್ರದ ಗಜರಾಜ (ಆನೆ)ನ ನಡಿಗೆ ಅದರ ಕುಣಿತ ದೇವಿಗೆ ಮಾಲೆ ಹಾಕುತ್ತಿದ್ದ ದೃಶ್ಯ. ಸಣ್ಣ ಸಣ್ಣ ಮಕ್ಕಳಿಗೆ ಅತ್ಯಂತ ಖುಷಿ ನೀಡಿತು. ಇಡೀ ಊರು ತುಂಬಾ ಜಡೆ ಗ್ರಾಮದ ಶ್ರೀ ರೇಣುಕಾಂಬ ಹಾಗೂ ಮೋಟೇಬೆನ್ನೂರ ಗ್ರಾಮದ ವೈಭವ ಲೈಟಿನ ಅಲಂಕಾರ ಝಗ್‌ ಮಗಿಸುವ ಲೈಟಿನ ಚಿತ್ತಾರ, ಮಂಟಪ ಎಲ್ಲಾ ಭಕ್ತಾಧಿಗಳನ್ನು ಮನಸೂರಗೊಂಡಿತು. ಬೆಳತನಕನೂ ಸಾವಿರಾರೂ ಯುವಕರು ಕುಣಿದು ಕುಪ್ಪಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ