ಆ್ಯಪ್ನಗರ

ಅಕ್ರಮ ಪಂಪ್‌ಸೆಟ್‌ ಸಕ್ರಮಕ್ಕೆ ಅವಧಿ ವಿಸ್ತರಣೆ

ಹಾನಗಲ್ಲ: ಕೇವಲ 50 ರೂ.ದಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ಆರ್‌ಆರ್‌ ನಂಬರ್‌ ಒದಗಿಸಲಾಗುವ ಯೋಜನೆಯಡಿಯಲ್ಲಿ ಇಲ್ಲಿನ ಹೆಸ್ಕಾಂ ಕಚೇರಿಗೆ ಎರಡು ದಿನಗಳ ಅವಧಿಯಲ್ಲಿ ಸುಮಾರು 800ಕ್ಕೂ ಅಧಿಕ ರೈತರು ಶುಲ್ಕ ಭರಿಸಿ ಆರ್‌ಆರ್‌ ನಂಬರ್‌ ಪಡೆದುಕೊಂಡಿದ್ದಾರೆ.

Vijaya Karnataka 2 Dec 2018, 5:00 am
ಹಾನಗಲ್ಲ: ಕೇವಲ 50 ರೂ.ದಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ಆರ್‌ಆರ್‌ ನಂಬರ್‌ ಒದಗಿಸಲಾಗುವ ಯೋಜನೆಯಡಿಯಲ್ಲಿ ಇಲ್ಲಿನ ಹೆಸ್ಕಾಂ ಕಚೇರಿಗೆ ಎರಡು ದಿನಗಳ ಅವಧಿಯಲ್ಲಿ ಸುಮಾರು 800ಕ್ಕೂ ಅಧಿಕ ರೈತರು ಶುಲ್ಕ ಭರಿಸಿ ಆರ್‌ಆರ್‌ ನಂಬರ್‌ ಪಡೆದುಕೊಂಡಿದ್ದಾರೆ.
Vijaya Karnataka Web extension of illegal pumpset law
ಅಕ್ರಮ ಪಂಪ್‌ಸೆಟ್‌ ಸಕ್ರಮಕ್ಕೆ ಅವಧಿ ವಿಸ್ತರಣೆ


ಈ ಯೋಜನೆಯ ಲಾಭ ನ.30 ರಂದು ಶುಕ್ರವಾರ ಕೊನೆಗೊಳ್ಳಲಿದೆ ಎಂಬ ವದಂತಿಯಿಂದ ಗುರುವಾರ ಮತ್ತು ಶುಕ್ರವಾರ ಹೆಸ್ಕಾಂ ಕಚೇರಿ ಆವರಣ ರೈತರಿಂದ ತುಂಬಿತ್ತು. ಕಾಲಿಡಲು ಸಾಧ್ಯವಾಗದ ರೀತಿಯಲ್ಲಿ ನೂಕುನುಗ್ಗಲು ಏರ್ಪಟ್ಟಿತ್ತು. ಆರ್‌ಆರ್‌ ನಂಬರ್‌ ಪಡೆಯಲು ರೈತರ ಸಂಖ್ಯೆ ಹೆಚ್ಚಳದಿಂದ ಹೆಸ್ಕಾಂ ಸಿಬ್ಬಂದಿ ಕಂಗಾಲು ಆಗುವಂತೆ ಮಾಡಿತ್ತು. ಹೆಚ್ಚು ಕೌಂಟರ್‌ಗಳನ್ನು ತೆರೆದು, ಶುಲ್ಕ ಭರಿಸಿಕೊಂಡು ಆರ್‌ಆರ್‌ ನಂಬರ್‌ ನೀಡುವ ಧಾವಂತದಲ್ಲಿ ಸಿಬ್ಬಂದಿ ತೊಡಗಿದ್ದರು.

ಅವಧಿ ವಿಸ್ತರಣೆ: ಅಕ್ರಮ ಸಂಪರ್ಕದ ಕೃಷಿ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸುವ (ಆರ್‌.ಆರ್‌ ನಂಬರ್‌ ಒದಗಿಸುವ) ಪ್ರಕ್ರಿಯೆಯು ಡಿ.7ವರೆಗೆ ವಿಸ್ತರಣೆ ಮಾಡಲಾಗಿದೆ. ರೈತರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಡಿ.7 ರ ಬಳಿಕವೂ ಅಗತ್ಯ ಕಂಡು ಬಂದಲ್ಲಿ ಮತ್ತೆ ಅವಧಿ ವಿಸ್ತರಣೆ ಮಾಡಲಾಗುತ್ತದೆ ಎಂದು ಶಾಸಕ ಸಿ.ಎಂ.ಉದಾಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶುಕ್ರವಾರ ಕೊನೆಯ ದಿನ ಎಂದು ಭಾವಿಸಿ ಆರ್‌ಆರ್‌ ನಂಬರ್‌ ಪಡೆಯಲು ರೈತರು ಪೇಚಿಗೆ ಸಿಲುಕಿದ್ದಾರೆ. ಈ ಸಂದರ್ಭ ಬಳಸಿಕೊಂಡು ಮದ್ಯವರ್ತಿಗಳು ರೈತರನ್ನು ಶೋಷಿಸುವ ಸಾಧ್ಯತೆಗಳಿವೆ. ಅಕ್ರಮ ಸಂಪರ್ಕ ಹೊಂದಿರುವ ಕೃಷಿ ಪಂಪ್‌ಸೆಟ್‌ಗಳಿಗೆ ಆರ್‌ಆರ್‌ ನಂಬರ್‌ ನೀಡುವ ಮೂಲಕ ಸಕ್ರಮಗೊಳಿಸುವ ಪ್ರಕ್ರಿಯೆಯಲ್ಲಿ ಹೆಚ್ಚು ಹಣ ಪೀಕುವ ಮಾಹಿತಿಗಳು ಬರುತ್ತಿವೆ. ನಿಗದಿತ ಶುಲ್ಕ 50 ರೂ. ಹೆಸ್ಕಾಂನ ಅಧಿಕೃತ ಕೌಂಟರ್‌ನಲ್ಲಿ ಭರಿಸಿ ಆರ್‌ಆರ್‌ ನಂಬರ್‌ ಪಡೆದುಕೊಳ್ಳಬೇಕು. ಹೆಚ್ಚಿನ ಹಣ ಯಾರಾದರೂ ಕೇಳಿದರೆ (9900214399) ನೇರವಾಗಿ ಸಂಪರ್ಕಿಸುವಂತೆ ಉದಾಸಿ ತಿಳಿಸಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ