ಆ್ಯಪ್ನಗರ

ಜಿಂಕೆ ದಾಳಿ, ರೈತರಿಗೆ ಚಿಂತೆ

ಹಾವೇರಿ :ಸತತ ಬರಗಾಲದಿಂದ ಚಿಂತೆಗೀಡಾದ್ದ ರೈತ, ಈ ಬಾರಿ ಉತ್ತಮ ಮಳೆಯಾದರೂ ಚಿಂತೆಯಲ್ಲಿದ್ದಾನೆ. ಇದಕ್ಕೆ ಕಾರಣ ಕೃಷ್ಣಮೃಗ (ಜಿಂಕೆ)!. ಸತತ ಐದು ವರ್ಷಗಳಿಂದ ಬರಗಾಲದಿಂದ ಕಂಗೆಟ್ಟದ್ದ ರೈತನಿಗೆ ಈ ಬಾರಿ ಉತ್ತಮ ಮಳೆ ಆಗುತ್ತಿರುವುದರಿಂದ ಸಂತಸಗೊಂಡು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾನೆ.

Vijaya Karnataka 20 Jun 2018, 5:00 am
ಹಾವೇರಿ :ಸತತ ಬರಗಾಲದಿಂದ ಚಿಂತೆಗೀಡಾದ್ದ ರೈತ, ಈ ಬಾರಿ ಉತ್ತಮ ಮಳೆಯಾದರೂ ಚಿಂತೆಯಲ್ಲಿದ್ದಾನೆ. ಇದಕ್ಕೆ ಕಾರಣ ಕೃಷ್ಣಮೃಗ (ಜಿಂಕೆ)!. ಸತತ ಐದು ವರ್ಷಗಳಿಂದ ಬರಗಾಲದಿಂದ ಕಂಗೆಟ್ಟದ್ದ ರೈತನಿಗೆ ಈ ಬಾರಿ ಉತ್ತಮ ಮಳೆ ಆಗುತ್ತಿರುವುದರಿಂದ ಸಂತಸಗೊಂಡು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾನೆ.
Vijaya Karnataka Web deer attack farmers worry
ಜಿಂಕೆ ದಾಳಿ, ರೈತರಿಗೆ ಚಿಂತೆ


ಮುಂಗಾರು ಹಂಗಾಮಿನ ಆರಂಭಿಕ ಮಳೆಗಳು ಸುರಿಸಿದ ಭರಪೂರ ಮಳೆಯಿಂದ ಹರ್ಷಗೊಂಡ ರೈತ ಸಮುದಾಯ ಉತ್ಸಾಹದಿಂದ ಭೂಮಿ ಹದಗೊಳಿಸಿ, ಬಿತ್ತನೆ ಮಾಡಿದೆ. ಒಂದೆಡೆ ಬೀಜ ಮೊಳಕೆಯೊಡೆದು ಸಸಿಗಳಾಗುತ್ತಿದ್ದರೆ ಇನ್ನೊಂದೆಡೆ ಜಿಂಕೆ ದಾಳಿ ಮಾಡುವುದರಿಂದ ರೈತರು ಬೆಳೆಗಳ ಸಸಿಗಳನ್ನು ಹಗಲು-ರಾತ್ರಿಯನ್ನದೇ ಕಾವಲು ಕಾಯುತ್ತಿದ್ದಾರೆ.

ಹಾವೇರಿ ತಾಲೂಕಿನ ದೇವಗಿರಿ, ಕೋಳೂರು, ಗಣಜೂರ ಕರ್ಜಗಿ, ಅಗಡಿ, ಸವಣೂರ ತಾಲೂಕಿನ ಕಳಸೂರು, ಮಂಟಗಣಿ, ರಟ್ಟಹಳ್ಳಿ, ಹಿರೇಕೆರೂರ, ಬ್ಯಾಡಗಿ, ರಾಣೇಬೆನ್ನೂರ ತಾಲೂಕಿನ ನಾನಾ ಗ್ರಾಮಗಳು ಸೇರಿದಂತೆ ಮುಂಗಾರು ಮಳೆಗೆ ಬಿತ್ತನೆ ಮಾಡಿರುವ ಹೆಸರು, ಸೊಯಾಬಿನ್‌, ಶೇಂಗಾ, ಹತ್ತಿ ಬಿತ್ತನೆ ಮಾಡಲಾಗಿದೆ. ಈ ಜಮೀನುಗಳಿಗೆ ಜಿಂಕೆ ಹಿಂಡು ಲಗ್ಗೆ ಹಾಕಿ ಬೆಳೆ ನಾಶ ಮಾಡುತ್ತಿದ್ದು, ರೈತರು ಕಂಗಾಲಾಗಿದ್ದಾರೆ.

ಜಿಂಕೆ ತಂಡ ಆಗಮನ:

ಮುಂಗಾರು ಮಳೆಗಾಲದ ಸಮಯದಲ್ಲಿ ಆಹಾರದ ಕೊರತೆಯಿಂದ ಬಯಲು ಸೀಮೆಯ ಕಡೆಗೆ ಜಿಂಕೆಗಳ ತಂಡ ಮುಖ ಮಾಡುತ್ತಿವೆ. 30 ರಿಂದ 40 ಜಿಂಕೆಗಳ ತಂಡ ಬಿತ್ತಿದ ಜಮೀನಿಗೆ ಲಗ್ಗೆ ಇಟ್ಟು ಕ್ಷಣ ಮಾತ್ರದಲ್ಲಿ ಬೆಳೆಯನ್ನು ನಾಶ ಮಾಡುತ್ತಿವೆ.

ರಾತ್ರಿವಿಡಿ ಕಾವಲು ಕಾಯುವ ರೈತರು:

ಬಿತ್ತಿದ ಬೀಜ ಮೊಳಕೆ ಹೊಡೆದು ಭೂಮಿ ಬಿಟ್ಟು ನಾಲ್ಕು ಇಂಚು ಮೇಲೆ ಬರುತ್ತಿದ್ದಂತೆ ಜಿಂಕೆಗಳು ಹಾವಳಿ ಮಾಡುತ್ತಿರುವುದರಿಂದ ರೈತರು ಹಗಲು ರಾತ್ರಿ ಕಾವಲು ಕಾಯಬೇಕಾಗಿದೆ.

ಕೃಷ್ಣಮೃಗಗಳ ಹಾವಳಿ ಹಾವೇರಿ ತಾಲೂಕಿನ ಗಣಜೂರ, ಕೋಳೂರು ಕರ್ಜಗಿ, ಸವಣೂರ ತಾಲೂಕಿನ ಕಳಸೂರು ಮಂಟಗಣಿ ರಟ್ಟಹಳ್ಳಿ ಭಾಗಗಳಲ್ಲಿ ಸೇರಿದಂತೆ ನಾನಾಕಡೆಗಳಲ್ಲಿ ಹೆಚ್ಚಾಗಿದೆ. ಇಲ್ಲಿಯ ಜಮೀನುಗಳಿಗೆ ಬೆಳ್ಳಂಬೆಳಗ್ಗೆ ಹಾಗೂ ಸಂಜೆ 50ಕ್ಕೂ ಹೆಚ್ಚು ಸಂಖ್ಯೆಯ ಜಿಂಕೆಗಳು ಲಗ್ಗೆ ಇಟ್ಟು ಜಮೀನಿನಲ್ಲಿ ಬೆಳೆದ ಬೆಳೆಯನ್ನು ಸಂಪೂರ್ಣ ತಿಂದು ಹಾಕುತ್ತಿವೆ. ಇದರಿಂದಾಗಿ ಮತ್ತೆ ಮರಳಿ ಬಿತ್ತನೆ ಮಾಡಬೇಕಾದ ಅನಿವಾರ್ಯತೆಯಿಂದ ರೈತರಿಗೆ ತಲೆನೋವಾಗಿದೆ.

ಸಂಬಂಧಪ್ಟ ಇಲಾಖೆ ಸಿಬ್ಬಂದಿ ರೈತರಿಗೆ ತೊಂದರೆ ಮಾಡುತ್ತಿರುವ ಜಿಂಕೆಗಳನ್ನು ಹಿಡಿದು ರಾಣೇಬೆನ್ನೂರಿನಲ್ಲಿರುವ ಕೃಷ್ಣ ಮೃಗ ಧಾಮಕ್ಕೆ ಸಾಗಿಸಿ ಬೆಳೆಯನ್ನು ರಕ್ಷಿಸಬೇಕು ಎಂದು ಗ್ರಾಮಗಳ ರೈತರ ಮನವಿ.

ಬೆಳೆ ಪರಿಹಾರ ವಿತರಣೆ

ವರ್ಷ ಪರಿಹಾರ

2015-17 20.30 ಲಕ್ಷ ರೂ.

2017-18 12.50 ಲಕ್ಷ ರೂ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ