ಆ್ಯಪ್ನಗರ

ನೆರೆ ಬಾಧಿತ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಹಾನಗಲ್ಲ: ತಾಲೂಕಿನ ನೆರೆಬಾಧಿತ ಗ್ರಾಮಗಳಾದ ವರ್ದಿ, ಅಲ್ಲಾಪೂರ, ಹರನಗಿರಿ, ಹರವಿ ಮತ್ತು ಕೂಡಲ ಗ್ರಾಮಗಳಲ್ಲಿಕಾಂಕ್ರಿಟ್‌ ರಸ್ತೆ ಕಾಮಗಾರಿ ಮತ್ತಿತರ ಅಭಿವೃದ್ಧಿ ಕಾಮಗಾರಿಗಳಿಗೆ ಸಂಸದ ಶಿವಕುಮಾರ ಉದಾಸಿ ಚಾಲನೆ ನೀಡಿದರು.

Vijaya Karnataka 17 Dec 2019, 5:00 am
ಹಾನಗಲ್ಲ: ತಾಲೂಕಿನ ನೆರೆಬಾಧಿತ ಗ್ರಾಮಗಳಾದ ವರ್ದಿ, ಅಲ್ಲಾಪೂರ, ಹರನಗಿರಿ, ಹರವಿ ಮತ್ತು ಕೂಡಲ ಗ್ರಾಮಗಳಲ್ಲಿಕಾಂಕ್ರಿಟ್‌ ರಸ್ತೆ ಕಾಮಗಾರಿ ಮತ್ತಿತರ ಅಭಿವೃದ್ಧಿ ಕಾಮಗಾರಿಗಳಿಗೆ ಸಂಸದ ಶಿವಕುಮಾರ ಉದಾಸಿ ಚಾಲನೆ ನೀಡಿದರು.
Vijaya Karnataka Web drive to development works in neighboring affected villages
ನೆರೆ ಬಾಧಿತ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ


ಮಾತನಾಡಿದ ಸಂಸದ ಶಿವಕುಮಾರ ಉದಾಸಿ, ತಾಲೂಕಿನ ನೆರೆ ಪೀಡಿತ ಗ್ರಾಮಗಳಲ್ಲಿ15 ಕೋಟಿ ರೂ. ಮೊತ್ತದಲ್ಲಿವಿವಿಧ ಮೂಲ ಸೌಕರ್ಯದ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಶಾಲಾ ಕಟ್ಟಡಗಳ ನಿರ್ಮಾಣ, ರಸ್ತೆ, ಸೇತುವೆ ಸುಧಾರಣೆ ಸೇರಿದಂತೆ ಅಬ್ಬರದ ಮಳೆಯಿಂದ ಹಾನಿಗೊಂಡ ವ್ಯವಸ್ಥೆಯನ್ನು ಸರಿಗೊಳಿಸುವ ಕೆಲಸ ಮಾಡಲಾಗುತ್ತಿದೆ. ಮನೆ ಕಳೆದುಕೊಂಡವರಿಗೆ ಪರಿಹಾರ ಮೊತ್ತ ವಿತರಣೆಯೂ ನಡೆಯುತ್ತಿದೆ ಎಂದರು.

ತಾಲೂಕಿನಲ್ಲಿಒಟ್ಟು 525 ಕೆರೆಗಳಿವೆ. ಬಾಳಂಬೀಡ, ಸದ್ಯ ಚಾಲನೆಯಲ್ಲಿರುವ ಏತ ನೀರಾವರಿ ಯೋಜನೆಗಳು ಮತ್ತು ಈಗ ಹಿರೇಕಾಂಶಿ ಏತ ನೀರಾವರಿ ಅನುಷ್ಠಾನದಿಂದ 380 ಕೆರೆಗಳನ್ನು ವರದಾ ನದಿಯಿಂದ ನೀರು ತುಂಬಿಸಲು ಸಾಧ್ಯವಾಗಲಿದೆ ಎಂದರು.

ಕೇಂದ್ರದ 15 ಅಂಶಗಳ ಕಾರ್ಯಕ್ರಮಗಳ ಯಥಾವತ್ತ ಅನುಷ್ಠಾನದ ಮೂಲಕ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ರಾಜ್ಯ ಸರಕಾರ ಬದ್ಧವಾಗಿದೆ. ಕೇಂದ್ರ ಮತ್ತು ರಾಜ್ಯದಲ್ಲಿಒಂದೇ ಪಕ್ಷ ಆಡಳಿತದಲ್ಲಿಇರುವ ಕಾರಣ ಅಭಿವೃದ್ಧಿ ವೇಗ ಪಡೆಯಲಿದೆ ಎಂದರು.

ಉಪ ಚುನಾವಣಾ ಫಲಿತಾಂಶ ರಾಜ್ಯ ಸರಕಾರಕ್ಕೆ ಮತದಾರ ನೀಡಿದ ಪ್ರೋತ್ಸಾಹವಾಗಿದೆ. ಸ್ಥಿರ ಸರಕಾರಕ್ಕೆ ಸಹಕಾರ ನೀಡಿದ್ದಾರೆ. ಹಾವೇರಿ ಕಾಂಗ್ರೆಸ್‌ ಮುಕ್ತ ಜಿಲ್ಲೆಯಾಗಿದೆ ಎಂದರು. ಜಿ.ಪಂ ಸದಸ್ಯ ಮಾಲತೇಶ ಸೊಪ್ಪಿನ, ತಾ.ಪಂ ಸದಸ್ಯೆ ಚನ್ನಬಸವ್ವ ಶೀಲವಂತರ, ಗ್ರಾ.ಪಂ ಉಪಾಧ್ಯಕ್ಷ ಸುಲೇಮಾನ್‌ ಅವಲ್ಯಾನವರ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ