ಆ್ಯಪ್ನಗರ

ಡೆಂಗೆ, ಮಲೇರಿಯಾ ತಡೆಗೆ ಕ್ರಮ ಅಗತ್ಯ

ತುಮ್ಮಿನಕಟ್ಟಿ : ಮಾರಕ ರೋಗ ಡೆಂಗೆ, ಮಲೇರಿಯಾ, ಚಿಕುನ್‌ ಗುನ್ಯಾದಂತಹ ರೋಗವನ್ನು ತಡೆಗಟ್ಟಲು ಅಧಿಕಾರಿಗಳು ಮುಂಜಾಗೃತ ಕ್ರಮ ಕೈಗೊಳ್ಳಬೇಕೆಂದು ಜಿಪಂ ಸದಸ್ಯ ಗಿರಿಜಮ್ಮ ಬ್ಯಾಲದಹಳ್ಳಿ ಹೇಳಿದರು.

Vijaya Karnataka 13 Jul 2019, 5:00 am
ತುಮ್ಮಿನಕಟ್ಟಿ : ಮಾರಕ ರೋಗ ಡೆಂಗೆ, ಮಲೇರಿಯಾ, ಚಿಕುನ್‌ ಗುನ್ಯಾದಂತಹ ರೋಗವನ್ನು ತಡೆಗಟ್ಟಲು ಅಧಿಕಾರಿಗಳು ಮುಂಜಾಗೃತ ಕ್ರಮ ಕೈಗೊಳ್ಳಬೇಕೆಂದು ಜಿಪಂ ಸದಸ್ಯ ಗಿರಿಜಮ್ಮ ಬ್ಯಾಲದಹಳ್ಳಿ ಹೇಳಿದರು.
Vijaya Karnataka Web dengue action needed to prevent malaria
ಡೆಂಗೆ, ಮಲೇರಿಯಾ ತಡೆಗೆ ಕ್ರಮ ಅಗತ್ಯ


ಅವರು ರಾಣೆಬೆನ್ನೂರು ತಾಲೂಕಿನ ಪತ್ತೇಪುರ ಗ್ರಾಮದಲ್ಲಿ ತುಮ್ಮಿನಕಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂಯುಕ್ತ ಆಶ್ರಯದಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ಹಲವು ಗ್ರಾಮಗಳಲ್ಲಿ ಡೆಂಗೆ, ಮಲೇರಿಯಾ, ಚಿಕುನ್‌ ಗುನ್ಯಾದಂತಹ ಜ್ವರಗಳು ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುವವರೆಗೂ ಸೊಳ್ಳೆಗಳ ನಿಯಂತ್ರಣಕ್ಕೆ ನಿಯಮಿತವಾಗಿ ಫಾಗಿಂಗ್‌ ಹೆಲ್ತ್‌ ಕ್ಯಾಂಪ್‌ಗಳನ್ನು ಮುಂದುವರೆಸಬೇಕು.

ಅಂಗನವಾಡಿ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಅಧಿಕಾರಿಗಳು ಮನೆಮನೆಗಳಿಗೆ ಭೇಟಿ ನೀಡಿ ಸ್ವಚ್ಛತೆ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಮಳೆ ನೀರು ಅಥವಾ ಮಲಿನ ನೀರು ಎಲ್ಲಿಯೂ ನಿಲ್ಲದಂತೆ ಸರಾಗವಾಗಿ ಹರಿದು ಹೋಗುವಂತೆ ನೋಡಿಕೊಳ್ಳಬೇಕು. ಗ್ರಾಪಂ ಸಿಬ್ಬಂದಿ ಚರಂಡಿ ಸ್ವಚ್ಛತೆæ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದರು. ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಜ್ಯೋತಿ ಪೂಜಾರ, ಶಾಲೆಯ ಮುಖ್ಯ ಶಿಕ್ಷ ಕ ಎಚ್‌.ಆರ್‌. ವೆಂಕಣ್ಣನವರ ಜಾಥಾದಲ್ಲಿ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ