ಆ್ಯಪ್ನಗರ

ಭಜನಾ ಸ್ಪರ್ಧೆಯಿಂದ ಸಂಸ್ಕೃತಿ ರಕ್ಷಣೆ

ಹಾವೇರಿ: ಯುವಕರು ಪಾಶ್ಚಿಮಾತ್ಯ ಸಂಸ್ಕೃತಿಯಾದ ಡಿಜೆ ಧ್ವನಿವರ್ಧಕಗಳಿಗೆ ದಾಸರಾಗಿರುವಾಗಲೂ ಭಾರತೀಯ ಮೂಲ ಸಂಸ್ಕೃತಿಯಾದ ಭಜನಾ ಸ್ಪರ್ಧೆ ಏರ್ಪಡಿಸಿರುವ ಕಾರ್ಯ ಶ್ಲಾಘನೀಯ ಎಂದು ಹಾವೇರಿ ಗ್ರಾಮೀಣ ಪೋಲೀಸ್‌ ಠಾಣೆ ಪಿಎಸ್‌ಐ ರಾಜೇಂದ್ರನಾಯ್ಕ ಎಮ್‌.ಎನ್‌. ಹೇಳಿದರು.

Vijaya Karnataka 12 Sep 2019, 5:00 am
ಹಾವೇರಿ: ಯುವಕರು ಪಾಶ್ಚಿಮಾತ್ಯ ಸಂಸ್ಕೃತಿಯಾದ ಡಿಜೆ ಧ್ವನಿವರ್ಧಕಗಳಿಗೆ ದಾಸರಾಗಿರುವಾಗಲೂ ಭಾರತೀಯ ಮೂಲ ಸಂಸ್ಕೃತಿಯಾದ ಭಜನಾ ಸ್ಪರ್ಧೆ ಏರ್ಪಡಿಸಿರುವ ಕಾರ್ಯ ಶ್ಲಾಘನೀಯ ಎಂದು ಹಾವೇರಿ ಗ್ರಾಮೀಣ ಪೋಲೀಸ್‌ ಠಾಣೆ ಪಿಎಸ್‌ಐ ರಾಜೇಂದ್ರನಾಯ್ಕ ಎಮ್‌.ಎನ್‌. ಹೇಳಿದರು.
Vijaya Karnataka Web 11 HAVERI 5_23

ತಾಲೂಕಿನ ಗೌರಾಪೂರ ಗ್ರಾಮದಲ್ಲಿನಡೆದ ಸವಾಲ್‌ ಜವಾಬ್‌ ಭಜನಾ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗೌರಾಪೂರ ಗ್ರಾಮದ ಗಜಾನನ ಯುವ ಘರ್ಜನೆ ಯುವಕ ಸಂಘದ ಯುವಕರು ಜಿಲ್ಲೆಯ ಇತರ ಗ್ರಾಮದ ಯುವಕರಿಗೆ ಮಾದರಿಯಾಗಿದ್ದಾರೆ. ಭಾರತೀಯ ಮೂಲ ಸಂಸ್ಕೃತಿಯನ್ನು ಕಾಪಾಡುವುದು ಮತ್ತು ಅದನ್ನು ಪೊಷಿಸುವದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.

ಗ್ರಾಮದ ಹಿರಿಯರಾದ ಈರಣ್ಣ ಗರಾಸಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಪ್ರಕಾಶ ಗುಂಡಜ್ಜನವರ, ಭೀಮಪ್ಪ ಭೀಮನಾಯ್ಕರ, ಮಂಜುನಾಥ ಶೆಟ್ಟಿ, ಹೊನ್ನಪ್ಪ, ಯೊಗೇಶಪ್ಪ, ಸಣ್ಣಬಸಪ್ಪ, ಸಿ.ಬಿ.ಶೀಗಿಹಳ್ಳಿ, ಸಣ್ಣಿಂಗಪ್ಪ, ಎಚ್‌.ಎಮ್‌. ಹುಡೆದ, ಶಿವಾನಂದ ನಾಯಕ, ಫಕ್ಕೀರೇಶ, ಹನುಮಂತಪ್ಪ, ಲಿಂಗರಾಜ, ಸತೀಶ ತಿಮ್ಮಣ್ಣನವರ ಸೇರಿದಂತೆ ಗ್ರಾಮ ಮುಖಂಡರು ಯುವಕರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ