ಆ್ಯಪ್ನಗರ

ನದಿ, ಹಳ್ಳದ ಬಳಿ ತೆರಳಬೇಡಿ

ಕುಮಾರಪಟ್ಟಣ: ಸತತ ಮಳೆಯಿಂದ ನದಿ, ಹಳ್ಳಗಳು ತುಂಬಿದ್ದು ಸಾರ್ವಜನಿಕರು ತಮ್ಮ ಮಕ್ಕಳು, ಜಾನುವಾರುಗಳನ್ನು ನದಿ ಅಥವಾ ಹಳ್ಳದ ಕಡೆಗೆ ಹೋಗಲು ಬಿಡಬಾರದು ಎಂದು ರಾಣೇಬೆನ್ನೂರು ತಾಲೂಕಾ ದಂಡಾಧಿಕಾರಿ ಸಿ ಎಸ್‌ ಕುಲಕರ್ಣಿ ಹೇಳಿದರು.

Vijaya Karnataka 9 Aug 2019, 5:00 am
ಕುಮಾರಪಟ್ಟಣ: ಸತತ ಮಳೆಯಿಂದ ನದಿ, ಹಳ್ಳಗಳು ತುಂಬಿದ್ದು ಸಾರ್ವಜನಿಕರು ತಮ್ಮ ಮಕ್ಕಳು, ಜಾನುವಾರುಗಳನ್ನು ನದಿ ಅಥವಾ ಹಳ್ಳದ ಕಡೆಗೆ ಹೋಗಲು ಬಿಡಬಾರದು ಎಂದು ರಾಣೇಬೆನ್ನೂರು ತಾಲೂಕಾ ದಂಡಾಧಿಕಾರಿ ಸಿ ಎಸ್‌ ಕುಲಕರ್ಣಿ ಹೇಳಿದರು.
Vijaya Karnataka Web dont walk near the river the ditch
ನದಿ, ಹಳ್ಳದ ಬಳಿ ತೆರಳಬೇಡಿ


ಅವರು ಗುರುವಾರ ರಾಣೇಬೆನ್ನೂರು ತಾಲೂಕಿನ ಮುದೇನೂರ ಗ್ರಾಮದ ತುಂಗಭದ್ರ ನದಿ ದಡದಲ್ಲಿ ಸಾರ್ವಜನಿಕರಿಗೆ ಜಾಗೃತಿ ಮತ್ತು ತುಂಗಭದ್ರೆಯ ಪ್ರವಾಹ ಮಟ್ಟವನ್ನು ವೀಕ್ಷಿಸಿ ಮಾತನಾಡಿದರು.

ನೆರೆಪೀಡಿತ ಮುಷ್ಟೂರು ಗ್ರಾಮಕ್ಕೂ ಭೇಟಿ ನೀಡಿದ್ದು ಅಗತ್ಯ ಗ್ರಾಮಗಳಲ್ಲಿ ಗಂಜಿ ಕೇಂದ್ರಗಳನ್ನು ಸ್ಥಾಪಿಸಲಾಗುವದು. ನದಿ ತೀರದ ಗ್ರಾಮಗಳಾದ ನಾಗೇನಹಳ್ಳಿ, ಮಾಕನೂರು, ಕವಲೆತ್ತು ಕೊಡಿಯಾಲ, ನಲವಾಗಲ, ಹಿರೇಬಿದರಿ ಐರಣಿ ಗ್ರಾಮಗಳಿಗೆ ನಮ್ಮ ಇಲಾಖೆಯ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.

ತಾಲೂಕಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ಯಾಮ್‌ ಸುಂದರ್‌ ಕಾಂಬಳೆ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಗಣೇಶ ಬಾನಿ, ಮುಖಂಡರಾದ ಮಂಜುನಾಥ ಪುಟ್ಟಕ್ಕನವರ,, ಬಿ ಐ ಗಂಗನಗೌಡ್ರ, ತಾಲೂಕಾ ಆಡಳಿತದ ಮತ್ತು ಕಂದಾಯ ಹಾಗೂ ಕೃಷಿ ಅಧಿಕಾರಿಗಳು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ