ಆ್ಯಪ್ನಗರ

ಡೆಂಗಿ ಜಾಗೃತಿ ಜಾಥಾ: ಜಿ.ಪಂ. ಸಿಇಒ ಚಾಲನೆ

ಹಾವೇರಿ: ರಾಷ್ಟ್ರೀಯ ಡೆಂಗಿ ದಿನದ ಅಂಗವಾಗಿ ಸೊಳ್ಳೆಗಳ ನಿಯಂತ್ರಣ ಹಾಗೂ ಪರಿಸರ ಸ್ವಚ್ಛತೆ ಅರಿವು ಮೂಡಿಸುವ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಜಿ.ಪಂ.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ. ಲೀಲಾವತಿ ಗುರುವಾರ ಹಾವೇರಿಯಲ್ಲಿ ಚಾಲನೆ ನೀಡಿದರು.

Vijaya Karnataka 17 May 2019, 5:00 am
ಹಾವೇರಿ: ರಾಷ್ಟ್ರೀಯ ಡೆಂಗಿ ದಿನದ ಅಂಗವಾಗಿ ಸೊಳ್ಳೆಗಳ ನಿಯಂತ್ರಣ ಹಾಗೂ ಪರಿಸರ ಸ್ವಚ್ಛತೆ ಅರಿವು ಮೂಡಿಸುವ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಜಿ.ಪಂ.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ. ಲೀಲಾವತಿ ಗುರುವಾರ ಹಾವೇರಿಯಲ್ಲಿ ಚಾಲನೆ ನೀಡಿದರು.
Vijaya Karnataka Web HVR-16 HAVERI 3


ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆ]ತ ರೋಗಗಳ ನಿಯಂತ್ರಣ ಕಛೇರಿ ಹಾಗೂ ಜಿಲ್ಲಾ ಆಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಜಾಥಾಕ್ಕೆ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಚಾಲನೆ ನೀಡಿ ಮಾತನಾಡಿದ ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ, ನಗರ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಡೆಂಗಿ ತಡೆಯ ಮುನ್ನೆಚ್ಚರಿಕೆ ಕ್ರಮಗಳ ಕುರಿತಂತೆ ಜಾಗೃತಿ ಮೂಡಿಸುವುದು ಅವಶ್ಯವಾಗಿದೆ. ನಿರಂತರ ಆರೋಗ್ಯ ಶಿಕ್ಷ ಣದ ಮೂಲಕ ಜನರಿಗೆ ಅಧಿಕಾರಿಗಳು-ಸಿಬ್ಬಂದಿ ಜಾಗೃತಿ ಮೂಡಿ ಸುವಂತೆ ಕರೆ ನೀಡಿದರು.

ಜಾಥಾ ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಹೆಚ್‌.ಎಸ್‌, ರಾಘವೇಂದ್ರಸ್ವಾಮಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ನಾಗರಾಜ ನಾಯಕ, ಜಿಲ್ಲಾ ರೋಗವಾಹಕ ಆ]ತ ರೋಗಗಳ ನಿಯಂತ್ರಣ ಅಧಿಕಾರಿ ಡಾ. ಸುಹೀಲ್‌ ಹರವಿ, ತಾಲೂಕಾ ಆರೋಗ್ಯ ಅಧಿಕಾರಿ ಡಾ. ಪ್ರಭಾಕರ ಕುಂದೂರು. ಸಿಬ್ಬಂದಿಗಳಾದ ಮಲ್ಲಿಕಾರ್ಜುನ ಮಡಿವಾಳರ, ಪಿ.ಎನ್‌ ಪಾಟೀಲ್‌, ಜಗದೀಶ ಕೆ, ರವಿ ಕೆ.ಆರ್‌, ರತ್ನಂ, . ಸಿ.ಎಫ್‌ ಹೆಡಿಯಾಲ, ಸರ್ಕಾರಿ ನರ್ಸಿಂಗ್‌ ಶಾಲೆಯ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ