ಆ್ಯಪ್ನಗರ

ಮತದಾನ ಜನಜಾಗೃತಿ ಬೈಸಿಕಲ್‌ ಜಾಥಾಕ್ಕೆ ಚಾಲನೆ

ಹಿರೇಕೆರೂರ: ಮತದಾನದ ಹಕ್ಕು ಹೊಂದಿದ ಪ್ರತಿಯೊಬ್ಬ ಮತದಾರರು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸುವಂತೆ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಎಂ.ಬಿ.ಬದನಿಕಾಯಿ ಮತದಾರರಿಗೆ ಮನವಿ ಮಾಡಿದರು.

Vijaya Karnataka 5 Apr 2019, 5:00 am
ಹಿರೇಕೆರೂರ: ಮತದಾನದ ಹಕ್ಕು ಹೊಂದಿದ ಪ್ರತಿಯೊಬ್ಬ ಮತದಾರರು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸುವಂತೆ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಎಂ.ಬಿ.ಬದನಿಕಾಯಿ ಮತದಾರರಿಗೆ ಮನವಿ ಮಾಡಿದರು.
Vijaya Karnataka Web HVR-4HKR 4


ಗುರುವಾರ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಆವರಣದಲ್ಲಿ ಸ್ಕೌಟ್ಸ್‌ ಮತ್ತು ಗೈಡ್ಸ್‌ ರೋವರ್ಸ ಮತ್ತು ರೇಂಜರ್ಸಗಳ ಏರ್ಪಡಿಸಿದ್ದ ಮತದಾನ ಜಾಗೃತಿ ಬೈಸಿಕಲ್‌ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ಮತದಾನ ಅಮೂಲ್ಯವಾದುದು, ನೀವು ಮತ ಚಲಾಯಿಸಬೇಕು, ಇತರರಿಗೆ ಮತ ಚಲಾಯಿಸುವಂತೆ ತಿಳಿ ಹೇಳಬೇಕು. ರೋವರ್ಸಗಳು ಹಾಗೂ ಯುವಕರು ಇಂತಹ ಜಾಗೃತಿ ಅಭಿಯಾನದಲ್ಲಿ ಭಾಗವಹಿಸುವುದರ ಮೂಲಕ ಪ್ರಜಾಪ್ರಭುತ್ವದ ಆಶಯ ಎತ್ತಿ ಹಿಡಿಯಬೇಕು ಎಂದು ಹೇಳಿದರು. ಮತದಾನದ ಹಕ್ಕು ಹೊಂದಿದ್ದರೂ ಅನೇಕ ಮತದಾರರು ಚುಣಾವಣೆ ಸಂದರ್ಭದಲ್ಲಿ ಮತದಾನ ಮಾಡಲು ನಿರ್ಲಕ್ಷ ್ಯ ತೋರುತ್ತಾರೆ. ಈ ರೀತಿ ಮಾಡಿದರೆ ಪ್ರಜಾಪ್ರಭುತ್ವದ ಆಶಯಗಳಿಗೆ ಧಕ್ಕೆ ಉಂಟಾಗುತ್ತದೆ. ಆದ್ದರಿಂದ ಮತದಾನ ಹಕ್ಕು ಪಡೆದ ಮತದಾರರು ಕಡ್ಡಾಯವಾಗಿ ಮತಗಟ್ಟೆಗಳಿಗೆ ತೆರಳಿ ಮತಚಲಾಯಿಸಬೇಕೆಂದು ಮತದಾರರಿಗೆ ಹೇಳಿದರು.

ಸೆಕ್ಟರ್‌ ಆಫೀಸರ್‌ ಡಾ.ಎಸ್‌.ಪಿ.ಗೌಡರ ಮಾತನಾಡಿ, ಮತದಾನದ ಪ್ರಮಾಣವನ್ನು ಹೆಚ್ಚಿಸುವ ಮೂಲಕ ಪ್ರಜಾಪ್ರಭುತ್ವದ ಘನತೆಯನ್ನು ಎತ್ತಿ ಹಿಡಿಯಬೇಕು ಎಂದರು. ವಿದ್ಯಾರ್ಥಿಗಳು ಮತದಾನ ಜಾಗೃತಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಪ್ರಜ್ಞಾವಂತ ಪೌರರಾಗಿರಿ ಎಂದರು. ಜಾತಿ, ಮತ, ಭಾಷೆ ಅಥವಾ ಯಾವುದೇ ಪ್ರೇರೇಪಣೆಗಳ ದಾಕ್ಷಿಣ್ಯಕ್ಕೆ ಒಳಗಾಗದಂತೆ ಮತದಾರರನ್ನ ಜಾಗೃತಗೊಳಿಸಿ ಎಂದರು.

ಡಾ.ಎಲ್‌.ಎಂ.ಪುಜಾರ, ಪ್ರೊ.ಎಸ್‌.ಬಿ.ಭಜಂತ್ರಿ, ಪ್ರೊ. ಶಿವಾನಂದ ಸಂಗಾಪುರ, ಪ್ರೊ.ಪಿ.ಐ.ಸಿದ್ದನಗೌಡರ, ಪ್ರೊ.ಟೀನಾ, ಪ್ರೊ.ಹೇಮಲತಾ, ಪ್ರೊ.ಬಿ.ಮೀನಾಕ್ಷಿ, ಪ್ರೊ.ಡಿ.ಹರೀಶ, ರೋವರ್ಸ ಲೀಡರ್‌ ಪ್ರೊ.ಬಿ.ಎಂ.ರಾಮಚಂದ್ರಪ್ಪ, ರೇಂಜರ್ಸ ಲೀಡರ್‌ ಪ್ರೊ.ಬಿ.ಎನ್‌.ಸುಮಲತಾ, ಪ್ರೊ.ಶಿವಾನಂದ, ರೋವರ್ಸ ಉಪ ನಾಯಕ ನಾಗನಗೌಡ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪಟ್ಟಣದ ಮಹಾ ವಿದ್ಯಾಲಯದ ಆವರಣದಿಂದ ಸೈಕಲ್‌ ಜಾಥಾ ಬಸರೀಹಳ್ಳಿ, ಕಳಗೊಂಡ ಮಾರ್ಗದ ಮೂಲಕ ಶ್ರೀ ರಂಗನಾಥಸ್ವಾಮಿ ದೇವಾಲಯ ಆವರಣದವರೆಗೆ ಜರುಗಿತು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ