ಆ್ಯಪ್ನಗರ

ದಲಿತರಿಂದ ಫೆಬ್ರುವರಿ ಸಮಾವೇಶ

ಹಾವೇರಿ: ದಲಿತ ಸಮುದಾಯದ ಬೇಡಿಕೆಗಳ ಈಡೇರಿಕೆಗಾಗಿ ಫೆಬ್ರುವರಿ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದ್ದು, ಜಿಲ್ಲಾಪದಾಧಿಕಾರಿಗಳು ತಮಗೆ ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವ ಮೂಲಕ ಸಮಾವೇಶ ಯಶಸ್ವಿಗೊಳಿಸಬೇಕು ಎಂದು ಡಿಎಸ್‌ಎಸ್‌ ರಾಜ್ಯ ಸಮಿತಿ ಸದಸ್ಯ ಉಡಚಪ್ಪ ಮಾಳಗಿ ಹೇಳಿದರು.

Vijaya Karnataka 10 Jan 2020, 5:00 am
ಹಾವೇರಿ: ದಲಿತ ಸಮುದಾಯದ ಬೇಡಿಕೆಗಳ ಈಡೇರಿಕೆಗಾಗಿ ಫೆಬ್ರುವರಿ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದ್ದು, ಜಿಲ್ಲಾಪದಾಧಿಕಾರಿಗಳು ತಮಗೆ ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವ ಮೂಲಕ ಸಮಾವೇಶ ಯಶಸ್ವಿಗೊಳಿಸಬೇಕು ಎಂದು ಡಿಎಸ್‌ಎಸ್‌ ರಾಜ್ಯ ಸಮಿತಿ ಸದಸ್ಯ ಉಡಚಪ್ಪ ಮಾಳಗಿ ಹೇಳಿದರು.
Vijaya Karnataka Web february conference by dalits
ದಲಿತರಿಂದ ಫೆಬ್ರುವರಿ ಸಮಾವೇಶ


ನಗರದ ಕಾಗಿನೆಲೆ ರಸ್ತೆಯ ಮುರುಘರಾಜೇಂದ್ರ ಮಠದಲ್ಲಿಡಿಎಸ್‌ಎಸ್‌ ಜಿಲ್ಲಾಪದಾಧಿಕಾರಿಗಳ ಸಭೆಯಲ್ಲಿಅವರು ಮಾತನಾಡಿದರು. ಈ ಸಭೆಯಲ್ಲಿಡಿಎಸ್‌ಎಸ್‌ ಸಂಘಟನೆಗೆ ಪೂರಕವಾಗಿ ಜಿಲ್ಲಾಪ್ರಚಾರ ಸಮಿತಿ ರಚನೆ ಮಾಡಲಾಗಿದೆ. ಜಿಲ್ಲಾಧ್ಯಕ್ಷರಾಗಿ ನಿಂಗಪ್ಪ ಕಡೂರ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.

ಸಂಘಟನೆಗೆ ಎಲ್ಲರ ಸಹಕಾರ ನೀಡುವಂತಾಗಬೇಕಾಗಿದೆ. ಇತ್ತೀಚಿನ ರಾಜಕೀಯ ಬೆಳವಣಿಗೆ ನೋಡಿದಾಗ ದಲಿತ ಸಮುದಾಯದ ಗೋವಿಂದ ಕಾರಜೋಳ ಉಪಮುಖ್ಯಮಂತ್ರಿಯಾಗಿ ಇದ್ದಾರೆ. ಬಿಜೆಪಿ ಹಲವರು ಉಪಮುಖ್ಯಮಂತ್ರಿ ಹುದ್ದೆ ತೆಗೆಯಬೇಕು ಎಂಬ ಮಾತು ಕೇಳಿ ಬರುತ್ತಿದೆ. ನಮ್ಮ ನಾಯಕರಿಗೆ ಅನ್ಯಾಯವಾದರೆ ರಾಜ್ಯದ ತುಂಬಾ ಉಗ್ರ ಹೋರಾಟ ಮಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಮಾಲತೇಶ ಯಲ್ಲಾಪೂರ ಮಾತನಾಡಿದರು. ಮಂಜಪ್ಪ ಮರೋಳ, ನಿಂಗಪ್ಪ ಕಡೂರ, ಬಸವಣ್ಣ ಮುಗಳಿ, ಸಂಜೀಯಗಾಂಧಿ ಸಂಜೀವಣ್ಣನವರ, ರಂಗಪ್ಪ ಮೈಲಮ್ಮನವರ, ಪ್ರಶಾಂತ ತಿರಕಪ್ಪನವರ, ರಾಜು ಮಾದರ, ಗುಡ್ಡಪ್ಪ ಚಿಕ್ಕಪ್ಪನವರ, ನಿಂಗಪ್ಪ ನಿಂಬಕ್ಕನವರ, ಮಾಲತೇಶ ಕನ್ನಮ್ಮನವನ, ಸುರೇಶ ಹಳ್ಳಳ್ಳಿಕುಮಾರ, ಹುಚ್ಚಮ್ಮನವರ, ಕುತ್ಬುದ್ದೀನ ದೇವಿಹೊಸೂರ, ಮಂಜುನಾಥ ಬಿ., ಹನಮಂತ ಹರಿಜನ, ಪರಶುರಾಮ ಹರಿಜನ, ಭೀಮಪ್ಪ ಮುದಕ್ಕಮ್ಮನವರ, ಪ್ರಭುಲಿಂಗ ನಡುವಿನಮನಿ, ಶಿವಾಜಿ ದೊಡ್ಡಮನಿ ಸೇರಿದಂತೆ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ