ಆ್ಯಪ್ನಗರ

ಬ್ಯಾಂಕ್‌ಗೆ ರೈತರ ಮುತ್ತಿಗೆ, ಪ್ರತಿಭಟನೆ

ಸವಣೂರು: ರೈತರಿಗೆ ಋುಣಮುಕ್ತ ಪತ್ರ ವಿತರಿಸುವಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ಅನ್ನದಾತ ಕೃಷಿಕ ಸಮಾಜದ ಪದಾಧಿಕಾರಿಗಳು ಸೋಮವಾರ ಪಟ್ಟಣದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಬ್ಯಾಂಕ್‌ ಶಾಖೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

Vijaya Karnataka 23 Jul 2019, 5:00 am
ಸವಣೂರು: ರೈತರಿಗೆ ಋುಣಮುಕ್ತ ಪತ್ರ ವಿತರಿಸುವಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ಅನ್ನದಾತ ಕೃಷಿಕ ಸಮಾಜದ ಪದಾಧಿಕಾರಿಗಳು ಸೋಮವಾರ ಪಟ್ಟಣದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಬ್ಯಾಂಕ್‌ ಶಾಖೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
Vijaya Karnataka Web HVR-22SVR1


ಸವಣೂರು ತಾಲೂಕಿನ ಮಂತ್ರೋಡಿ ಗ್ರಾಮದ ಕಾರಡಗಿ, ಮರಬಸನಗೌಡ್ರ, ಗಾಳಿಗೌಡ್ರ ಸೇರಿದಂತೆ ವಿವಿಧ ರೈತರ ಋುಣಮುಕ್ತ ಪತ್ರ ನೀಡಲು ಬ್ಯಾಂಕ್‌ ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ಪಟ್ಟಣದ ಬ್ಯಾಂಕ್‌ನಲ್ಲಿ ಸಣ್ಣ ಕೆಲಸಕ್ಕಾಗಿ ನಿತ್ಯ ಅಲೆದಾಡಿಸುತ್ತಾರೆ ಎಂದು ಆರೋಪಿಸಿ ರೈತರು ಬ್ಯಾಂಕ್‌ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು.

ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಸಿಪಿಐ ಎಚ್‌.ಮೈಲಾರ ಹಾಗೂ ಸಿಬ್ಬಂದಿ ರೈತರ ಬೇಡಿಕೆ ಈಡೇರಿಸಲು ಅವಶ್ಯವಾಗಿರುವ ಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸುವಂತೆ ಬ್ಯಾಂಕ್‌ ಸಹಾಯಕ ವ್ಯವಸ್ಥಾಪಕ (ಮ್ಯಾನೇಜರ್‌) ಗಣೇಶ ಎ.ಪಿ ಅವರಿಗೆ ತಿಳಿಸಿದರು.

ಗಣೇಶ ಎ.ಪಿ ಅವರು ಕೂಡಲೇ ಬ್ಯಾಂಕ್‌ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ, ಈ ಕುರಿತು ಸಮಯ ಅವಕಾಶ ನೀಡಲು ಕೋರಿದರು. ಆದರೆ ರೈತರು ಇದು ಹತ್ತು ನಿಮಿಷದಲ್ಲಿ ಆಗುವ ಕೆಲಸ ನಾವು ಎರಡು ಗಂಟೆ ಬೇಕಾದರು ಕುಳಿತುಕೊಳ್ಳುತ್ತೆವೆ ಎಂದು ಪಟ್ಟು ಹಿಡಿದರು. ರೈತರ ಬೇಡಿಕೆಯಂತೆ ಋುಣಮುಕ್ತ ಪತ್ರ ವಿತರಿಸಲಾಯಿತು. ನಂತರ, ರೈತ ಸಂಘದ ಪದಾಧಿಕಾರಿಗಳು ಪ್ರತಿಭಟನೆ ಹಿಂದೆ ಪಡೆದರು.

ಕರ್ನಾಟಕ ಅನ್ನದಾತ ಕೃಷಿಕ ಸಮಾಜದ ರಾಜ್ಯ ಅಧ್ಯಕ್ಷ ಶಿವಾನಂದ ಯಲಿಗಾರ, ಪದಾಧಿಕಾರಿಗಳಾದ ಸಿದ್ದನಗೌಡ ಪಾಟೀಲ, ಶಂಕ್ರಣ್ಣ ಅರಗೋಳ, ಶಂಕರಗೌಡ ಪಾಟೀಲ, ಬಸವರಾಜ ಅಕ್ಕಿ, ಗದಿಗೇಪ್ಪ ಗುದಗಿ, ಓಂಕಾರಗೌಡ ಪಾಟೀಲ, ವಿರೇಶ ದೊಡ್ಡಮನಿ, ಬಸಲಿಂಗಪ್ಪ ಬ್ಯಾಳಿ ಹಾಗೂ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ