ಆ್ಯಪ್ನಗರ

ಬಿಜೆಪಿಯಿಂದ ಕರಾಳ ದಿನಾಚರಣೆ

ಬ್ಯಾಡಗಿ :ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷ ಗಳನ್ನು ರಾಜ್ಯದ ಜನರು ತಿರಸ್ಕರಿಸಿದ್ದು ಬಿಜೆಪಿಗೆ ಜನಾದೇಶ ನೀಡಿದ್ದಾರೆ. ರಾಜ್ಯದ ಒಟ್ಟು ಶೇ.18 ರಷ್ಟು ಮತಗಳನ್ನು ಪಡೆದ ಹಾಗೂ 119 ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡ ಜೆಡಿಎಸ್‌ ಪಕ್ಷ ದ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಿರುವುದು ದುರಂತದ ಸಂಗತಿ ಎಂದು ಶಾಸಕ ವಿರುಪಾಕ್ಷ ಪ್ಪ ಬಳ್ಳಾರಿ ಎಂದು ವಿಷಾಧ ವ್ಯಕ್ತಪಡಿಸಿದರು.

Vijaya Karnataka 24 May 2018, 5:00 am
ಬ್ಯಾಡಗಿ :ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷ ಗಳನ್ನು ರಾಜ್ಯದ ಜನರು ತಿರಸ್ಕರಿಸಿದ್ದು ಬಿಜೆಪಿಗೆ ಜನಾದೇಶ ನೀಡಿದ್ದಾರೆ. ರಾಜ್ಯದ ಒಟ್ಟು ಶೇ.18 ರಷ್ಟು ಮತಗಳನ್ನು ಪಡೆದ ಹಾಗೂ 119 ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡ ಜೆಡಿಎಸ್‌ ಪಕ್ಷ ದ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಿರುವುದು ದುರಂತದ ಸಂಗತಿ ಎಂದು ಶಾಸಕ ವಿರುಪಾಕ್ಷ ಪ್ಪ ಬಳ್ಳಾರಿ ಎಂದು ವಿಷಾಧ ವ್ಯಕ್ತಪಡಿಸಿದರು.
Vijaya Karnataka Web dark day from bjp
ಬಿಜೆಪಿಯಿಂದ ಕರಾಳ ದಿನಾಚರಣೆ

ಪಟ್ಟಣದ ಸುಭಾಷ ಸರ್ಕಲ್‌ ಬಳಿ ಬುಧವಾರ ಜೆಡಿಎಸ್‌, ಕಾಂಗ್ರೆಸ್‌ ಪಕ್ಷ ದ ಅಪವಿತ್ರ ಮೈತ್ರಿಯ ಸರಕಾರ ರಚನೆ ಹಾಗೂ ಪ್ರಜಾಪ್ರಭುತ್ವ ವಿರೋಧಿ ನೀತಿಯನ್ನು ಖಂಡಿಸಿ ಕೈಗೆ ಕಪ್ಪು ಬಟ್ಟೆ ಧರಿಸಿ ಕರಾಳ ದಿನಾಚರಣೆ ನಡೆಸಿ ಮಾತನಾಡಿದರು.

ಕಾಂಗ್ರೆಸ್‌ ಜತೆ ಅಧಿಕಾರ ದುರಾಸೆಗೆ ಸಿಲುಕಿ ಅಪವಿತ್ರ ಮೈತ್ರಿ ಮಾಡಿಕೊಂಡು ಸರಕಾರ ರಚಿಸಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಎಚ್‌.ಡಿ.ಕುಮಾರಸ್ವಾಮಿ ಎರಡು ನಾಲಿಗೆ ಇರುವ ನಾಯಕ. ಕ್ಷ ಣ ಕ್ಷ ಣಕ್ಕೂ ಗೋಸುಂಬೆಯಂತೆ ಬಣ್ಣ ಬದಲಿಸುವ ಗುಣವಿರುವ ಕುಮಾರಸ್ವಾಮಿಯಿಂದ ರಾಜ್ಯ ಅಭಿವೃದ್ಧಿ ಅಸಾಧ್ಯ. ಈ ಅಪವಿತ್ರ ಮೈತ್ರಿ ಸರಕಾರ ಶೀಘ್ರದಲ್ಲೆ ಪತನವಾಗಿ ಮತ್ತೊಮ್ಮೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದರು.

ಪುರಸಭೆ ಅಧ್ಯಕ್ಷ ಬಸವರಾಜ ಛತ್ರದ ಮಾತನಾಡಿ, ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ ಮಾಡುವುದಾಗಿ ಸುಳ್ಳು ಭರವಸೆಗಳನ್ನು ಪ್ರಣಾಳಿಕೆಯಲ್ಲಿ ನೀಡಿ ಈದೀಗ ಅಧಿಕಾರಕ್ಕೆ ಬರುವ ಸಮಯದಲ್ಲಿ 'ನಾನು ಹಾಗೇ ಹೇಳಿಯೆ ಇಲ್ಲ' ಎಂದು ಹೇಳುತ್ತ ಸಾಲಮನ್ನಾ ಮಾಡಲು ಮೀನಾಮೇಷ ಎಣಿಸುತ್ತಿರುವ ಕುಮಾಸ್ವಾಮಿಯಂಥಹ ನಾಯಕರನ್ನು ಹಿಂದೆಂದು ರಾಜ್ಯ ಕಂಡಿಲ್ಲ. ಖಾತೆ ಹಂಚಿಕೆ ಸಂಬಂಧ ಈಗಾಗಲೇ ಎರಡು ಪಕ್ಷ ಗಳ ನಾಯಕರಲ್ಲಿ ಕಿತ್ತಾಟ ಶುರುವಾಗಿದ್ದು ಮುಂದಿನ 6 ತಿಂಗಳಲ್ಲಿ ಈ ಸರಕಾರ ಪತನವಾಗಲಿದೆ ಎಂದರು.

ಶಂಕ್ರಣ್ಣ ಮಾತನವರ, ವೀರೇಂದ್ರ ಶೆಟ್ಟರ, ಜಯಣ್ಣ ಮಲ್ಲಿಗಾರ, ರಾಮಣ್ಣ ಉಕ್ಕುಂದ, ರವೀಂದ್ರ ಪಟ್ಟಣ ಶೆಟ್ಟಿ, ಮುರಿಗೆಪ್ಪ ಶೆಟ್ಟರ, ವಿಜಯಕುಮಾರ ಮಾಳಗಿ, ಬಸವರಾಜ ಹಂಜಿ, ಪ್ರಶಾಂತ ಯಾದವಾಡ, ಸುರೇಶ ಉದ್ಯೋಗಣ್ಣನವರ, ಮನೋಹರ ಅರ್ಕಾಚಾರಿ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ