ಆ್ಯಪ್ನಗರ

ದಾನಮ್ಮ ದೇವಿ ಜಾತ್ರಾ ಮಹೋತ್ಸವ 19ರಿಂದ

ಬ್ಯಾಡಗಿ: ಪಟ್ಟಣದ ನೆಹರುನಗರದಲ್ಲಿರುವ ಶ್ರೀ ದಾನಮ್ಮ ದೇವಿ ಜಾತ್ರಾ ಮಹೋತ್ಸವವು ನ.19 ರಿಂದ 26 ರವರೆಗೆ 7 ದಿನ ವಿಜೃಂಭಣೆಯಿಂದ ನಡೆಯಲಿದೆ.

Vijaya Karnataka 15 Nov 2019, 5:00 am
ಬ್ಯಾಡಗಿ: ಪಟ್ಟಣದ ನೆಹರು ನಗರದಲ್ಲಿರುವ ಶ್ರೀ ದಾನಮ್ಮ ದೇವಿ ಜಾತ್ರಾ ಮಹೋತ್ಸವವು ನ.19 ರಿಂದ 26 ರವರೆಗೆ 7 ದಿನ ವಿಜೃಂಭಣೆಯಿಂದ ನಡೆಯಲಿದೆ.
Vijaya Karnataka Web danamma devi jatra jubilee from 19th
ದಾನಮ್ಮ ದೇವಿ ಜಾತ್ರಾ ಮಹೋತ್ಸವ 19ರಿಂದ


ನ.19 ಬೆಳಿಗ್ಗೆ 8 ಗಂಟೆಗೆ ಮುಪ್ಪಿನೇಶ್ವರ ಮಠದ ಚನ್ನಮಲ್ಲಿಕಾರ್ಜುನಶ್ರೀಗಳಿಂದ ಧ್ವಜಾರೋಹಣ, ಸಂಜೆ 6ಕ್ಕೆ ಗೋಮಾತೆ ಪೂಜೆಯೊಂದಿಗೆ ಹೂವಿನಶಿಗ್ಲಿವಿರಕ್ತಮಠದ ಮನಿಪ್ರ ಚನ್ನವೀರಶ್ರೀಗಳಿಂದ 'ಶರಣ ಸಂಸ್ಕೃತಿ ದರ್ಶನ' ಪ್ರವಚನ ಆರಂಭವಾಗಲಿದೆ. ಶಿವಮೊಗ್ಗ ಬೆಕ್ಕಿನಕಲ್ಮಠದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರಶ್ರೀಗಳು ಸಾನಿಧ್ಯ ವಹಿಸಲಿದ್ದು, ಉದ್ಘಾಟಕರಾಗಿ ಮಾಜಿ ಶಾಸಕ ಸುರೇಶಗೌಡ ಪಾಟೀಲ, ಅತಿಥಿಗಳಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜಿಲ್ಲಾನಿರ್ದೇಶಕ ಮಹಾಬಲ ಕುಲಾಲ ಉಪಸ್ಥಿತರಿರುವರು. ನ.20 ರಂದು ಸಂಜೆ 6 ಗಂಟೆಗೆ ಪಟ್ಟಣದ ಎಲ್ಲಾದೇವಸ್ಥಾನಗಳ ಅರ್ಚಕರಿಗೆ ಸನ್ಮಾನ ಕಾರ‍್ಯಕ್ರಮ ನಡೆಯಲಿದೆ.

ಚೊಚ್ಚಲ ಗರ್ಭಿಣಿಯರಿಗೆ ಸೀಮಂತ: ನ.21 ರಂದು ಚೊಚ್ಚಲು ಗರ್ಭಿಣಿಯರಿಗೆ ಸೀಮಂತ ಕಾರ‍್ಯಕ್ರಮ ಜರುಗಲಿದ್ದು, ಬಾಳೆ ಹೊನ್ನೂರು ರಂಭಾಪುರಿಪೀಠದ ವೀರಸಿಂಹಾಸನಾಧೀಶ್ವರ ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ‍್ಯಶ್ರೀಗಳ ಸಾನಿಧ್ಯ ವಹಿಸಲಿದ್ದಾರೆ. ನ.23ರಂದು ಎಲ್‌.ಆರ್‌.ಮೇಲಗಿರಿ ಇವರ ಸಮ್ಮುಖದಲ್ಲಿಹಿರಿಯ ನಾಗಕರಿಗೆ ಸನ್ಮಾನ ಕಾರ‍್ಯಕ್ರಮ ಜರುಗಲಿದೆ.

ನ.24 ರಂದು ಸಹಸ್ರಾರು ಸಂಖ್ಯೆ ಮುತ್ತೆತ್ರೖದೆಯರಿಗೆ ಉಡಿ ತುಂಬುವ ಕಾರ‍್ಯ ಕ್ರಮ ಜರುಗಲಿದ್ದು ಶಿರಹಟ್ಟಿ ಪೀಠಾಧ್ಯಕ್ಷರಾದ ಶ್ರೀ ಫಕ್ಕೀರ ಸಿದ್ಧರಾಮಶ್ರೀಗಳು ಸಾನಿಧ್ಯ ವಹಿಸಲಿದ್ದಾರೆ.

ಸರ್ವಧರ್ಮ ಸಾಮೂಹಿಕ ವಿವಾಹ: ನ.25 ರಂದು ಬೆಳಿಗ್ಗೆ 10ಕ್ಕೆ ಸಾಮೂಹಿಕ ವಿವಾಹ ಕಾರ‍್ಯಕ್ರಮಗಳು ನಡೆಯಲಿವೆ. ಹಾವೇರಿ ಹುಕ್ಕೇರಿಮಠದ ಸದಾಶಿವಶ್ರೀಗಳು ಸಾನಿಧ್ಯ ವಹಿಸಲಿದ್ದು, ಸಂಸದ ಶಿವಕುಮಾರ ಉದಾಸಿ ಹಾಗೂ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅತಿಥಿಗಳಾಗಿ ಉಪಸ್ಥಿತರಿರುವರು.

ನ.26 ಮಹಾರಥೋತ್ಸವ: ಜಾತ್ರೆಯ ಅಂತಿಮ ದಿನವಾದ ಛಟ್ಟಿ ಅಮವಾಸ್ಯೆ (ನ.26) ದಿನದಂದು ಸಂಜೆ 5 ಗಂಟೆಗೆ ಮಹಾರಥೋತ್ಸವ ಜರುಗಲಿದೆ, ಅಂದು ಬೆಳಿಗ್ಗೆ 10 ಕ್ಕೆ ಸಂಗೀತ ರಸಮಂಜರಿ ಕಾರ‍್ಯಕ್ರಮ, ಮಧ್ಯಾಹ್ನ 12ಕ್ಕೆ ಮಹಾಪ್ರಸಾದ, ಸಂಜೆ 4ಕ್ಕೆ ದೇವಿಯ ಮೂರ್ತಿಯ ಬೆಳ್ಳಿಪಲ್ಲಕ್ಕಿ ಉತ್ಸವ, ಸಂಜೆ 7ಕ್ಕೆ ಕಾರ್ತಿಕೋತ್ಸವ ಹಾಗೂ ಮನೋರಂಜನೆ ಕಾರ‍್ಯಕ್ರಮ ಜರುಗುವುದಾಗಿ ದೇವಸ್ಥಾನ ಸಮಿತಿ ಪ್ರಕಟಣೆಯಲ್ಲಿತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ