ಆ್ಯಪ್ನಗರ

2-3 ತಿಂಗಳಲ್ಲಿ ಕೆರೆಗೆ ನೀರು ಬರುವ ನಿರೀಕ್ಷೆ

ರಟ್ಟೀಹಳ್ಳಿ: ಗುಡ್ಡದಮಾದಾಪುರ ಏತ ನೀರಾವರಿ ಯೋಜನೆಯಿಂದ ತಾಲೂಕಿನ ಹಲವು ಕೆರೆಗಳು ತುಂಬಲಿದ್ದು ಜನವರಿ ತಿಂಗಳಲ್ಲಿಯೇ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈಗ ಕಾಮಗಾರಿ ಬರದಿಂದ ಸಾಗಿದ್ದು 2-3 ತಿಂಗಳಲ್ಲಿ ಕೆರೆಗಳಿಗೆ ನೀರು ಬರುವ ನಿರೀಕ್ಷೆ ಇದ್ದು ಜನರು (ರೈತರು) ಕೆರೆಗೆ ನೀರು ಬರುವುದನ್ನು ಕಾತರದಿಂದ ಎದುರು ನೋಡುತ್ತಿದ್ದಾರೆ.

Vijaya Karnataka 22 May 2019, 5:00 am
ರಟ್ಟೀಹಳ್ಳಿ: ಗುಡ್ಡದಮಾದಾಪುರ ಏತ ನೀರಾವರಿ ಯೋಜನೆಯಿಂದ ತಾಲೂಕಿನ ಹಲವು ಕೆರೆಗಳು ತುಂಬಲಿದ್ದು ಜನವರಿ ತಿಂಗಳಲ್ಲಿಯೇ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈಗ ಕಾಮಗಾರಿ ಬರದಿಂದ ಸಾಗಿದ್ದು 2-3 ತಿಂಗಳಲ್ಲಿ ಕೆರೆಗಳಿಗೆ ನೀರು ಬರುವ ನಿರೀಕ್ಷೆ ಇದ್ದು ಜನರು (ರೈತರು) ಕೆರೆಗೆ ನೀರು ಬರುವುದನ್ನು ಕಾತರದಿಂದ ಎದುರು ನೋಡುತ್ತಿದ್ದಾರೆ.
Vijaya Karnataka Web HVR-21 RATTIHALLI   2,,,


ಗುಡ್ಡದಮಾದಾಪುರ ಏತ ನೀರಾವರಿ ಯೋಜನೆಯಿಂದ ಒಟ್ಟು 13 ಕೆರೆಗಳು ತುಂಬಲಿವೆ. ಗುಡ್ಡದಮಾದಾಪುರ, ಮೈದೂರು, ಹಿರೇಕಬ್ಬಾರ, ಗಲಗಿನಕಟ್ಟಿ, ತಡಕನಹಳ್ಳಿ, ಅಂಗರಗಟ್ಟಿ, ಹೊಸಕಟ್ಟಿ, ಗುಳೇದಹಳ್ಳಿ, ಗುಡ್ಡೇದಹಳ್ಳಿ, ಗಂಗೈಕೊಪ್ಪ ವ್ಯಾಪ್ತಿಯ ಕೆರೆಗಳು ತುಂಬಲಿವೆ. ಶಂಕರನಹಳ್ಳಿ ಗ್ರಾಮದ ಬಳಿಯಲ್ಲಿರುವ ತುಂಗಭದ್ರಾ ನದಿಯಿಂದ ಈ ಯೋಜನೆಯ ಮೂಲಕ ಕೆರೆಗಳನ್ನು ತುಂಬಿಸಲಾಗುತ್ತದೆ.

ಹಿಂದಿನ ಸರಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ಧರಾಮಯ್ಯ ಹಾಗೂ ನೀರಾವರಿ ಮಂತ್ರಿಯಾಗಿದ್ದ ಎಂ.ಬಿ.ಪಾಟೀಲ್‌ ಅವರು ತಾಲೂಕಿಗೆ ಹಲವು ನೀರಾವರಿ ಯೋಜನೆಗಳನ್ನು ಮಂಜೂರು ಮಾಡಿದ್ದರು. ಅದರ ಪರಿಣಾಮ 23 ಕೋಟಿ ರೂ. ವೆಚ್ಚದಲ್ಲಿ ಇಂದು ಗುಡ್ಡದಮಾದಾಪುರ ಏತ ನೀರಾವರಿ ಯೋಜನೆಯಿಂದ ಕೆರೆಗೆ ನೀರು ತುಂಬಿಸುವ ಯೋಜನೆಯ ಕಾಮಗಾರಿ ಬರದಿಂದ ಸಾಗಿದೆ. ಕೆರೆಗಳು ತುಂಬಿವುದರಿಂದ ಕೆರೆ ವ್ಯಾಪ್ತಿಯ ಸುತ್ತಮುತ್ತಲಿನ ಬೋರವೆಲ್‌ಗಳಲ್ಲಿ ನೀರಿನ ಮಟ್ಟ ಹೆಚ್ಚಾಗಲಿದ್ದು, ಇದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ.

ಈಗಾಗಲೇ ಶಂಕರನಹಳ್ಳಿ ಬಳಿ ತುಂಗಭದ್ರಾ ನದಿ ದಂಡೆಯಲ್ಲಿ ಜಾಕವೆಲ್‌ ನಿರ್ಮಾಣದ ಕಾಮಗಾರಿ ಬರದಿಂದ ಸಾಗಿದ್ದು, ಈ ಕಾಮಗಾರಿ ಮುಗಿದ ತಕ್ಷ ಣ ಜಾಕವೆಲ್‌ನಿಂದ ಕೆರೆಗೆ ಪೈಪ್‌ಲೈಲ್‌ ಅಳವಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಗುಡ್ಡದಮಾದಾಪುರ ಕೆರೆ ಸೇರಿದಂತೆ ಈ ಯೋಜನೆಯಲ್ಲಿ ಹಲವು ಕೆರೆಗಳು ತುಂಬಲಿದ್ದು ಈ ಭಾಗದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈಗಾಗಲೇ ಅನೇಕ ರೈತರ ಬೋರವೆಲ್‌ಗಳ ನೀರು ಬತ್ತಿಹೋಗಿದ್ದು, ಕೆಲವೊಂದು ಬೋರವೆಲ್‌ಗಳಲ್ಲಿ ಅಲ್ಪಪ್ರಮಾಣದಲ್ಲಿ ನೀರು ಬರುತ್ತದೆ. ಕೆರೆಗೆ ನೀರು ತುಂಬಿಸುವುದರಿಂದ ಬೋರವೆಲ್‌ಗಳಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತದೆ ಎಂಬುವುದು ಇಲ್ಲಿನ ಜನರ ಅಭಿಪ್ರಾಯ. ಕಾಮಗಾರಿ ನಿಗದಿಪಡಿಸಿದ ಅವದಿಯೊಳಗೆ ಗುಣಮಟ್ಟದಿಂದ ನಿರ್ಮಾಣಗೊಂಡು ಕೆರೆಗೆ ನೀರು ಬಂದರೆ ಸಾಕಷ್ಟು ಗ್ರಾಮದ ಜನರಿಗೆ ಅನುಕೂಲವಾಗುತ್ತದೆ ಎಂದು ಇಲ್ಲಿನ ಜನರು ಹೇಳುತ್ತಿದ್ದಾರೆ.

ಕಾಮಗಾರಿ ನಡೆಯುವ ಸ್ಥಳಕ್ಕೆ ಇತ್ತೀಚಿಗೆ ಶಾಸಕ ಬಿ.ಸಿ.ಪಾಟೀಲ್‌ ಭೇಟಿನೀಡಿ ಪರಿಶೀಲಿಸಿ ಕಾಮಗಾರಿ ಚುರುಕುಗೊಳಿಸುವಂತೆ ಹಾಗೂ ನಿಗದಿಪಡಿಸಿದ ಅವಧಿಯಲ್ಲಿ ಉತ್ತಮ ಕಾಮಗಾರಿ ಕೈಗೊಂಡು ಕೆರೆಗೆ ನೀರು ತುಂಬಿಸುವಂತೆ ಸೂಚನೆ ಕೊಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ