ಆ್ಯಪ್ನಗರ

ಪೌರ ಕಾರ್ಮಿಕರಿಗೆ ಸನ್ಮಾನ ಹಾಗೂ ವಿಶೇಷಚೇತನರಿಗೆ ಸಲಕರಣೆ ವಿತರಣೆ

ಬ್ಯಾಡಗಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ರಾಜ್ಯದಲ್ಲಿ 40 ಲಕ್ಷ ಕ್ಕೂ ಅಧಿಕ ಸದಸ್ಯರು ಆರ್ಥಿಕ ಸಹಾಯ ಪಡೆದುಕೊಂಡಿದ್ದು, ಪ್ರಮುಖವಾಗಿ ಮಹಿಳೆಯರು ಮುಖ್ಯವಾಹಿನಿಗೆ ಬಂದು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹೇಳಿದರು.

Vijaya Karnataka 28 Jun 2019, 5:00 am
ಬ್ಯಾಡಗಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ರಾಜ್ಯದಲ್ಲಿ 40 ಲಕ್ಷ ಕ್ಕೂ ಅಧಿಕ ಸದಸ್ಯರು ಆರ್ಥಿಕ ಸಹಾಯ ಪಡೆದುಕೊಂಡಿದ್ದು, ಪ್ರಮುಖವಾಗಿ ಮಹಿಳೆಯರು ಮುಖ್ಯವಾಹಿನಿಗೆ ಬಂದು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹೇಳಿದರು.
Vijaya Karnataka Web HVR-27BYD1D


ತಾಲೂಕಿನ ಕಾಗಿನೆಲೆ ಗ್ರಾಮದ ಶ್ರೀ ಕನಕ ಕಲಾಭವನದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ಗುರುವಾರ ಆಯೋಜಿಲಾಗಿದ್ದ ಧಾರವಾಡ ಪ್ರಾದೇಶಿಕ ವ್ಯಾಪ್ತಿಯ ಪ್ರಸ್ತುತ ಆರ್ಥಿಕ ವರ್ಷದಲ್ಲಿ ರಚಿಸಲಾದ 5555 ಸ್ವಸಹಾಯ ಸಂಘಗಳ ಉದ್ಘಾಟನೆ, ಪೌರ ಕಾರ್ಮಿಕರಿಗೆ ಸನ್ಮಾನ ಹಾಗೂ ವಿಶೇಷಚೇತನರಿಗೆ ಸಲಕರಣೆ ವಿತರಣೆ ಮತ್ತು ರಾಜ್ಯ ಮಟ್ಟದ ಸ್ವಾಸ್ಥ್ಯ ಸಂಕಲ್ಪ ಕಾರ‍್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭಗವಂತನ ಆಶಯದಂತೆ ಸೇವೆ: ಅನ್ನದಾನ, ವಿದ್ಯಾದಾನ, ಔಷಧದಾನ ಸೇರಿದಂತೆ ಅಭಯ ದಾನಗಳು ಧರ್ಮಸ್ಥಳ ಮಂಜುನಾಥನಿಗೆ ಅತ್ಯಂತ ಪ್ರಿಯವಾದವುಗಳು. ಅವರ ಪ್ರೇರಣೆಯಿಂದಲೇ ನಿತ್ಯ ಧರ್ಮಸ್ಥಳದಲ್ಲಿ ಅನ್ನದಾನ, ರಾಜ್ಯ ಮೂಲೆ ಮೂಲೆಯಲ್ಲಿ ವಿದ್ಯಾಲಯಗಳ ನಿರ್ಮಾಣ ಮಾಡಿ ವಿದ್ಯಾದಾನ ಹಾಗೂ ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ ಆಸ್ಪತ್ರೆಗೆ ಸುಮಾರು 5 ಕೋಟಿ ಅನುದಾನ ನೀಡಿ ಔಷಧದಾನ ಮಾಡಲಾಗುತ್ತಿದೆ. ಇನ್ನೂ ಗ್ರಾಮಾಭಿವೃದ್ಧಿ ಸಂಘದಡಿ ಎಲ್ಲರಿಗೂ ಸ್ವಸಹಾಯ ಮಾಡುವ ಮೂಲಕ ಅಭಯದಾನ ಮಾಡಿ ಬದುಕುವ ಕಲೆ ತಿಳಿಸಲಾಗುತ್ತಿದೆ ಎಂದರು.

ಸಹಾಯಧನ ಹೆಚ್ಚಿಸಿ: ಶಾಸಕ ವಿರೂಪಾಕ್ಷ ಪ್ಪ ಬಳ್ಳಾರಿ ಮಾತನಾಡಿ, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರಿಗೆ ಆರ್ಥಿಕ ಸೌಲಭ್ಯ ಒದಗಿಸಿದ್ದಾರೆ. ಸ್ವಹಾಯ ಸಂಘಗಳ ಮೂಲಕ ನೀಡುತ್ತಿರುವ ಕಿರು ಧನ ಸಹಾಯನ್ನು ಇನ್ನಷ್ಟು ಹೆಚ್ಚಿಸುವಂತೆ ಮನವಿ ಮಾಡಿದರು.

ಜಿಪಂ ಅಧ್ಯಕ್ಷ ಎಸ್‌.ಕೆ ಕರಿಯಣ್ಣನವರ ಮಾತನಾಡಿ, ಮಧ್ಯ ವರ್ಜನೆ ಶಿಬಿರಗಳು, ಸ್ವಸಹಾಯ ಸಂಘಗಳು ಮೂಲಕ ಸಾಲ ವಿತರಣೆ, ದೇವಸ್ಥಾನಗಳ ಜಿರ್ಣೋದ್ಧಾರ, ಆಸ್ಪತ್ರೆ, ವಿದ್ಯಾಲಯಗಳ, ನಿರ್ಮಾಣ ಮಾಡಿ ರಾಜ್ಯದ ಜನತೆ ಪಾಲಿಗೆ ನಡೆದಾಡುವ ದೇವರಾಗಿರುವ ವೀರೇಂದ್ರ ಹೆಗ್ಗಡೆಯವರದು ಸಾರ್ಥಕ ಬದುಕು ಎಂದರು.

ಸಾನಿಧ್ಯ ವಹಿಸಿದ್ದ ಹಾವೇರಿ ಹೊಸಮಠದ ಬಸವ ಶಾಂತಲಿಂಗ ಶ್ರೀಗಳು ಮಾತನಾಡಿ, ಪ್ರತಿಯೊಬ್ಬರಿಗೂ ಶಿಸ್ತು, ಸ್ವಚ್ಛತೆ, ಉಳಿತಾಯ, ಉದ್ಯೋಗ, ಸಂಯಮ ಅತ್ಯಂತ ಮುಖ್ಯವಾಗಿದ್ದು ಇವೆಲ್ಲವನ್ನು ಪಡೆಯಬೇಕಾದಲ್ಲಿ ಶಿಕ್ಷ ಣದ ಅವಶ್ಯಕತೆ ಬಹಳಷ್ಟಿದೆ ಎಂದರು.

ವೇದಿಕೆಯಲ್ಲಿ ಎಡಿಬಿಐ ಬ್ಯಾಂಕ ವ್ಯವಸ್ಥಾಪಕ ವಿ.ವಾಸುದೇವನ್‌, ಜನಜಾಗೃತಿ ವೇದಿಕೆಯ ಸತೀಶ ಹೊನ್ನವಳ್ಳಿ, ಕಾಗಿನೆಲೆ ಪ್ರಾಧಿಕಾರದ ಆಯುಕ್ತ ಮಲ್ಲೇಶಪ್ಪ ಹೋರಪೇಟ, ಕಾಗಿನೆಲೆ ಗ್ರಾಪಂ ಅಧ್ಯಕ್ಷೆ ಹೈಯಾತಬಿ ಮತ್ತಿಹಳ್ಳಿ, ಪುರಸಭೆ ಮುಖ್ಯಾಧಿಕಾರಿ ವಿ.ಎಂ.ಪೂಜಾರ, ಮುತ್ತಣ್ಣ ಎಲಿಗಾರ, ಎಪಿಎಂಸಿ ನಿರ್ದೇಶಕಿ ವನಿತಾ ಗುತ್ತಲ, ಮುರಿಗೆಪ್ಪ ಶೆಟ್ಟರ ಇನ್ನಿತರರು ಇದ್ದರು.

ನಗೆ ಚಟಾಕಿ: ಗ್ರಾಮೀಣ ಭಾಗದಲ್ಲಿ ಸ್ವಚ್ಛತೆ ಕುರಿತಂತೆ ಅರಿವು ಮೂಡದಿರುವುದು ಖೇದದ ಸಂಗತಿ. ಶೌಚಾಲಯ ನಿರ್ಮಾಣಕ್ಕೆ ಕೇಂದ್ರ-ರಾಜ್ಯ ಸರಕಾರಗಳು ನೀಡುವ ಅನುದಾನ ಬಳಸಿ ಶೌಚಾಲಯ ನಿರ್ಮಿಸಿ ಬಳಸಿಕೊಳ್ಳಿ, ಬದಲಾಗಿ ಅದರಲ್ಲಿ ಕೋಳಿ ಸಾಕಣೆ ಮಾಡಬೇಡಿ ಎಂದು ವೀರೇಂದ್ರ ಹೆಗ್ಗಡೆಯವರು ನಗೆ ಚಟಾಕಿ ಹಾರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ