ಆ್ಯಪ್ನಗರ

ಶಾಲೆ ಹೆಚ್ಚಿದ್ದರೆ ಶಿಕ್ಷಣ ಶ್ರೀಮಂತ

ಹಿರೇಕೆರೂರ : ಶಿಕ್ಷ ಣದಿಂದ ಪಡೆದ ಜ್ಞಾನದ ಸಂಪತ್ತಿನಿಂದ ಸಮಾಜದಲ್ಲಿ ಎಲ್ಲವನ್ನು ಪಡೆಯಲು ಸಾಧ್ಯವಾಗುತ್ತದೆ. ಅಂತೆಯೇ ಯಾವ ದೇಶದಲ್ಲಿ ದೇವಾಲಯಗಳಿಗಿಂತ ಶಾಲೆಗಳ ಗಂಟೆ ಹೆಚ್ಚು ಬಾರಿಸುತ್ತದೆಯೋ ಅಲ್ಲಿ ಶಿಕ್ಷ ಣ ಶ್ರೀಮಂತವಾಗಿರುತ್ತದೆ ಎಂದು ಶಾಸಕ ಬಿ.ಸಿ.ಪಾಟೀಲ್‌ ಹೇಳಿದರು.

Vijaya Karnataka 28 Nov 2018, 5:00 am
ಹಿರೇಕೆರೂರ : ಶಿಕ್ಷ ಣದಿಂದ ಪಡೆದ ಜ್ಞಾನದ ಸಂಪತ್ತಿನಿಂದ ಸಮಾಜದಲ್ಲಿ ಎಲ್ಲವನ್ನು ಪಡೆಯಲು ಸಾಧ್ಯವಾಗುತ್ತದೆ. ಅಂತೆಯೇ ಯಾವ ದೇಶದಲ್ಲಿ ದೇವಾಲಯಗಳಿಗಿಂತ ಶಾಲೆಗಳ ಗಂಟೆ ಹೆಚ್ಚು ಬಾರಿಸುತ್ತದೆಯೋ ಅಲ್ಲಿ ಶಿಕ್ಷ ಣ ಶ್ರೀಮಂತವಾಗಿರುತ್ತದೆ ಎಂದು ಶಾಸಕ ಬಿ.ಸಿ.ಪಾಟೀಲ್‌ ಹೇಳಿದರು.
Vijaya Karnataka Web HVR-27HKR 5
ಹಿರೇಕೆರೂರ ತಾಲೂಕಿನ ಹಳೇನಿಡನೇಗಿಲು ಗ್ರಾಮದ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ವಿಶೇಷ ಋುತುಮಾನ ಶಾಲಾ ಕಾರ್ಯಕ್ರಮವನ್ನು ಶಾಸಕ ಬಿ.ಸಿ.ಪಾಟೀಲ್‌ ಉದ್ಘಾಟಿಸಿದರು.


ಅವರು ಮಂಗಳವಾರ ತಾಲೂಕಿನ ಹಳೇನಿಡನೇಗಿಲು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣಲ್ಲಿ ವಿಕಾಸ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ರಟ್ಟೀಹಳ್ಳಿ ಹಾಗೂ ಕ್ಷೇತ್ರ ಶಿಕ್ಷ ಣಾಧಿಕಾರಿಗಳ ಕಚೇರಿ ಆಶ್ರಯದಲ್ಲಿ ಏರ್ಪಡಿಸಿದ್ದ 2018-19ನೇ ಸಾಲಿನ ವಿಶೇಷ ಋುತುಮಾನ ಶಾಲಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ರೈತರ ಮಕ್ಕಳಿಗೆ ಅನುಕೂಲ:

ರೈತರು ಬೆಳೆದ ಬೆಳೆಗಳು ಇದೀಗ ಕಟಾವು ಆಗಿದೆ. ಇಂತಹ ಸಂದರ್ಭದಲ್ಲಿ ಕೆಲಸಗಳು ಇಲ್ಲದೆ ರೈತರು ಹಾಗೂ ರೈತ ಕೂಲಿ ಕಾರ್ಮಿಕರು ಉದ್ಯೋಗ ಹುಡುಕಿಕೊಂಡು ದೂರದ ನಗರ, ಪಟ್ಟಣಗಳಿಗೆ ವಲಸೆ ಹೋಗುವ ಸಂದರ್ಭದಲ್ಲಿ ತಮ್ಮ ಮಕ್ಕಳನ್ನು ಶಾಲೆ ಬಿಡಿಸಿ ತಮ್ಮ ಜತೆಗೆ ಕರೆದುಕೊಂಡು ಹೋಗುತ್ತಾರೆ. ಅಂತಹ ಮಕ್ಕಳು ಶಿಕ್ಷ ಣದಿಂದ ವಂಚಿತರಾಗುತ್ತಾರೆ. ಅಂತಹ ಮಕ್ಕಳನ್ನು ಶಾಲೆಯಲ್ಲಿ ಉಳಿಸಿ ಉಪಾಹಾರ ಹಾಗೂ ಊಟ ನೀಡಿ ಅಂತಹ ಮಕ್ಕಳು ಶಾಲೆಯಲ್ಲಿ ಶಿಕ್ಷ ಣ ಮುಂದುವರೆಸುವಂತಾಗಲು ಈ ಋುತುಮಾನ ಶಾಲಾ ಕಾರ್ಯಕ್ರಮ ಜಾರಿಯಾಗಿದೆ ಎಂದು ಹೇಳಿದರು.

ಈ ಯೋಜನೆ ಮಾರ್ಚ್‌ 31ರ ವರೆಗೆ ಈ ಶಾಲೆಯಲ್ಲಿ ಜಾರಿಯಲ್ಲಿರುತ್ತದೆ. ಪಾಲಕರು ತಮ್ಮ ಮಕ್ಕಳನ್ನು ತಮ್ಮ ಜತೆಗೆ ಕರೆದುಕೊಂಡು ಹೋಗದೆ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷ ಣ ಕೊಡಿಸಬೇಕು ಎಂದು ಮನವಿ ಮಾಡಿದರು. ಗ್ರಾ.ಪಂ ಅಧ್ಯಕ್ಷೆ ಸರ್ವಕ್ಕ ವಡ್ಡರ ಅಧ್ಯಕ್ಷ ತೆವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಜಿ.ಪಂ ಸದಸ್ಯೆ ಸುಮಿತ್ರಾ ಪಾಟೀಲ್‌, ಸರ್ವಜ್ಞ ವಿದ್ಯಾಪೀಠದ ಅಧ್ಯಕ್ಷ ಅಶೋಕ ಪಾಟೀಲ್‌, ಶಿಕ್ಷ ಣ ಪ್ರೇಮಿ ದೊಡ್ಡಗೌಡ ಪಾಟೀಲ್‌, ತಾ.ಪಂ ಸದಸ್ಯೆ ಪಾರಿಬಾಯಿ ಲಮಾಣಿ ಹಾಗೂ ವಿದ್ಯಾರ್ಥಿಗಳು, ಎಸ್‌ಡಿಎಂಸಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷ ಣಾಧಿಕಾರಿ ಯು.ಬಸರಾಜಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷ ಕ ಆರ್‌.ಎಸ್‌.ಹಂಚಿನಮನಿ ಸ್ವಾಗತಿಸಿದರು, ಸುಶಿಲ ನಾಡಿಗೇರ ವಂದಿಸಿದರು. ಇದೆ ಸಂದರ್ಭದಲ್ಲಿ 50 ವಿದ್ಯಾರ್ಥಿಗಳಿಗೆ ಯೋಜನೆಯಲ್ಲಿ ಅಡಕವಾಗಿರುವ ಶಿಕ್ಷ ಣ ಪರಿಕರದ ಕಿಟ್ಟುಗಳನ್ನು ವಿತರಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ