ಆ್ಯಪ್ನಗರ

ಸಂಪರ್ಕ ಕಡಿತ, ಗ್ರಾಮಗಳಲ್ಲಿ ಆತಂಕ

ಶಿಗ್ಗಾವಿ: 15 ದಿನಗಳಿಂದ ಸುರಿಯುತ್ತಿರುವ ಮಳೆ ಅಬ್ಬರಕ್ಕೆ ಜಲಾವೃತಗೊಂಡ ತಾಲೂಕಿನ ಕುರ್ಸಾಪುರ-ಕಲ್ಯಾಣ, ಮುಗಳಿ, ಮಣಕಟ್ಟಿ, ಶೆಡಗರವಳ್ಳಿ, ಹುಲಿಕಟ್ಟಿ-ಹುನಗುಂದ, ಕಲ್ಯಾಣ-ಬಾಡ ಮಾರ್ಗದ ಬಹುತೇಕ ರಸ್ತೆಗಳ ಸಂಪೂರ್ಣ ಸ್ಥಗಿತಗೊಂಡಿವೆ.

Vijaya Karnataka 9 Aug 2019, 5:00 am
ಶಿಗ್ಗಾವಿ: 15 ದಿನಗಳಿಂದ ಸುರಿಯುತ್ತಿರುವ ಮಳೆ ಅಬ್ಬರಕ್ಕೆ ಜಲಾವೃತಗೊಂಡ ತಾಲೂಕಿನ ಕುರ್ಸಾಪುರ-ಕಲ್ಯಾಣ, ಮುಗಳಿ, ಮಣಕಟ್ಟಿ, ಶೆಡಗರವಳ್ಳಿ, ಹುಲಿಕಟ್ಟಿ-ಹುನಗುಂದ, ಕಲ್ಯಾಣ-ಬಾಡ ಮಾರ್ಗದ ಬಹುತೇಕ ರಸ್ತೆಗಳ ಸಂಪೂರ್ಣ ಸ್ಥಗಿತಗೊಂಡಿವೆ.
Vijaya Karnataka Web disconnection anxiety in villages
ಸಂಪರ್ಕ ಕಡಿತ, ಗ್ರಾಮಗಳಲ್ಲಿ ಆತಂಕ


ಗುರುವಾರ ಮುಂದುವರೆದ ಮಳೆಗೆ ಸಾವಿರಾರು ಎಕರೆ ಪ್ರದೇಶಗಳಲ್ಲಿನ ಬೆಳೆ ಸಂಪೂರ್ಣ ಹಾನಿ ಸ್ಥಿತಿಗೆ ತಲುಪಿವೆ. ಶಿಗ್ಗಾವಿ ಪಟ್ಟಣದ ನಾಗನೂರು ಕೆರೆ ಕೋಡಿ ನೀರು ರಭಸದಿಂದ ಹರಿಯತ್ತಿರುವುದರಿಂದ ರಾಷ್ಟ್ರೀಯ ಹೆದ್ದಾರಿ ಸಂಚಾರ ಬುಧವಾರ ರಾತ್ರಿಯಿಂದ ಸ್ಥಗಿತಗೊಂಡಿದೆ. ಸ್ವಲ್ಪ ಬಿಡುವ ನೀಡದ ಮಳೆಗೆ ಗ್ರಾಮೀಣ ಪ್ರದೇಶಗಳಲ್ಲಿ ಅನಾರೋಗ್ಯ ಅನುಭವಿಸುತ್ತಿರುವ ರೋಗಿಗಳಿಗೆ ಚಿಕಿತ್ಸೆ ಸಿಗುತ್ತಿಲ್ಲ. ವೈದ್ಯರು ಗ್ರಾಮೀಣ ಪ್ರದೇಶಗಳಿಗೆ ಹೋಗುತ್ತಿಲ್ಲ.

ಜಲಾವೃತಗೊಂಡ ಕುರ್ಸಾಪುರ-ಬಾಡ, ಮುಗಳಿ-ಹಿರೇಮಣಕಟ್ಟಿ, ಹುಲಿಕಟ್ಟಿ-ಹುನಗುಂದ ರಸ್ತೆ ಅಪಾಯದ ಸಂಚಾರದ ಮುನ್ಸೂಚನೆ ನೀಡುತ್ತಿವೆ. ಈಗಾಗಲೇ ತಾಲೂಕಿನಾದ್ಯಂತ 200 ಕ್ಕೂ ಹೆಚ್ಚು ಮನೆಗಳ ಕುಸಿದಿದ್ದು, ಗ್ರಾಮಸ್ಥರು ಊರು ಬಿಟ್ಟು ಹೋಗುವಂತಿಲ್ಲ.

ನೆರೆ ಹಾವಳಿಯಿಂದ ತತ್ತರಿಸಿದ ಶಿಗ್ಗಾವಿ, ಬಾಡ, ಮುಗಳಿಕಟ್ಟಿ ಗ್ರಾಮಗಳ ನೆರೆ ಪ್ರದೇಶಗಳಿಗೆ ಭೇಟಿ ನೀಡಿ ವೀಕ್ಷಿಸಿದ ಶಾಸಕ ಬಸವರಾಜ ಬೊಮ್ಮಾಯಿ, ಬೆಳೆ ಹಾನಿಗೊಳಗಾದ ರೈತ, ಮನೆ ಕಳೆದುಕೊಂಡ ಸಂತ್ರಸ್ತರಲ್ಲಿ ಧೈರ್ಯ ತುಂಬಿದರು. ಮನೆ ಕಳೆದುಕೊಂಡವರಿಗೆ ಎರಡ್ಮೂರು ದಿನದಲ್ಲಿ ಪರಿಹಾರ ನೀಡುವ ಭರವಸೆ ನೀಡಿದರು.

ಮುಗಳಿಕಟ್ಟಿ ಗ್ರಾಮದ ಮನೆ ಕಳೆದುಕೊಂಡ ಸಂತ್ರಸ್ಥರಿಗೆ ಪರಿಹಾರದ ಚೆಕ್‌ ವಿತರಿಸಿದ ಶಾಸಕರು, ತಹಸೀಲ್ದಾರ ನೇತೃತ್ವದಲ್ಲಿ ಬೆಳೆ ಹಾನಿ ಕುರಿತು ಸಮೀಕ್ಷ ಕೈಗೊಂಡ ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿ ಕಾರಿಗಳ ವರದಿನ್ವಯ ಪರಿಹಾರ ಕಲ್ಪಿಸುತ್ತೇವೆ ಎಂದು ಅಭಯ ನೀಡಿದರು.

ಆಹಾರ ಪದಾರ್ಥಗಳ ಬೆಲೆ ಏರಿಕೆ: ಮುಂದುವರೆದ ಮಳೆ, ಬಡವರ ಬದುಕಿಗೆ ಬರೆ ಎಳದಂತಾಗಿದೆ. ಈ ಮಧ್ಯೆ ನಿತ್ಯೆ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿದೆ. ತರಕಾರಿ ಬೆಲೆ ತುಟ್ಟಿಯಾಗಿದೆ. ಹೀಗಾಗಿ ಬಡವರಲ್ಲಿ ಬದುಕಿನ ಚಿಂತೆ ಮೂಡಿಸಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ