ಆ್ಯಪ್ನಗರ

ಗರ್ಭಿಣಿಯರಿಗೆ ಸೀಮಂತ ಕಾರ್ಯ

ಹಾವೇರಿ: ಜಿಲ್ಲೆಯ ಸವಣೂರ ತಾಲೂಕಿನ ಹುರಳಿಕುಪ್ಪಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ ನಡೆಯಿತು.

Vijaya Karnataka 16 Dec 2018, 5:00 am
ಹಾವೇರಿ: ಜಿಲ್ಲೆಯ ಸವಣೂರ ತಾಲೂಕಿನ ಹುರಳಿಕುಪ್ಪಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ ನಡೆಯಿತು.
Vijaya Karnataka Web exercise for pregnant women
ಗರ್ಭಿಣಿಯರಿಗೆ ಸೀಮಂತ ಕಾರ್ಯ


ಈ ವೇಳೆ ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ ಜಯಶೀಲಾ ರೊಟ್ಟಿಗವಾಡ ಉದ್ಘಾಟಿಸಿ ಮಾತಾನಾಡಿ, ಚೊಚ್ಚಲ ಗರ್ಭಿಣಿಯರಿಗೆ ಸೀಮಂತ ಕಾರ್ಯ ಮಾಡುವುದು ಭಾರತೀಯ ಸಂಸ್ಕೃತಿಯ ಒಂದು ಪ್ರತೀಕವಾಗಿದೆ. ಇಂಥ ಕಾರ್ಯಕ್ರಮದಿಂದ ಹುಟ್ಟುವ ಮಕ್ಕಳ್ಳಿಗೆ ಉತ್ತಮ ಸಂಸ್ಕಾರ ದೊರೆಯಲಿದೆ ಎಂದರು.

ಇಲಾಖೆ ಅಧಿಕಾರಿ ಪ್ರಮೀಳಾ ಕೋಟಿ ಮಾತನಾಡಿ, ಅಪೌಷ್ಠಿಕ ಆಹಾರ ಸೇವನೆಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಎಲ್ಲರೂ ಪೌಷ್ಠಿಕ ಆಹಾರ ಸೇವನೆ ಮಾಡಬೇಕು ಎಂದರು.

ತಾಲೂಕು ಪಂಚಾಯಿತಿ ಸದಸ್ಯೆ ಸವಿತಾ ಬಿಜ್ಜೂರ ಅಧ್ಶಕ್ಷ ತೆ ವಹಿಸಿದ್ದರು. ಸದಸ್ಯೆ ರತ್ನಾ ವಗ್ಗಣ್ಣನವರ, ಗ್ರಾ.ಪಂ. ಸದಸ್ಯೆ ನಿರ್ಮಲಾ ಹೊಸಳ್ಳಿ, ಗಿರಿಜವ್ವ ವಯ್ಶಾಳಿ, ಸುಶೀಲಾ ಕಡಕೋಳ, ಶಾರದಾ ತಿಪ್ಪಕ್ಕನವರ, ಅಂಗನವಾಡಿ ಮೇಲ್ವಿಚಾರಕಿ ಶೈಲಜಾ ತಳವಾರ, ಎಮ್‌.ಬಿ. ಕರ್ಜಗಿ, ಬಿ.ಎಸ್‌. ಬಸನಗೌಡ್ರ, ಜಿ.ವಾಯ್‌. ಕಲಾದಗಿ, ಜಿ.ಕೆ. ಕುಲಕರ್ಣಿ, ಜಿ.ಎಮ್‌. ತಿಪ್ಪಕ್ಕನವರ, ಎಂ.ಬಿ. ಕಟಗಿ ಸೇರಿದಂತೆ ತಾಯಂದಿರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ