ಆ್ಯಪ್ನಗರ

ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ರೈತ ಆತ್ಮಹತ್ಯೆ

ಬ್ಯಾಡಗಿ: ಸಾಲ ಬಾಧೆ ತಾಳಲಾರದೇ ರೈತನೊಬ್ಬ ಚಲಿಸುತ್ತಿರುವ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾದ ಹೃದಯ ವಿದ್ರಾವಕ ಘಟನೆ ಬ್ಯಾಡಗಿ-ರಾಣೇಬೆನ್ನೂರ ರೈಲು ಮಾರ್ಗ ಮಧ್ಯದಲ್ಲಿಮಂಗಳವಾರ ರಾತ್ರಿ ನಡೆದಿದ್ದು, ಬುಧವಾರ ಬೆಳಗ್ಗೆ ಮೃತನ ದೇಹ ಪತ್ತೆಯಾಗಿದೆ.

Vijaya Karnataka 14 Nov 2019, 5:00 am
ಬ್ಯಾಡಗಿ: ಸಾಲ ಬಾಧೆ ತಾಳಲಾರದೇ ರೈತನೊಬ್ಬ ಚಲಿಸುತ್ತಿರುವ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾದ ಹೃದಯ ವಿದ್ರಾವಕ ಘಟನೆ ಬ್ಯಾಡಗಿ-ರಾಣೇಬೆನ್ನೂರ ರೈಲು ಮಾರ್ಗ ಮಧ್ಯದಲ್ಲಿಮಂಗಳವಾರ ರಾತ್ರಿ ನಡೆದಿದ್ದು, ಬುಧವಾರ ಬೆಳಗ್ಗೆ ಮೃತನ ದೇಹ ಪತ್ತೆಯಾಗಿದೆ.
Vijaya Karnataka Web farmer commits suicide by hitting a moving train
ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ರೈತ ಆತ್ಮಹತ್ಯೆ

ತಾಲೂಕಿಕ ಕದರಮಂಡಲಗಿ ಗ್ರಾಮದ ಹೊನ್ನಪ್ಪ ರಾಮಪ್ಪ ನಾಯ್ಕರ (42) ಮೃತ ರೈತ. ಗ್ರಾಮದ ಕೆವಿಜಿ ಬ್ಯಾಂಕನಲ್ಲಿಒಂದುವರೆ ಲಕ್ಷ ರೂ., ಇತರೆ ಸಂಘಗಳಲ್ಲಿಒಂದುವರೆ ಲಕ್ಷ ರೂ. ಸೇರಿದಂತೆ ಒಟ್ಟು ಮೂರು ಲಕ್ಷ ರೂ.ಗೂ ಅಧಿಕ ಸಾಲ ಮಾಡಿದ್ದಾಗಿ ತಿಳಿದು ಬಂದಿದೆ. ಅಲ್ಲದೇ ತನಗಿದ್ದ ಎರಡುವರೆ ಎಕರೆ ಜಮೀನಿನಲ್ಲಿಬೆಳೆದ ಬೆಳೆ ಹಾಳಾಗಿದ್ದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಗಿ ತಿಳಿದುಬಂದಿದೆ. ಈ ಕುರಿತಂತೆ ರೈಲ್ವೇ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ